‘ನರಗುಂದ ಬಂಡಾಯ’ ಟ್ರೇಲರ್ ರಿಲೀಸ್ಒಂ ದೇ ದಿನಕ್ಕೆ 28 ಸಾವಿರಕ್ಕೂ ಹೆಚ್ಚು ವೀಕ್ಷಣೆ!
1980 ಜುಲೈ 21ರಂದು. ಐತಿಹಾಸಿಕ ರೈತ ಚಳವಳಿಯ ಕಥೆಯನ್ನೇ ಇಟ್ಟುಕೊಂಡು ನಿರ್ಮಾಣವಾದ ಚಿತ್ರ ‘ನರಗುಂದ ಬಂಡಾಯ’.ಚಿತ್ರದ ಟ್ರೇಲರ್ನ್ನು ಹ್ಯಾಟ್ರಿಕ್ ಹೀರೊ ಶಿವ ರಾಜ್ಕುಮಾರ್ ಇಂದು ಬಿಡುಗಡೆ ಮಾಡಿದರು. ನೈಜ ಘಟನೆಯಾಧಾರಿತ ಚಿತ್ರಕ್ಕೆ ನಾಗೇಂದ್ರ ಮಾಗಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
“ಟ್ರೇಲರ್ ತುಂಬ ಚೆನ್ನಾಗಿ ಮೂಡಿಬಂದಿದೆ. ವಿಸ್ಯುವಲ್ಸ್ ತುಂಬ ಚನ್ನಾಗಿ ಮೂಡಿ ಬಂದಿದೆ. ಇಂತಹ ಸಿನಿಮಾಗಳು ಚನ್ನಾಗಿ ಓಡಬೇಕು. ಮಹಾದಾಯಿ ವಿಷಯದಲ್ಲಿ ಸಿಹಿ ಸುದ್ದಿ ಸಿಕ್ಕಿರುವ ಈ ಸಂದರ್ಭದಲ್ಲಿ ಇಂತಹ ಸಿನಿಮಾ ಬಿಡುಗಡೆಯಾಗಬೇಕು” ಎಂದು ಟ್ರೇಲರ್ ಬಿಡುಗಡೆ ಮಾಡಿದ ನಟ ಶಿವರಾಜ್ಕುಮಾರ್ ಹೇಳಿದರು.ರಕ್ಷ್ ನಾಯಕ ನಟನಾಗಿದ್ದು ಶುಭಾ ಪೂಂಜಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಥೆ ಬರೆದು ನಿರ್ಮಾಣದ ಹೊಣೆ ಹೊತ್ತಿರುವುದು ಎಸ್.ಜಿ. (ಸಿದ್ದೇಶ) ವಿರಕ್ತಮಠ, ಯಶೋವರ್ಧನ್ ಅವರು ಸಂಗೀತ ಸಂಯೋಜಿಸಿದ್ದಾರೆ. ಜಮೀನುಗಳಿಗೆ ನೀರು ಹರಿಯದಿದ್ದರೂ ಅಭಿವೃದ್ಧಿ ಕರ ಪಾವತಿಸಬೇಕೆಂಬ ಸರ್ಕಾರದ ಆದೇಶ ರದ್ದತಿಗೆ ಆಗ್ರಹಿಸಿ ರೈತರು ಬಂಡಾಯವೆದ್ದಿದ್ದರು. ಆದರೆ ಇದಕ್ಕೆ ಸರ್ಕಾರ ರೈತರ ಹೋರಾಟಕ್ಕೆ ಸೊಪ್ಪು ಹಾಕಲಿಲ್ಲ.ನೀರು ಬಂದೇ ಇಲ್ಲ ನಾವ್ಯಾಕೆ ತೆರಿಗೆ ಕಟ್ಟೋಣ? ಎಂದು ಕಾಲುವೆ ವ್ಯಾಪ್ತಿಯ ಗ್ರಾಮಗಳ ಸಾವಿರಾರು ರೈತರು 1980 ಜು. 21ರಂದು ಮೆರವಣೆಗೆ ನಡೆಸಿದ್ದರು. ಆಗ ಕಲ್ಲು ತೂರಾಟ, ಲಾಠಿ ಪ್ರಹಾರ ನಡೆದಿತ್ತು.
ಗಲಾಟೆ ತಾರಕಕ್ಕೇರಿ ಪೋಲಿಸರು ಹಾರಿಸಿದ ಗುಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವ ರೈತ ವೀರಪ್ಪ ಕಡ್ಲಿಕೊಪ್ಪ ಎಂಬುವವರಿಗೆ ತಾಗಿ ಮೃತಪಟ್ಟಿದ್ದರು. ಈತನ ಮತ್ತು ಅಲ್ಲಿನ ನೈಜ ಘಟನೆಯನ್ನು ನರಗುಂದ ಬಂಡಾಯ ಚಿತ್ರದ ತಿರುಳು.
Be the first to comment