Pavithra Lokesh: ಪವಿತ್ರಾ ಲೋಕೇಶ್ ಬಗ್ಗೆ ನರೇಶ್ ಹೇಳಿದ್ದೇನು?

ಸುಂದರವಾಗಿರುವ ಹುಡುಗಿಯನ್ನು ಕಂಡಾಗ ನನ್ನ ಬೆಡ್​ರೂಮ್​ನಲ್ಲಿರಬೇಕು ಎನಿಸುತ್ತದೆ. ಆದರೆ ಪವಿತ್ರಾ ಲೋಕೇಶ್ ನ್ನು ನೋಡಿದಾಗ ಹಾಗೆ ಅನಿಸಲಿಲ್ಲ. ಅವಳು ನನ್ನ ಅಡುಗೆ ಕೋಣೆಯಲ್ಲಿರಬೇಕು ಎಂದು ಅನಿಸಿತ್ತು ಎಂದು ತೆಲುಗು ನಟ ನರೇಶ್ ಹೇಳಿದ್ದಾರೆ.

ನರೇಶ್ ಅವರು ಮತ್ತೆ ಮದುವೆ ಸಿನಿಮಾದ ಪ್ರಮೋಷನ್ ವೇಳೆ ತಮ್ಮ ಹಾಗೂ ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಬಗ್ಗೆ ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪವಿತ್ರಾ ಲೋಕೇಶ್ ಅವರನ್ನು ಮೊದಲ ಬಾರಿಗೆ ನೋಡಿದಾಗಲೇ ನರೇಶ್ ಅವರಿಗೆ ಲವ್ ಆಗಿತ್ತಂತೆ. ಅಬ್ಬಾ! ಎಷ್ಟು ಸುಂದರಿ ಇವಳು ಎಂದು ಪವಿತ್ರಾ ಲೊಕೇಶ್ ಅವರ ಸೌಂದರ್ಯದ ಮೋಡಿಗೊಳಗಾಗಿದ್ದೆ ಎಂದಿದ್ದಾರೆ ನರೇಶ್.

ಅಡುಗೆ ಕೋಣೆಯಲ್ಲಿ ಶೂಟಿಂಗ್ ಮಾಡುವ ದೃಶ್ಯ ಇತ್ತು. ಆ ದೃಶ್ಯದ ಶೂಟಿಂಗ್ ಸಂದರ್ಭ ನರೇಶ್ ಅವರಿಗೆ ಈ ಹುಡುಗಿ ನನ್ನ ಅಡುಗೆ ಮನೆಯಲ್ಲಿರಬೇಕು ಎಂದು ಅನಿಸಿತು ಎಂದು ಹೇಳಿದ್ದಾರೆ.

ಮಲ್ಲಿ ಪೆಲ್ಲಿ ಸಿನಿಮಾ ಮೂಲಕ ತಮ್ಮದೇ ಕಥೆ ಹೇಳಲು ಹೊರಟಿರುವ ಈ ಜೋಡಿ ಈ ಸಿನಿಮಾ ಮೂಲಕ ಸುದ್ದಿ ಮಾಡುತ್ತಿದ್ದಾರೆ. ಈ ಚಿತ್ರವನ್ನು ನರೇಶ್ ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾದಲ್ಲಿ ನರೇಶ್, ಪವಿತ್ರಾ ಲೋಕೇಶ್ ಅವರ ಜೀವನ, ಸಂಬಂಧ, ರಮ್ಯಾ ರಘುಪತಿ ಅವರ ಪಾತ್ರ ಎಲ್ಲವನ್ನೂ ತೋರಿಸಲಾಗಿದೆ. ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ರಮ್ಯಾ ರಘುಪತಿ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದಾರೆ.

ತೆಲುಗು ನಟ ನರೇಶ್ ಇಬ್ಬರಿಗೆ ಡಿವೋರ್ಸ್ ಕೊಟ್ಟು 3ನೇ ಮದುವೆ ಆಗಿದ್ದಾರೆ. 3ನೇ ಪತ್ನಿ ರಮ್ಯಾ ರಘುಪತಿಯಿಂದಲೂ ದೂರವಾಗಿರುವ ಅವರು ಈಗ ಪವಿತ್ರಾ ಲೋಕೇಶ್‌ ಜೊತೆಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!