ಬಹಳ ದಿನಗಳ ನಂತರ ಜೆ.ಕೆ. ಅಲಿಯಾಸ್ ಜಯರಾಂ ಕಾರ್ತಿಕ್ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರ ನನ್ಗುರಿ ವಾರೆಂಟ್. ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ನಿರ್ದೇಶಕ ಹಾಗೂ ಸಾಹಿತಿ ಎಸ್.ಕೆ. ನಾಗೇಂದ್ರ ಅರಸ್ ಅವರು ಆಕ್ಷನ್ ಕಟ್ ಹೇಳಿದ್ದಾರೆ.
ಮನೀಷ್ ವೈಗನ್ಕರ್ ಈ ಚಿತ್ರದ ನಾಯಕಿ ಹಾಗೂ ನಿರ್ಮಾಪಕಿ ಕೂಡ. ಮೂಲತಃ ಕಾರವಾರದವರಾದ ಮನೀಷ್ ಅವರಿಗೆ ಬಾಲ್ಯದಿಂದಲೂ ಚಿತ್ರರಂಗದೆಡೆಗೆ ತೀವ್ರ ಆಸಕ್ತಿ. ಸದ್ಯ ಬಾಂಬೆಯಲ್ಲಿ ನೆಲೆಸಿರುವ ಮನೀಷ್ ವೈಗನ್ಕರ್ ಅವರು ತಾವೇ ಒಂದು ಕಥೆಯನ್ನು ಬರೆದು ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ತಾನು ಬಣ್ಣ ಹಚ್ಚಬೇಕೆಂಬ ಬಹುದಿನಗಳ ಕನಸನ್ನೂ ಕೂಡ ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ. ಆ್ಯಕ್ಷನ್ ಹಿನ್ನೆಲೆಯಲ್ಲಿ ನಡೆಯುವ ರಿವೇಂಜ್ ಕಥಾಹಂದರ ಇದಾಗಿದ್ದು, ಚಿತ್ರದಲ್ಲಿ ನಾಯಕಿ ಮನಿಷಾ ಅವರು ಆ್ಯಕ್ಷನ್ ಹಾಗೂ ಗ್ಲಾಮರಸ್ ಹೀಗೆ ಎರಡು ರೀತಿಯ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಮೇಜರ್ ಪೋರ್ಷನ್ ವಿದೇಶದಲ್ಲಿ ನಡೆಯುವುದರಿಂದ ಚಿತ್ರಕ್ಕೆ ಬ್ಯಾಂಕಾಕ್ನಲ್ಲಿ 13 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ 20ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ವಾರೆಂಟ್ ಚಿತ್ರವನ್ನು ಸೆರೆಹಿಡಿಯಲಾಗಿದೆ. ಬಿಡುಗಡೆಗೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನಾಗೇಂದ್ರ ಅರಸ್ ಅವರು ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಆರಂಭದಲ್ಲಿ ಚಿತ್ರಕ್ಕೆ ವಾರೆಂಟ್ ಅಂತಲೇ ಶೀರ್ಷಿಕೆಯಿತ್ತು. ಆಂಗ್ಲ ಟೈಟಲ್ ಇದ್ದರೆ ಸೆಬ್ಸಿಡಿ ಸಿಗಲ್ಲ ಎಂದು ನನ್ಗುರಿ ವಾರೆಂಟ್ ಎಂದು ಬದಲಿಸಬೇಕಾಯಿತು.
ಜೆಕೆ, ರಾಂಧವ ಹಾಗೂ ಮನೀಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೆಕೆ ಜೊತೆ ಈಗಾಗಲೆ ಸಿನಿಮಾ ಮಾಡಿದ್ದರೂ ತಾಂಡವ್ ಜೊತೆ ಮೊದಲಬಾರಿಗೆ ಕೆಲಸ ಮಾಡಿದ್ದೇನೆ. ಮನೀಷ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು, ನಾನು ನಿರ್ದೇಶನ ಹಾಗೂ ಎಡಿಟಿಂಗ್ ಮಾತ್ರ ನಿರ್ವಹಿಸಿದ್ದೇನೆ. ಈ ಚಿತ್ರ ಮೂರು ವರ್ಷಗಳ ಹಿಂದೆಯೇ ಆರಂಭವಾಗಿದ್ರೂ ಬಿಡುಗಡೆ ಮಾಡಬೇಕೆನ್ನುವ ಹೊತ್ತಿಗೆ ಕೋವಿಡ್ ಎದುರಾಯ್ತು. ಹಾಗಾಗಿ ರಿಲೀಸ್ ಮತ್ತೆ ಒಂದು ವರ್ಷ ಲೇಟಾಯ್ತು. ಈ ಶುಕ್ರವಾರ ವಿಜಯ್ ಸಿನಿಮಾಸ್ ಮೂಲಕ ೬೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
Be the first to comment