ನ.1ರಂದು ‘ನಮ್ಮ ಪ್ರೀತಿಯ ರಾಮು’ ರೀ-ರಿಲೀಸ್

ದರ್ಶನ್‌ ಅಭಿನಯದ  ಹಿಟ್‌ ಚಿತ್ರ ‘ನಮ್ಮ ಪ್ರೀತಿಯ ರಾಮು’ ನವೆಂಬರ್‌ 1ರಂದು ರೀ-ರಿಲೀಸ್ ಆಗಲಿದೆ.

2003ರಲ್ಲಿ ಬಿಡುಗಡೆಗೊಂಡ ‘ನಮ್ಮ ಪ್ರೀತಿಯ ರಾಮು’ ಚಿತ್ರ ಜನಮನ್ನಣೆ ಗಳಿಸಿತ್ತು. ಜಿ.ನಂದಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಂಜಯ್-ವಿಜಯ್ ನಿರ್ದೇಶಕರಾಗಿದ್ದಾರೆ. ಇಳಯರಾಜಾ ಸಂಗೀತ, ರಮೇಶ್‌ಬಾಬು ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರಲ್ಲಿ ನವ್ಯ ನಟರಾಜನ್ ದರ್ಶನ್‌ಗೆ ಜೋಡಿಯಾಗಿದ್ದಾರೆ. ‘ದೊಡ್ಡಣ್ಣ, ಉಮಾಶ್ರೀ, ಕರಿಬಸವಯ್ಯ, ಪವಿತ್ರಾ ಲೋಕೇಶ್, ರಮೇಶ್‌ ಪಂಡಿತ್ ಮುಂತಾದವರು ನಟಿಸಿದ್ದ ಚಿತ್ರ 5.1 ಸೌಂಡ್‌ ಎಫೆಕ್ಟ್‌ನೊಂದಿಗೆ ಬಿಡುಗಡೆಗೊಳ್ಳಲಿದೆ. ಚಿತ್ರವನ್ನು ಡಿಜಿಟಲ್‌ ಮಾದರಿಗೆ ಪರಿವರ್ತಿಸಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಅವರ ‘ಶಾಸ್ತ್ರಿ’, ‘ಕರಿಯ’ ಸಿನಿಮಾ ರೀ-ರಿಲೀಸ್ ಆದವು. ನವೆಂಬರ್‌ 1ರಂದು ‘ನಮ್ಮ ಪ್ರೀತಿಯ ರಾಮು’  ತೆರೆಗೆ ಬರಲಿದೆ.

ಕನ್ನಡದ ಖಳನಾಯಕ ನಟರ ಮಕ್ಕಳು ನಟಿಸಿದ್ದ ದಸರಾ ಹಾಗೂ ಅಂಬಾರಿಯ ಸುತ್ತ ಸುತ್ತುವ ‘ನವಗ್ರಹ’ ಸಿನಿಮಾ ಶೀಘ್ರದಲ್ಲಿ ರೀ-ರಿಲೀಸ್​ ಆಗಲಿದೆ. ಸಿನಿಮಾದಲ್ಲಿ ದರ್ಶನ್‌ ,ವಿನೋದ್ ಪ್ರಭಾಕರ್, ನಾಗೇಂದ್ರ ಅರಸ್, ತರುಣ್ ಸುಧೀರ್, ಧರ್ಮ ಕೀರ್ತಿರಾಜ್ ಸೇರಿದಂತೆ ಕನ್ನಡದ ಹೆಸರಾಂತ ವಿಲನ್ ಮಕ್ಕಳು  ಅಭಿನಯಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!