nanu adu mattu saroja ಡಿ.30ಕ್ಕೆ ‘ನಾನು, ಅದು ಮತ್ತು ಸರೋಜ’ ತೆರೆಗೆ

ಲೂಸ್ ಮಾದ ನಟನೆಯ ‘ನಾನು, ಅದು ಮತ್ತು ಸರೋಜ’ ಚಿತ್ರದ ಟ್ರೇಲರ್ ಲಾಂಚ್ ಆಗಿದ್ದು, ಇದೇ ಡಿ.30ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

‘ಮಡಮಕ್ಕಿ’ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿನಯ್ ಪ್ರೀತಮ್ ನಾನು, ಅದು ಮತ್ತು ಸರೋಜ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ನಾನು, ಅದು ಮತ್ತು ಸರೋಜ’ ಚಿತ್ರದ ಕಥೆ ಮೂರು ಪ್ರಮುಖ ಪಾತ್ರಗಳ ಸುತ್ತ ಸಾಗುತ್ತದೆ. ಲೂಸ್ ಮಾದ ಯೋಗಿ, ಹಿರಿಯ ನಟ ದತ್ತಣ್ಣ ಹಾಗೂ ಅಪೂರ್ವ ಭಾರದ್ವಾಜ್ ಮೂರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ನನಗೆ ಈ ಸಿನಿಮಾದ ಕಥೆಯನ್ನು ನಿರ್ದೇಶಕ ವಿನಯ್ ಹೇಳಿದಾಗ ತುಂಬಾ ಇಷ್ಟವಾಯಿತು. ತಮಿಳಿನಲ್ಲಿ ನಟ ವಿಜಯ್ ಸೇತುಪತಿ ಅವರ ಸಿನಿಮಾವೊಂದನ್ನು ನೋಡಿದ್ದೆ. ಆಗಿನಿಂದ ನನಗೂ ಆ ರೀತಿಯ ಪಾತ್ರ ಮಾಡಬೇಕೆಂಬ ಆಸೆ ಇತ್ತು. ನಾನು ಒಂದೇ ತರಹದ ಸಿನಿಮಾ ಮಾಡುವುದಕ್ಕಿಂತ ವಿಭಿನ್ನ ಕಥೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ ಯೋಗಿ.

ಚಿತ್ರದಲ್ಲಿ ಸಂದೀಪ್, ಕುರಿ ಬಾಂಡ್ ರಂಗ, ಪ್ರವೀಣ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾಗೆ ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಪೂಜಾ ವಸಂತಕುಮಾರ್ ಬಂಡವಾಳ ಹೂಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!