ಬೆಂಗಳೂರು: ನಟ ಅಜಯ್ ರಾವ್ ದಂಪತಿಗೆ ಶುಕ್ರವಾರ ಹೆಣ್ಣು ಮಗುವಾಗಿದೆ. ನಟ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮ ಜತೆ ಸೆಲ್ಫೀ ತೆಗೆಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜಯ್ ರಾವ್ ಅವರು 2014ರಂದು ಡಿ.14ರಂದು ಸ್ವಪ್ನ ಅವರ ಜತೆ ತುಂಬಾ ಸರಳವಾಗಿ ಮದುವೆಯಾಗಿದ್ದರು. ಇದೀಗ ಹೆಣ್ಣು ಮಗುವಿನ ತಂದೆಯಾದ ಅಜಯ್ ಗೆ ಅಭಿಮಾನಿಗಳಿಂದ ಶುಭಾಶಗಳು ಬರುತ್ತಿದೆ.
ಈ ಹಿಂದೆ ಅಜಯ್ ಅವರು ಪತ್ನಿ ಸ್ ವಪ್ನ ಅವರು ಗಣೇಶನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
Be the first to comment