ಕಾಮಿಡಿ ಕಿಲಾಡಿಗಳು ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್.ಕೆ.ಆರ್.ಪೇಟೆ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ನಾನು ಮತ್ತು ಗುಂಡ’ ತೆರೆಗೆ ಬರಲು ಸಿದ್ದವಾಗಿದೆ. ಗುಂಡ ಅಂದರೆ ನಾಯಿ. ಇದು ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ. ಇಂತಹ ಸಾಕು ಪ್ರಾಣಿಗಳು ಎಂಥ ಪಾತ್ರವಹಿಸುತ್ತವೆ. ಹಾಗೆಯೇ ಇದನ್ನೆ ಇಟ್ಟುಕೊಂಡು ಯಾವ ರೀತಿ ದಂಧೆ ಮಾಡುತ್ತಾರೆಂದು ಹೇಳಲಾಗಿದೆ. ನಾಯಕ ಹಾಗೂ ನಾಯಿಗೂ ಭಾವನಾತ್ಮಕ ಸಂಬಂದಗಳು, ಇದರೊಂದಿಗಿನ ಪ್ರೀತಿಯ ವಿಷಯಗಳು. ದಂಪತಿಯೊಬ್ಬರು ನಾಯಿಯನ್ನು ಅಕ್ಕರೆಯಿಂದ ಹೇಗೆ ನೋಡಿಕೊಳ್ಳುತ್ತಿದರು, ಅವರ ಬದುಕಿನಲ್ಲಿ ಶ್ವಾನ ಎಷ್ಟು ಮಹತ್ವದ್ದಾಗಿತ್ತು. ಪ್ರೀತಿಸುವ ಪ್ರಾಣಿಗಳು ವ್ಯಕ್ತಿಗಳ ಜೀವನದಲ್ಲಿ ಏನೆಲ್ಲ ಪಾತ್ರ ವಹಿಸುತ್ತವೆ. ಅವು ದೂರವಾದಾಗ ಎಷ್ಟೆಲ್ಲಾ ನೋವುಗಳನ್ನು ಅನುಭವಿಸುತ್ತಾರೆ ಎಂಬಂತಹ ಅಂಶಗಳು ಇರುವುದರಿಂದ ಅಡಿಬರಹದಲ್ಲಿ ಒಂದು ಮರೆಯದ ಕಥೆ ಅಂತ ಹೇಳಿಕೊಂಡಿದೆ. ಹೆಂಡತಿ ಪಾತ್ರದಲ್ಲಿ ಅಭಿನಯಿಸಿರುವ ನಾಯಕಿ ಸಂಯುಕ್ತಹೂರನಾಡು ರಿಯಲ್‍ದಲ್ಲಿ ಪ್ರಾಣಿಪ್ರಿಯೆ, ಗುಂಡ ಹೆಸರಿನ ನಾಯಿ ಕೂಡ ಅವರ ಮನೆಯಲ್ಲಿ ಇತ್ತಂತೆ. ಅದು ಅಗಲಿದಾಗ ಅವರು ಅನುಭವಿಸಿದ ನೋವುಗಳು ಕೂಡ ದೃಶ್ಯದಲ್ಲಿ ಬಂದಿದೆ. ಮೇಲಾಗಿ ಪೂರ್ತಿ ಸಿನಿಮಾದ ಸಂಭಾಷಣೆಯು ಹಾಸನ ಭಾಷೆ ಧಾಟಿಯಲ್ಲಿ ಇರುವುದು ವಿಶೇಷ. ಕೆಲವು ದೃಶ್ಯಗಳಲ್ಲಿ ದೈವಕೃಪೆಯಿಂದ ಶ್ವಾನವು ಸಹಜವಾಗಿ ಅಭಿನಯಿಸಿದ್ದು, ಡಬ್ಬಿಂಗ್ ಕೂಡ ಮಾಡಿದೆಯಂತೆ. ಸಕಲೇಶಪುರ, ಹಾಸನ, ಅರಸಿಕೆರೆಯಲ್ಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಘುಹಾಸನ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಶ್ರೀನಿವಾಸ್‍ತಮ್ಮಯ್ಯ ಆಕ್ಷನ್ ಕಟ್ ಹೇಳಿದ್ದಾರೆ. ತಾರಗಣದಲ್ಲಿ ಜಿ.ಗೋವಿಂದೇಗೌಡ, ಜಿಮ್‍ರವಿ, ರಾಕ್‍ಲೈನ್‍ಸುಧಾಕರ್ ಮುಂತಾದವರು ನಟಿಸದ್ದಾರೆ. ರೋಹಿತ್‍ರಮನ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಕಾರ್ತಿಕ್‍ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಕತೆ ವಿವೇಕನಂದಾ, ಕಲಾವಿದರ ಮಾತುಗಳಿಗೆ ಶರತ್‍ಚಕ್ರವರ್ತಿ ಪದಗಳನ್ನು ಪೋಣಿಸಿದ್ದಾರೆ. ಛಾಯಾಗ್ರಹಣ ಚಿದಾನಂದ, ಸೌಂಡ್ ಡಿಸೈನ್ ನವೀನ್‍ಕುಮಾರ್, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಕುಂಗುಫುಚಂದ್ರು, ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ಚಿತ್ರದ ಟ್ರೈಲರ್‍ನ್ನು ಹಿರಿಯ ನಿರ್ಮಾಪಕ ಉದಯ್‍ಮೆಹತಾ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Pingback: CI CD Solutions