“ನಂದಿನಿ” ಸಾರಥ್ಯ ವಹಿಸಿಕೊಂಡ ರಮೇಶ್‍ ಅರವಿಂದ್

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ನಂದಿನಿ” ಧಾರಾವಾಹಿ ತನ್ನ ನವೀನ ಕತೆ, ಕುತೂಹಲಕಾರಿಚಿತ್ರಕಥೆ,ಅದ್ಬುತಗ್ರಾಫಿಕ್ ವಿಶುವಲ್ಸ್‍ಗಳಿಂದ ಜನರನ್ನು ಮೋಡಿಮಾಡಿದೆ. ಕಥೆಯ ವೇಗವನ್ನುಎಲ್ಲಿಯೂಕುಗ್ಗಿಸದೆ ಪ್ರತಿಯೊಂದುಕಂತಿನಲ್ಲಿಯೂರೋಮಾಂಚಕ ಸನ್ನಿವೇಶಗಳನ್ನು ಹೆಣೆಯುತ್ತ ಯಶಸ್ಸಿನ ಉತ್ತುಂಗಕ್ಕೆತಲುಪಿದೆ.ಇಂಥಹ ಮನೆ ಮಾತಾಗಿರುವ “ನಂದಿನಿ”ಧಾರಾವಹಿಯ ಮುಂದುವರೆದ ಭಾಗದ ನಿರ್ಮಾಣದ ಸಾರಥ್ಯವನ್ನು ಹ್ಯಾಂಡ್ಸಮ್ ನಟ,ನಿರ್ದೇಶಕ,ನಿರೂಪಕ “ಶ್ರೀ ಮೇಶ್‍ಅರವಿಂದ್”ವಹಿಸುತ್ತಿದ್ದಾರೆ.

ದೈವಶಕ್ತಿ-ದುಷ್ಟಶಕ್ತಿಗಳ ನಡುವಿನ ಘರ್ಷಣೆಯಲ್ಲಿ ಎಷ್ಟೋ ನೋವು-ನಾಶ, ಸೋಲು-ಸಾವುಗಳನ್ನುಂಡು ಇದೀಗ ಆ ಘಟ್ಟದಅಂತ್ಯ ಸಮೀಪಿಸಿದೆ. ಎಲ್ಲಾರೋಚಕ ಕತೆಗಳ ಹಾಗೇ ಇಲ್ಲಿಯೂಕಡೆಯಲ್ಲಿ ಗೆಲುವು ದೈವಶಕ್ತಿಗೆ ಒಲಿದಿದೆ.ದುಷ್ಟ ಸಂಹಾರವಾಗಲಿದೆ.ಎಲ್ಲವೂ ಮುಗಿದ ಮೇಲೆ ಧಾರಾವಾಹಿಯೂ ಮುಗಿಯಿತೇ ಎಂದು ನಿರಾಸೆಯಲ್ಲಿ ಕೇಳುವ ನೋಡುಗರಿಗೆಉತ್ತರವಿದೆ, ಕತೆಯ ಮುಂದುವರೆದ ಭಾಗವಾಗಿದುಷ್ಟ ನಂಬೂದರಿ ಮಗ ಅಷ್ಟಾವಕ್ರನಅಟ್ಟಹಾಸದಎದುರು ನಿಲ್ಲಲು ಶಿಷ್ಟೆ ಗಂಗಾಳ ಮಗಳು ಜನನಿ ಬಂದಿದ್ದಾಳೆ.

ಅಷ್ಟಾವಕ್ರನಕ್ರೂರತನಕ್ಕೆ ಗಂಗಾ ಸಂಸಾರ ಬಲಿಯಾಗುತ್ತದೆ, ಎಲ್ಲರೂ ಬಲಿಯಾಗಿ ಕೊನೆಗೆ ಉಳಿಯುವವರೇ ಕಥಾನಾಯಕಅರುಣನತಾಯಿಮತ್ತು ಮಗಳು, ದೇವಸೇನಾ. ದೇವಸೇನಾ ಹರೆಯಕ್ಕೆ ಬಂದಾಗ ತಿಳಿಯುತ್ತದೆ, ಗರ್ಭವತಿಯಾದ ಗಂಗಾ ತೀರಿದ್ದುತನ್ನ ಮಗುವಿಗೆ ಜನನ ನೀಡಿದನಂತರ. ಗುರುಕುಲದಲ್ಲಿ ಬೆಳೆಯುತ್ತಿರುವ ಮುಗ್ದೆ ಜನನಿಯನ್ನು ಬೆಂಗಳೂರಿಗೆ ಕರೆತರುತ್ತಾರೆ, ಕಾಲೇಜಿಗೆ ಸೇರಿಸುತ್ತಾರೆ.

ಪಕ್ಕಾ ಹಳ್ಳಿಯಲ್ಲಿ ಸಂಪ್ರದಾಯಸ್ಥಆಶ್ರಮದಲ್ಲಿ ಬೆಳೆದ ಜನನಿಗೆ ಪಟ್ಟಣದ ವಾತಾವರಣಒಗ್ಗೆದೇ ಒದ್ದಾಡುತ್ತಾಳೆ, ಅದು ಕೆಲವೊಮ್ಮೆ ಹಾಸ್ಯಮಯವಾದರೆ, ಮತ್ತೊಮ್ಮೆ ಭಾವುಕವಾಗಿರುತ್ತದೆ. ಈ ಪಟ್ಟಣದಲ್ಲಿತನಗೇ ತಿಳಿಯದಂತೆ ಒಂದಿಷ್ಟು ಶತೃಗಳಿದ್ದರೆ, ಅದಕ್ಕೂಅಚ್ಚರಿಮೂಡಿಸುವಂತೆ ಒಂದಿಷ್ಟುಪ್ರಾಣ ನೀಡುವ ಮಿತ್ರರೂ ಸಿಗುತ್ತಾರೆ. ಒಳ್ಳೆಯ-ಕೆಟ್ಟ ಜನರ ನಡುವೆಅಷ್ಟಾವಕ್ರ ಕುಹಕಕ್ಕೆ ಬಲಿಯಾಗುತ್ತಾಳೋ ಅಥವಾ ಜಯಿಸುತ್ತಾಳೋಎಂಬ ರೋಚಕಕಥೆಯೇ ಮುಂದುವರಿದ “ನಂದಿನಿ” ಭಾಗ.

ಮಗಳು ಜನನಿ ಪಾತ್ರವನ್ನು, ಗಂಗಾ ಪಾತ್ರದಿಂದಜನಮನ ಸೆಳೆದಿದ್ದ ನಿತ್ಯಾರಾಮ್‍ಅವರೇಜನನಿಯಾಗಿ ಬರುತ್ತಿದ್ದಾರೆ.ಹಾಗೆ ಈಗಾಗಲೇ ಕಿರುತೆರೆಯಲ್ಲಿ ಗಮನ ಸೆಳೆದ ನಟಿ ಮತ್ತು ನಿರೂಪಕಿ ಕಾವ್ಯಶಾಸ್ತ್ರಿ ದೇವಸೇನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇದರ ನಿರ್ಮಾಣದಜವಾಬ್ದಾರಿಯನ್ನುಅಚ್ಚುಮೆಚ್ಚಿನ ನಟರಮೇಶ್‍ಅರವಿಂದ್ ಹೊತ್ತಿದ್ದಾರೆ,ವಂದನಾ ಮೀಡಿಯಾಕ್ರಿಯೇಶನ್ಸ್‍ನಡಿಯಲ್ಲಿ ಸ್ವತ: ರಮೇಶ್‍ಅರವಿಂದ್‍ಅವರುಇನ್ಮುಂದೆ ನಿರ್ಮಿಸಲಿದ್ದಾರೆ.

“ಮೊದಲ ಸಲ ಇಡೀ ಕಿರುತೆರೆ ಲೋಕಕ್ಕೆ ನಿರ್ಮಾಪಕನಾಗಿ ಪರಿಚಯಗೊಳ್ಳುತ್ತಿದ್ದೇನೆನಂದಿನಿ ಸೀರಿಯಲ್‍ನ ಮೂಲಕ.ನಂದಿನಿಯ ಮೂಲಕತೆಯೇ ನನ್ನನ್ನು ಆಕರ್ಷಿಸಿತ್ತು. ನೈಜ ಕತೆಗಳಲ್ಲಿ ನಟಿಸಿ, ನಿರ್ದೇಶಿಸಿದ ನನಗೆ ಈ ತರಹದ ಫ್ಯಾಂಟಸಿ ಈಥೆ ಹೊಸತೆನಿಸಿತು.ಆ ಸೂಪರ್ ನ್ಯಾಚುರಲ್ ಎಲಿಮೆಂಟ್ಸ್ ಹಾವುಗಳು, ಪ್ರೇತಾತ್ಮಗಳು, ನಮ್ಮನ್ನೆಲ್ಲಾ ಮೀರಿದ ವಿಶೇಷ ಶಕ್ತಿಗಳು, ಅಷ್ಟೇ ಅಲ್ಲದೆಕುಟುಂಬದ ಭಾವನಾತ್ಮಕ ಸಂಬಂಧಗಳು.

ಇವೆಲ್ಲವೂ ಈ ನಂದಿನಿ ಧಾರಾವಾಹಿಯನ್ನು ನಿರ್ಮಾಣ ಮಾಡಲು ನನ್ನನ್ನು ಪ್ರೇರೇಪಿಸಿತು. ಈ ಕಥಾವಸ್ತುವಿಗೆ ಹೇಳಿ ಮಾಡಿಸಿದಂತಿರುವ ನಿತಿನ್‍ಅವರು ನಿರ್ದೇಶಕರಾಗಿ ಬಂದಿದ್ದಾರೆ. ರವಿ ಜೋಶಿಯವರು ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ, ಇಂಥಹಉತ್ತಮತಂಡದೊಂದಿಗೆ ನನಗೆ ಅದ್ಭುತ ಈ ಜವಾಬ್ದಾರಿಯನ್ನುಕೊಟ್ಟಉದಯಟಿವಿಗೆ ಧನ್ಯವಾದಗಳು” ಎಂದು ಈ ಸಂದರ್ಭದಲ್ಲಿ ನಟ,ನಿರ್ದೇಶಕರಮೇಶಅರವಿಂದ್ ಹೇಳಿದ್ದಾರೆ.
ನಂದಿನಿ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 8.30ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!