ತೆರೆಗೆ ಬರಲಿದೆ ನಮೋ ಭೂತಾತ್ಮ2

ನಮೋ ಭೂತಾತ್ಮ (2014) ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ನೃತ್ಯ ಸಂಯೋಜಕ ಮುರಳಿ ಅವರು ಇದೀಗ ಮತ್ತೆ ನಮೋ ಭೂತಾತ್ಮ 2 ಮೂಲಕ ಕೋಮಲ್ ಜೊತೆಗೆ ಮತ್ತೆ ಕೈಜೋಡಿಸಿದ್ದಾರೆ.

ಚಿತ್ರವು ಹಾರರ್ ಕಾಮಿಡಿ ಚಿತ್ರವಾಗಿದ್ದು, ನಮೋ ಭೂತಾತ್ಮ ಚಿತ್ರದ ಮುಂದುವರೆದ ಭಾಗ ಇದಾಗಿದೆ ಎಂದು ತಿಳಿದುಬಂದಿದೆ. 650 ಕ್ಕೂ ಹೆಚ್ಚು ಹಾಡುಗಳಿಗೆ ಕೆಲಸ ಮಾಡಿರುವ ಮುರಳಿ ಇದು ಮೂರನೇ ನಿರ್ದೇಶನದ ಚಿತ್ರವಾಗಿದೆ.

ಚಿತ್ರದಲ್ಲಿ ಕೋಮಲ್ ಅವರೊಂದಿಗೆ ಲೇಖಾ ಚಂದ್ರ ಅವರು ಜೋಡಿಯಾಗಲಿದ್ದಾರೆ. ಮುಂಬರುವ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರದಲ್ಲಿ ಲೇಖಾ ಕಾಣಿಸಿಕೊಳ್ಳಲಿದ್ದಾರೆ.

ನಮೋ ಭೂತಾತ್ಮ 2 ರಲ್ಲಿ ಮಿಮಿಕ್ರಿ ಗೋಪಿ, ಮಹಂತೇಶ್, ಗೋವಿಂದೇಗೌಡ, ರುದ್ರೇಶ್ (ಗೌಳಿ) ಮತ್ತು ಮೋನಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನೃತ್ಯ ನಿರ್ದೇಶಕ ವರುಣ್ ರಾಜ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಅರುಣ್ ಆಂಡ್ರ್ಯೂಸ್ ಸಂಗೀತ ಸಂಯೋಜಿಸಿದ್ದರೆ, ಹಾಲೇಶ್ ಎಸ್ (ಓ ಮೈ ಲವ್) ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಡಿಸೆಂಬರ್ 2 ರಂದು ನಮೋ ಭೂತಾತ್ಮ 2 ಚಿತ್ರೀಕರಣವನ್ನು ಆರಂಭಿಸಲು ನಿರ್ದೇಶಕ ಮುರಳಿ ಚಿಂತನೆ ನಡೆಸಿದ್ದಾರೆ.

ಅದಕ್ಕೂ ಮೊದಲು ನವೆಂಬರ್ 27 ರಂದು ಚಿತ್ರದ ಫೋಟೋಶೂಟ್ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!