Nagma: ಸೈಬರ್‌ ವಂಚನೆಗೆ ಒಳಗಾದ ನಟಿ

ಕುರುಬನ ರಾಣಿ ಖ್ಯಾತಿಯ ನಟಿ ನಗ್ಮಾ ಮೊರಾರ್ಜಿ ಸೈಬರ್‌ ವಂಚನೆಗೆ ಒಳಗಾಗಿದ್ದಾರೆ.

ನಟಿ ಕೆವೈಸಿ ವಂಚನೆಯಿಂದಾಗಿ ಅವರು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೊಬೈಲ್‌ಗೆ ಬಂದ ಸ್ಪಾಮ್‌ ಲಿಂಕ್‌ನ ಮೇಲೆ ಕ್ಲಿಕ್‌ ಮಾಡಿದ್ದರಿಂದ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 28 ರಂದು ನಟಿ ನಗ್ಮಾ 99,998 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ಗಳು ಕಳಿಸುವ ರೀತಿಯ ನಂಬರ್‌ನಿಂದ ನಗ್ಮಾ ಅವರು ಸಂದೇಶವನ್ನು ಸ್ವೀಕರಿಸಿದ್ದರು. ಇದು ಯಾವುದೇ ಪ್ರೈವೇಟ್‌ ನಂಬರ್‌ ಕೂಡ ಆಗಿರಲಿಲ್ಲ ಎಂದು ನಗ್ಮಾ ಹೇಳಿದ್ದಾರೆ.

ಬ್ಯಾಂಕ್ ಖಾತೆ ವಂಚನೆಯ ಮೂಲಕ ಕೆಲವೇ ದಿನಗಳಲ್ಲಿ ಹಲವಾರು ಲಕ್ಷ ರೂಪಾಯಿಗಳನ್ನು ವಂಚಿಸಿದ ಇತರ 80 ಸಂತ್ರಸ್ತರಲ್ಲಿ ನಗ್ಮಾ ಕೂಡ ಸೇರಿದ್ದಾರೆ. ಈ ಎಲ್ಲಾ ವ್ಯಕ್ತಿಗಳು ಒಂದೇ ಖಾಸಗಿ ಬ್ಯಾಂಕ್‌ನಲ್ಲಿ ಅಕೌಂಟ್‌ ಹೊಂದಿದವರಾಗಿದ್ದಾರೆ.

“ವಂಚಕ ನನ್ನ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌ಗೆ ರೂ. 1 ಲಕ್ಷವನ್ನು ವರ್ಗಾವಣೆ ಮಾಡಿದ್ದ. ನಾನು ಇದಕ್ಕಾಗಿ ಸಾಕಷ್ಟು ಒಟಿಪಿ ಕೂಡ ಸ್ವೀಕರಿಸಿದ್ದೇನೆ. ಆತ ಕನಿಷ್ಠ 20 ಪ್ರಯತ್ನಗಳನ್ನು ಮಾಡಿದ್ದಾನೆ. ಅದೃಷ್ಟವಶಾತ್ ನಾನು ದೊಡ್ಡ ಮೊತ್ತವನ್ನು ಕಳೆದುಕೊಳ್ಳಲಿಲ್ಲ” ಎಂದು ನಗ್ಮಾ ಅವರು ಹೇಳಿದ್ದಾರೆ.

ನಗ್ಮಾ ಅವರು ಹಿಂದಿ ಅಲ್ಲದೆ, ತೆಲುಗು, ತಮಿಳು, ಭೋಜ್‌ಪುರಿ, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!