ʼಕರ್ನಾಟಕ ನಂದಿ ಫಿಲ್ಮಂ ಅವಾರ್ಡ್ 2023ʼ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 6ಕ್ಕೆ ನಡೆಯಲಿದೆ.
ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ʼನಂದಿʼ ಪ್ರಶಸ್ತಿಯ ಲಾಂಛನವನ್ನುಅನಾವರಣಗೊಳಿಸಿದರು. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ʼನಂದಿʼ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯಾನ್ ಮಾಲ್‌ನಲ್ಲಿ ಆಯೋಜಿಸಲಾಗಿದೆ.
ʼಕರ್ನಾಟಕ ನಂದಿ ಫಿಲ್ಮಂ ಅವಾರ್ಡ್-2023ʼ ಪ್ರಶಸ್ತಿಗಳಿಗೆ 2022ನೇ ಸಾಲಿನ ಚಿತ್ರಗಳು ಅರ್ಹತೆ ಹೊಂದಿವೆ. ನಂದಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾಗಳ ಜೊತೆಗೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಬಂಜಾರ,ಬ್ಯಾರಿ,ಕೊಂಕಣಿ ಭಾಷೆಯ ಸಿನಿಮಾಗಳಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಕನ್ನಡ ಸಾಹಿತ್ಯ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಗೂ ನಂದಿ ಪ್ರಶಸ್ತಿ ಕೊಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತೆಲುಗು ರಾಜ್ಯದಲ್ಲಿ ಮನೋರಂಜನಾ ಕ್ಷೇತ್ರದ ಸಾಧಕರಿಗೆ ನೀಡುವ ʼನಂದಿʼ ರಾಜ್ಯ ಪ್ರಶಸ್ತಿ ಕೊರತೆ ಕರ್ನಾಟಕದಲ್ಲಿ ಕಾಡುತ್ತಿತ್ತು. ಕರ್ನಾಟಕದಲ್ಲಿಯೂ ಈ ವರ್ಷ ಮೊಟ್ಟಮೊದಲ ಬಾರಿಗೆ ʼನಂದಿʼ ಪ್ರಶಸ್ತಿ ಪ್ರಾರಂಭವಾಗಿದೆ. ಈ ಪ್ರಶಸ್ತಿ ಘೋಷಣೆಯಾಗಿರುವುದು ಕನ್ನಡ ಸಿನಿಮಾರಂಗಕ್ಕೆ ಹೊಸ ಭರವಸೆ ಸಿಕ್ಕಂತಾಗಿದೆ.
ಈ ಬಾರಿ ಯಾರೆಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ನಂದಿ ರಾಜ್ಯ ಪ್ರಶಸ್ತಿ ದೊರಕಲಿದೆ ಎಂದು ಕಾದು ನೋಡಬೇಕಿದೆ.
—–

Be the first to comment