ಇಪ್ಪತ್ತೈದು ವರ್ಷಗಳ ಹಿಂದೆ ಗುಲ್ಜಾರ್ ಖಾನ್ ನಿರ್ಮಾಣ, ನಿರ್ದೇಶನ ಮಾಡಿದಂತಹ ʻತನಿಖೆʼ ಎನ್ನುವ ಸಿನಿಮಾ ಬಿಡುಗಡೆಯಾಗಿತ್ತು. ಈಗ ಮತ್ತದೇ ಹೆಸರಿನ ಸಿನಿಮಾ ತಯಾರಾಗಿ ಬಿಡುಗಡೆಗೆ ಸಿದ್ಧವಾಗಿದೆ. ಆಗ ತೆರೆಗೆ ಬಂದಿದ್ದ ಗುಲ್ಜಾರ್ ಖಾನ್ ಅವರ ತನಿಖೆಯಲ್ಲಿ ʻʻಡಾಂ ಡಾಂ ಡಿಗಾ ಡಿಗಾʼʼ ಎಂಬ ಹಾಡು ಎಲ್ಲರನ್ನೂ ಸೆಳೆದಿತ್ತು.
ಈಗ ಜಿ.ಎಸ್.ಕಲಿಗೌಡರವರ ಹೊಸ “ತನಿಖೆ”ಯ “ಎಣ್ಣೆ ಹೊಡಿಯೋದ ಹೆಂಡ್ತಿ ಬಿಡೋದ” ಎಂಬ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. “ತನಿಖೆ” ಸಿನಿಮಾ ಪೋಲೀಸ್ ತನಿಖೆಯ ಸುತ್ತಲಿನ ಕಥೆ ಹೊಂದಿದ್ದರೂ, ಪ್ರೇಮಿಗಳಿಗೆ ರೋಮಾಂಚನವಾಗುವಂತಹ ಹಾಡುಗಳು ಈ ಚಿತ್ರದಲ್ಲಿವೆ.
ಇದೇ ಕೋವಿಡ್ ಸಮಯದಲ್ಲಿ ಚಿತ್ರಮಂದಿರಗಳು ತೆರೆಯಲು ಸಿದ್ದವಾಗಿದ್ದರೂ, ಕೋವಿಡ್ ಮುಂಜಾಗ್ರತೆಯ ಕಾರಣಕ್ಕೆ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಜನ ಚಿತ್ರಮಂದಿರಕ್ಕೆ ಬರಲು ಪೂರ್ಣ ಪ್ರಮಾಣದಲ್ಲಿ ಮನಸ್ಸು ಮಾಡದೇ ಇರುವುದರಿಂದ ಎಲ್ಲರೂ ಇದ್ದಲ್ಲಿಂದಲೇ ವೀಕ್ಷಿಸಲು ನಮ್ಮ ಫ್ಲಿಕ್ಸ್ ಅನುವು ಮಾಡಿಕೊಟ್ಟಿದೆ.
ಜಿ.ಎಸ್.ಕಲಿಗೌಡ ಈ ಚಿತ್ರವನ್ನು ನಿರ್ದೇಶನ, ನಿರ್ಮಾಣ ಜೊತೆಗೆ ಸಾಹಿತ್ಯ ರಚಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದು, ಚಿತ್ರರಂಗಕ್ಕೆ ಬಂದು ಸತತ 12 ವರ್ಷಗಳ ಕಾಲ ನಿರಂತರ ಪ್ರಯತ್ನ ನಡೆಸಿ, ʻತನಿಖೆʼಯನ್ನು ಕಟ್ಟಿ ನಿಲ್ಲಿಸಿದ್ದಾರೆ.
ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿರುವ ಬಹುತೇಕರು ಹೊಸಬರಾದರೂ, ಕಥೆಯೇ ಪ್ರಧಾನವಾಗಿದೆ. ಚೆಂದನೆಯ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ನವೀನ್ ಸಜ್ಜು, ಸಂತೋಷ್ ವೆಂಕಿ, ಚಿಂತನ್ ವಿಕಾಸ್, ವಾಣಿ ಹರಿಕೃಷ್ಣ ಹಾಡಿರುವಂತಹ ಪ್ರತಿಯೊಂದು ಹಾಡೂ ಗಮನ ಸೆಳೆಯುವಂತಿವೆ. ಪ್ರತಿಷ್ಠಿತ ಜ಼ೀ ಮ್ಯೂಸಿಕ್ ಸಂಸ್ಥೆಯಿಂದ ಈ ಚಿತ್ರದ ಹಾಡುಗಳು ಹೊರಬಂದಿವೆ.
ನಾಡಹಬ್ಬ ದಸರಾ ಸಂದರ್ಭದಲ್ಲಿ ʻತನಿಖೆʼ ಪ್ರದರ್ಶನಗೊಳ್ಳುತ್ತಿದೆ. ತನಿಖೆ ತಂಡದ ಕಲಾವಿದರು ಮತ್ತು ತಂತ್ರಜ್ಞರು ಸೇರಿ ಚಿತ್ರದ ಟಿಕೆಟ್ಟನ್ನು ವಿತರಿಸುತ್ತಿದೆ. ತನಿಖೆಯ ಟಟಿಕೆಟ್ ಖರೀದಿಸಿದರೆ ವಿಶೇಷ ಕೂಪನ್ ನೀಡಲಾಗುತ್ತಿದೆ.
ದಸರಾ ಸಂದರ್ಭದಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು. ತನಿಖೆ ಸಿನಿಮಾದ ತಿರುಳಿನಲ್ಲಿ ಪ್ರೇಕ್ಷಕರಿಗೆ ಗೊಂದಲ ಮೂಡಿಸುವಂತಹ ನಾಲ್ಕು ಕ್ಲೈಮ್ಯಾಕ್ಸ್ಗಳಿದ್ದು ಚಿತ್ರವನ್ನು ಎರಡನೇ ಸಲ ವೀಕ್ಷಿಸಿದರೆ ಮಾತ್ರ ಕಥಾಸಾರಾಂಶ ಅರ್ಥವಾಗಬಹುದು ಎಂದು ನಿರ್ದೇಶಕರು ಜಿ.ಎಸ್.ಕಲಿಗೌಡ ಹೇಳಿದ್ದಾರೆ.
ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಹೊಸ ಸ್ಕ್ಯಾನ್ ಕೋಡ್ ಟೆಕ್ನಾಲಜಿಯಲ್ಲಿ ಪ್ರೇಕ್ಷಕರು ಟಿಕೆಟ್ಗಳನ್ನು ನೊಂದಾಯಿಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬ ನೊಂದಾಯಿಸಿದ ಪ್ರೇಕ್ಷಕರಿಗೆ ತಮ್ಮ ಈ-ಮೇಲ್ ಹಾಗು ಎಸ್.ಎಮ್.ಎಸ್ನಲ್ಲಿ ಆಫರ್ ಕೋಡ್, ಟಿಕೆಟ್ ನಂಬರ್ ಹಾಗು ಚಿತ್ರ ವೀಕ್ಷಿಸಬಹುದಾದ ನಮ್ಮ ಫ್ಲಿಕ್ಸ್ ಆಪ್ನ ಲಿಂಕ್ ಕೋಡ್ ನೀಡಲಾಗುತ್ತದೆ. ಈ ಮೂಲಕ ವಿನೂತನ ಡಿಜಿಟಲ್ ಪ್ರಯತ್ನವನ್ನು ತನಿಖೆ ಚಿತ್ರತಂಡ ಕೈಗೊಂಡಿದೆ.
Pingback: replica watches
Pingback: Digital Transformation