ನಾರಾಯಣ ನಾರಾಯಣ

‘ನಾರಾಯಣ ನಾರಾಯಣ’ ಚಿತ್ರದ ಟ್ರೈಲರ್ ರಿಲೀಸ್

ನಾರಾಯಣ ನಾರಾಯಣ, ಸ್ಯಾಂಡಲ್‌ವುಡ್ ನಲ್ಲಿ ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿರುವ ಹೊಸಬರ ಸಿನಿಮಾ. ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಹೊಸ ಪ್ರತಿಭೆಗಳಿಗೇನು ಕಮ್ಮಿ ಇಲ್ಲ. ಅನೇಕ ಕಲಾವಿದರು ತಂತ್ರಜ್ಞರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ನಾರಾಯಣ ನಾರಾಯಣ ಸಿನಿಮಾ ಮೂಲಕ ಅನೇಕ ಹೊಸ ಪ್ರತಿಭೆಗಳ ಎಂಟ್ರಿಯಾಗಿದೆ. ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಈ ಸಿನಿಮಾಗೆ ಶ್ರೀಕಾಂತ್ ಕೆಂಚಪ್ಪ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಅನೇಕ ಹೊಸ ಕಲಾವಿದರ ಜೊತೆಗೆ ಕಾಮಿಡಿ ನಟ, ಮಜಾ ಟಾಕಿಸ್ ಖ್ಯಾತಿಯ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ನಾರಾಯಣ ನಾರಾಯಣ ಸಿನಿಮಾತಂಡ ಟ್ರೈಲರ್ ಲಾಂಚ್ ಮಾಡುವ ಮೂಲಕ ಮಾಧ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾದ ಎರಡು ಹಾಡುಗಳು ಮತ್ತು ಟ್ರೈಲರ್ ಅನ್ನು ರಿಲೀಸ್ ಮಾಡುವ ಮೂಲಕ ಚಿತ್ರಾಭಿಮಾನಿಗಳನ್ನು ಚಿತ್ರಮಂದಿರಕ್ಕೆ ಆಹ್ವಾನ ನೀಡಿದೆ ಚಿತ್ರತಂಡ.

ನಾರಾಯಣ ನಾರಾಯಣ

ಎರಡು ಸುಂದರ ಹಾಡುಗಳು ಗಮನ ಸೆಳೆಯುತ್ತಿವೆ. ಸತ್ಯ ರಾಧಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಕೃಷ್ಣನ ಬಗ್ಗೆ ಇರುವ ಹಾಡು ಹಾಗೂ ಖ್ಯಾತ ಚಿತ್ರಸಾಹಿತಿ ಕವಿರಾಜ್ ಅವರು ಬರೆದಿರುವ ರೊಮ್ಯಾಂಟಿಂಕ್ ಹಾಡು ಕೇಳಲು ಇಂಪಾಗಿದ್ದು ನಾರಾಯಣ ನಾರಾಯಣ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ಸಿನಿಮಾತಂಡ ನಾಲ್ಕು ವರ್ಷಗಳಿಂದ ಸಿನಿಮಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಅದ್ಭುತವಾಗಿ ಸಿನಿಮಾ ಮಾಡಿದ್ದೇವೆ ಎಂದರು. ನಾರಾಯಣ ನಾರಾಯಣ ಕೃಷ್ಣಪ್ಪ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ.

ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ನಿರ್ದೇಶಕ ಶ್ರೀಕಾಂತ್, ‘ನಾರಾಯಣ ನಾರಾಯಣ ನಾಲ್ಕು ವರ್ಷದ ಶ್ರಮ. ಚಿತ್ರೀಕರಣ ಎಲ್ಲಾ ಮುಗಿಸಿ ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಡೀ ತಂಡ ಜೊತೆಯಲ್ಲಿ ನಿಂತಿದೆ’ ಎಂದು ಹೇಳಿದರು.

ನಿರ್ಮಾಪಕ ಕೃಷ್ಣಪ್ಪ ಅವರು ಮಾತನಾಡಿ, ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿ ಚಿತ್ರರಂಗದ ಸಹವಾಸವೇ ಬೇಡ ಅಂತ ಇದ್ದೆ ಆದರೆ ನಿರ್ದೇಶಕ ಶ್ರೀಕಾಂತ್ ಅವರ ಕೃಷ್ಣನ ಕಥೆ ಕೇಳಿ ಇಷ್ಟವಾಯಿತು. ನಾವು ಕೂಡ ಕೃಷ್ಣನ ಭಕ್ತರು. ಹಾಗಾಗಿ ಈ ಸಿನಿಮಾ ಮಾಡಲು ಒಪ್ಪಿಕೊಂಡೆ’ ಎಂದು ಹೇಳಿದರು.

ನಾರಾಯಣ ನಾರಾಯಣ

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕೃಷ್ಣನಾಗಿ ಮಿಂಚಿರುವ ಕಾಮಿಡಿ ನಟ ಮತ್ತು ಮಜಾ ಟಾಕಿಸ್ ಖ್ಯಾತಿಯ ಪವನ್ ಮಾತನಾಡಿ, ‘ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ. ಓಟಿಟಿ ನಲ್ಲಿ ಸಿನಿಮಾ ಬರುತ್ತೆ ಅಂತಾ ಕಾಯಬೇಡಿ’ ಎಂದು ಹೇಳಿದರು.

ಇನ್ನೂ ಸಿನಿಮಾ ಮತ್ತೊಂದು ವಿಶೇಷ ಎಂದರೆ ನಾರಾಯಣ ನಾರಾಯಣ ಸಿನಿಮಾದ ತುಳು ರೈಟ್ಸ್ ಈಗಾಗಲೇ ಮಾರಾಟವಾಗಿದೆ. ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ನಿರ್ಮಾಪಕ ಕೃಷ್ಣಪ್ಪ ಅವರು ಬಹಿರಂಗ ಪಡಿಸಿ ಸಂತಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಗುರುಕಿರಣ್, ನಾಯಕಿಯಾಗಿ ಬಿಂಬಿಕಾ, ಕೀರ್ತಿ ಕೃಷ್ಣ, ದರ್ಶನ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಈ ಸಿನಿಮಾದ ವಿತರಣೆ ಹಕ್ಕನ್ನು ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ಪಡೆದುಕೊಂಡಿದ್ದಾರೆ. ಒಟ್ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ನಾರಾಯಣ ನಾರಾಯಣ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

ನಾರಾಯಣ ನಾರಾಯಣ

Be the first to comment

Leave a Reply

Your email address will not be published. Required fields are marked *

Translate »
error: Content is protected !!