Hemanth Hegde ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

ಹೇಮಂತ್ ಹೆಗಡೆ ಅವರ ಮುಂಬರುವ ಚಿತ್ರ ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

ಬಹಳ ಸಮಯದ ನಂತರ ಸಂಪೂರ್ಣ ಹಾಸ್ಯಮಯ ಸಿನಿಮಾವನ್ನು ಪ್ರೇಕ್ಷಕರು ವೀಕ್ಷಿಸಲಿದ್ದಾಗೆ ಎಂದು ನಿರ್ದೇಶಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಪ್ರೇಕ್ಷಕರು ಸಂಪೂರ್ಣವಾದ ಕಾಮಿಡಿಯನ್ನು ವೀಕ್ಷಿಸಿ ಬಹಳ ದಿನಗಳಾಗಿವೆ. ಕೃಷಿಯಲ್ಲಿ ತೊಡಗಿರುವ ಯುವಜನರ ಕುರಿತಾದ ಈ ಚಿತ್ರದಲ್ಲಿ ಮದುಮಗಳು ಸಿಗದಿರುವ ಕುರಿತಾದ ಕಥೆ ಇದೆ. ಇದು ತಮಾಷೆಯಾಗಿ ನೋಡುಗರಿಗೆ ಕಚಗುಳಿ ಇಡುವುದು ಖಚಿತ ಎಂದು ನಿರ್ದೇಶಕರು ಹೇಳಿದ್ದಾರೆ.

ಹೇಮಂತ್ ಹೆಗಡೆ ಅವರೇ ನಾಯಕನಾಗಿಯೂ ನಟಿಸಿರುವ ಚಿತ್ರದಲ್ಲಿ ಗೀತಾಂಜಲಿ ಮಂಗಲ್, ಶ್ರುತಿ ನದೀಶ್, ಶ್ರೇಯಾ ವಸಂತ್, ರಾಜೇಶ್ ನಟರಂಗ ಮತ್ತು ಪದ್ಮಜಾ ರಾವ್ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ವಿ ಮನೋಹರ್ ಮತ್ತು ರವಿ ಮುರೂರ್ ಅವರ ಸಂಗೀತ, ಕೃಷ್ಣ ಭಂಜನ್ ಅವರ ಛಾಯಾಗ್ರಹಣವಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!