ಶಾರುಖ್‌ ಖಾನ್‌ ಗೆ ರಾಷ್ಟ್ರಪ್ರಶಸ್ತಿ: ಟೀಕೆ

ಬಾಲಿವುಡ್‌ ಕಿಂಗ್‌ ಖಾನ್  ಶಾರುಖ್ ಖಾನ್​​  ‘ಜವಾನ್’ ಚಿತ್ರದ   ಅಭಿನಯಕ್ಕಾಗಿ 71ನೇ ರಾಷ್ಟ್ರೀಯ  ಅತ್ಯುತ್ತಮ ನಟ ಚಲನಚಿತ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಶಾರುಖ್‌ ಖಾನ್‌ ಗೆ ರಾಷ್ಟ್ರಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ  ಟೀಕೆಗಳು ವ್ಯಕ್ತವಾಗುತ್ತಿದೆ.

ಶಾರುಖ್‌ ಖಾನ್‌ ಗೆ  33 ವರ್ಷದ ಪಯಣದಲ್ಲಿ ಮೊದಲ ಬಾರಿಗೆ  ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ.   ಕಿಂಗ್‌ ಖಾನ್‌ ನೂರಾರು ಫಿಲ್ಮ ಅವಾರ್ಡ್‌ ಅವಾರ್ಡ್‌ ಗೆ ಮುತ್ತಿಟ್ಟಿದ್ದಾರೆ. ಆದರೆ ಶಾರುಖ್‌ ಖಾನ್‌   ಲಾಭಿ ಮಾಡಿ ಪ್ರಶಸ್ತಿ ತಗೊಂಡ್ರಾ ಎಂಬ ಮಾತು ಕೇಳಿ ಬರುತ್ತಿದೆ.

‘ಜವಾನ್’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡುವಂಥಹದ್ದು ಏನಿತ್ತು?  ಶಾರುಖ್ ಖಾನ್‌ಗೆ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದ್ದರೂ ಈ ಚಿತ್ರಕ್ಕೆ ಎನ್ನುವುದು ಯಾಕೋ ಸಮಂಜಸ ಎನಿಸುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ.

ಶಾರುಖ್ ಖಾನ್​​  ‘ಸ್ವದೇಶ್’ ಹಾಗೂ ‘ಚಕ್‌ ದೇ ಇಂಡಿಯಾ’ ಚಿತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಆಗ ರಾಷ್ಟ್ರಪ್ರಶಸ್ತಿ ಕೊಡಬೇಕಿತ್ತು.  ಒಂದೇ ಪ್ರಶಸ್ತಿಯನ್ನು ಹೀಗೆ ಇಬ್ಬರಿಗೆ ಹಂಚುವುದು ಕೂಡ ಸರಿಯಾದ ನಿರ್ಧಾರ ಅಲ್ಲ. ಕಮರ್ಷಿಯಲ್ ಸಿನಿಮಾಗಳಿಗೆ ಪ್ರಶಸ್ತಿ ಕೊಡಬೇಕು ಎನ್ನುವ ಕಾರಣಕ್ಕೆ ‘ಜವಾನ್’ ಚಿತ್ರಕ್ಕೆ ಕೊಟ್ಟಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಶಾರುಖ್ ತಮ್ಮ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ‘ಜವಾನ್’  ಚಿತ್ರ ನಿರ್ಮಾಣ ಮಾಡಿದ್ದರು.  ಅಟ್ಲಿ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಸದ್ಯ ಶಾರುಖ್‌ ತಮ್ಮ ಮಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

—-

 

This Article Has 7 Comments
  1. Pingback: androxal overnight no script mastercard accepted

  2. Pingback: how to order enclomiphene generic online uk

  3. Pingback: how to buy xifaxan uk how to get

  4. Pingback: purchase staxyn online safe

  5. Pingback: discount dutasteride purchase prescription

  6. Pingback: how to order fildena usa sales

  7. Pingback: nákup kamagra austrálie

Leave a Reply

Your email address will not be published. Required fields are marked *

Translate »
error: Content is protected !!