ಚಿತ್ರ : ನಮಸ್ತೆ ಗೋಷ್ಟ್
ನಟ,ನಿರ್ದೇಶನ : ಭರತ್ ನಂದ
ನಿರ್ಮಾಪಕ : ರಮೇಶ್
ನಾಯಕಿಯಾಗಿ ವಿದ್ಯಾ ರಾಜ್
ಸಂಗೀತ ನಿರ್ದೇಶನ :ಯದುನಂದನ್
ಸಂಕಲನ : ವಿನಯ್ ಕುಮಾರ್
ಪಾತ್ರವರ್ಗ : ಬಾಲ ರಾಜುವಾಡಿ , ಶಿವಮೊಗ್ಗ ಹರೀಶ್, ಶಿವಕುಮಾರ್ ಆರಾಧ್ಯ ಇತರರು.
ರೇಟಿಂಗ್ 3.5/5
ಹೊಸಬರು ಚಿತ್ರರಂಗಕ್ಕೆ ಕಾಲಿಟ್ಟಾಗ ಅವರ ಜೊತೆ ಹೊಸ ಐಡಿಯಾಗಳು ಕೂಡ ಬರುತ್ತವೆ. ಹೊಸ ರೀತಿಯ ಪ್ರಯೋಗಗಳು ಆಗುತ್ತವೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ನಮಸ್ತೆ ಗೋಷ್ಟ್’ (Namasthe Ghost) ಸಿನಿಮಾ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರದಲ್ಲಿ ಹಾರರ್-ಕಾಮಿಡಿ (Horror Comedy) ಕಥಾಹಂದರ ಇದೆ.
ಕಥಾನಾಯಕ ಶಿವನಿಗೆ ಪ್ರತೀ ದಿನ ಒಂದೇ ಕನಸು ಬೀಳುತ್ತ ಇರುತ್ತದೆ. ದಿವ್ಯ’ ಎಂಬ ಒಬ್ಬ ಹುಡುಗಿಯನ್ನ ಲಾರಿ ಒಂದು ಹೊಡೆದು ಸಾಯಿಸಿದ ಹಾಗೇ. ಈ ಕನಸಿನ ಬಗ್ಗೆ ಅವನು ತನ್ನ ಆಪ್ತರಲ್ಲೆಲ್ಲ ಅವಲೋಕಿಸುತ್ತಾನೆ. ಇದರ ಬಗ್ಗೆ ಯಾರಿಗೂ ಏನೂ ತಿಳಿಯದೇ ಹೋದಾಗ, ಶಿವನ ರೂಮ್ ಮೇಟ್, ಸ್ಪಿರಿಟ್ ಬೋರ್ಡ್ ಗೇಮ್ ಮೂಲಕ ಭೂತಗಳನ್ನ ಕರೆವ ಆಟ ಆಡಿದರೆ, ಹಿಂದಿನ ಮುಂದಿನ ಹಾಗು ಈಗಿನ ಎಲ್ಲಾ ವಿಚಾರಗಳನ್ನ ತಿಳಿಯಬಹುದು. ಇದರಿಂದ ನಿನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ನೀಡುವ ಸಲಹೆಯಿಂದ ಅವರು ‘ನಮಸ್ತೆ ಘೋಸ್ಟ್’ ಆಟವನ್ನ ಆಡಲು ಶುರು ಮಾಡುತ್ತಾರೆ. ಈ ಆಟ ಎಲ್ಲಿಗೆ ಹೋಗಿ ತಲುಪುತ್ತದೆ? ಇದರಿಂದ ಅವರಿಗೆ ಇನ್ಯಾವ ಸಮಸ್ಯೆಗಳೆಲ್ಲ ಎದುರಾಗುತ್ತವೆ? ಇದನ್ನೆಲ್ಲಾ ನೀವು ಸಿನಿಮಾದಲ್ಲೇ ನೋಡಬೇಕು.
ಈಗಾಗಲೆ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಗುರುತಿಸಿಕೊಂಡಿವ ಶಿವಮೊಗ್ಗ ಹರೀಶ್ ಶಿವಯ್ಯನ ಗೆಳೆಯ ನ ಪಾತ್ರ ದಲ್ಲಿ ಅದ್ಬುತ ವಾಗಿ ಅಭಿನಯಸಿದ್ದಾರೆ.
ಒಂದೇ ರೂಂ ನಲ್ಲಿ ಒಟ್ಟಿಗೆ ಇರುವದರಿಂದ ಇಬ್ಬರು ಬೊರ್ಡ ಇಟ್ಟುಕೊಂಡು ನಮಸ್ತೆ ಗೋಷ್ಟ್ ಅಂತ ಕರೆಯುತ್ತಾರೆ ಅಲ್ಲಿಂದ ಆರಂಭವಾಗುತ್ತೆ ಇದು ಪ್ರತಿ ದಿನ ಹೀಗೆ ಮಾಡುತ್ತಾರೆ. ಕಥೆಗೆ ತಿರುವು ನಿಡಲು ಪ್ರೊಫೆಸರ್ ಪಾತ್ರ ದಲ್ಲಿ ಬಾಲ ರಾಜುವಾಡಿ ಆಗಮಿಸಿ ಜಗತ್ತಿನ ನಲ್ಲಿ ಒಬ್ಬರೇ ಹೊಲುವಂತಹ ಇನ್ನೊಬ್ಬರು ಇರುತ್ತಾರೆ ಎಂದು ಹೇಳುತ್ತಾರೆ ಮುಂದೆ ಎನಾಗುತ್ತೆ ಅನ್ನೊದು ನೀವು ಚಿತ್ರ ಚಿತ್ರಮಂದಿರಗಳಲ್ಲಿ ಕೊಡಬೇಕು.
Be the first to comment