‘ನಮ್ಮ ಪ್ರೀತಿಯ ಶಾಲೆ’ ಚಿತ್ರದ ಮುಹೂರ್ತ

 ‘ನಮ್ಮ ಪ್ರೀತಿಯ ಶಾಲೆ’ ಮಹೂರ್ತ ಸಮಾರಂಭವು ಮಿನಿ ಇಸ್ಕಾನ್ ಆವರಣ, ಶ್ರೀ ಲಕ್ಷೀ ನರಸಿಂಹ ದೇವಸ್ಥಾನದಲ್ಲಿ ಸರಳವಾಗಿ ಜರುಗಿತು. ಮಾ.ಜಿವಿತ್‍ಭೂಷಣ್ (ಸೆಲ್ವಂ ಪುತ್ರ) ಮತ್ತು ಮಾಸ್ಟರ್ ಮಹಾನಿದಿ ನಟಿಸುವ ಮೊದಲ ದೃಶ್ಯವನ್ನು ಸೆರೆಹಿಡಿಯಲಾಗಿ, ನಂತರ ಹೊರಾಂಗಣದಲ್ಲಿ ಚಿತ್ರೀಕರಣ ನಡೆಯಿತು. ತಾರಗಣದಲ್ಲಿ ಅಚ್ಯುತಕುಮಾರ್, ದತ್ತಣ್ಣ, ಕೆಜಿಎಫ್ ಖ್ಯಾತಿಯ ಕೃಷ್ಣೋಜಿರಾವ್ ಮುಂತಾದವರು ನಟಿಸುತ್ತಿದ್ದಾರೆ. (ಸಿಎಂ ಪಾತ್ರವನ್ನು ಸ್ಟಾರ್ ನಟ ಅಭಿನಯಿಸುವ ಸಾದ್ಯತೆ ಇದೆ)

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದೆಯೆಂದು ಶಾಲೆಯನ್ನು ಮುಚ್ಚಲಾಗುತ್ತದೆ. ಪೋಷಕರು ಪಂಚಾಯತಿ ಅಧ್ಯಕ್ಷರನ್ನು ಕೇಳಿದಾಗ, ಸಿಎಂ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿದೆ. ಏನಿದ್ದರೂ ನೀವು ಅವರನ್ನು ಸಂಪರ್ಕಿಸಬೇಕೆಂದು ಹೇಳುತ್ತಾರೆ.

ಇದನ್ನು ಕೇಳಿಸಿಕೊಂಡ ಇಬ್ಬರು ಮಕ್ಕಳು ಯಾರಿಗೂ ಹೇಳದೆ ಶಾಲೆಯನ್ನು ಉಳಿಸಿಕೊಳ್ಳಲು ಬೆಂಗಳೂರಿಗೆ ಬರುತ್ತಾರೆ. ಇಲ್ಲಿಗೆ ಬಂದು ಸಿಎಂರನ್ನು ಭೇಟಿ ಮಾಡಲು ಏನು ಕಷ್ಟಗಳನ್ನು ಅನುಭವಿಸುತ್ತಾರೆ. ಕೊನೆಗೂ ಅವರ ಶ್ರಮ ಸಾರ್ಥಕವಾಗುತ್ತದಾ? ಶಾಲೆ ಪುನ: ತೆರೆಯುತ್ತದಾ? ಎಂಬುದು ಒನ್ ಲೈನ್ ಕಥಾ ಸಾರಾಂಶವಾಗಿದೆ.

ರಚನೆ,ಛಾಯಾಗ್ರಹಣ, ನಿರ್ದೇಶನ ಮಾಡುತ್ತಿರುವ ಸೆಲ್ವಂ ನಿರ್ಮಾಣದಲ್ಲಿ ಪಾಲುದಾರರು. ಇವರೊಂದಿಗೆ ಹೈದರಬಾದ್‍ನ ವೈ.ಆರ್.ವೇಮಿರೆಡ್ಡಿ ಶ್ರೀ ಯೋಗ ಲಕ್ಷೀ ನರಸಿಂಹ ಸ್ವಾಮಿ ಕಂಬೈನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ.

ಎರಡು ಹಾಡುಗಳಿಗೆ ಪಳನಿ.ಡಿ.ಸೇನಾಪತಿ ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆ ಸಿವತೇಜಸ್, ನೃತ್ಯ ಹರಿಕೃಷ್ಣ-ಶ್ರೀಶೈಲಂ, ನಿರ್ಮಾಣ ನಿರ್ವಹಣೆ ಹನಮಂತು ಅವರದಾಗಿದೆ. ಕೋಲಾರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

This Article Has 1 Comment
  1. Pingback: tes kejaksaan 2021/2022

Leave a Reply

Your email address will not be published. Required fields are marked *

Translate »
error: Content is protected !!