ಮ್ಯಾನ್ ಲಿಯೋ ಸಂಸ್ಥೆಯ ಮುಖಾಂತರ ದಿವ್ಯ ಚಂದ್ರಧರ ಮತ್ತು ಯೋಗೇಶ್ ಕೆ. ಗೌಡ ನಿರ್ಮಾಣದಲ್ಲಿ ಹಾಗೂ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ “ಕಂಡ್ಹಿಡಿ ನೋಡೋಣ”. ಹೆಸರೇ ಹೇಳುವಂತೆ ಇದು ಒಂದು ವಿಭಿನ್ನವಾದ ಶೀರ್ಷಿಕೆ ಅಷ್ಟೇ ಅಲ್ಲದೇ ಕಥೆಯ ಹಂದರವೂ ಕೂಡ ಬೇರೆಯದೇ ರೀತಿಯಲ್ಲಿ ಹೆಣೆಯಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನ್ಹರ್ ನ ಕಥೆಯಾದರೂ ಇದೊಂದು ಪಕ್ಕಾ ಫ್ಯಾಮಿಲಿ ಡ್ರಾಮದೊಳಗೆ ಫ್ರೆಂಡ್ ಶಿಪ್ ಪ್ರೀತಿ, ಪ್ರೇಮ, ಭಾವನಾತ್ಮಕವಾದ ಸೆಲೆಯೊಳಗೆ ಅರಳಿರುವ ಚಿತ್ರ ಎನ್ನಬಹುದು. ಈ ಚಿತ್ರ ಮೂರು ಭಾಷೆಗಳಲ್ಲಿ ತೆರೆಗೆ ಬರಲಿದೆ.
ನಾಗೇಂದ್ರ ಅರಸ್ ಸಂಕಲನಕಾರನಾಗಿ ಚಿತ್ರರಂಗಕ್ಕೆ ಕಾಲಿಟ್ಟು ಈಗ ನಟನಾಗಿ, ನಿರ್ದೇಶಕನಾಗಿ ಹಲವಾರು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗ ಈ ಚಿತ್ರಕ್ಕೆ ಕಂಡ್ಹಿಡಿ ನೋಡೋಣ ಅಂತ ಪ್ರೇಕ್ಷಕರ ತಲೆಗೆ ಕೆಲಸ ಕೊಡಲು ಮುಂದಾಗಿದ್ದಾರೆ.
ಸೈಕೋ ಶಂಕರ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ನವ ನಾಯಕನಟ ಪ್ರಣವ್ ಮೊದಲ ಚಿತ್ರದಲ್ಲೇ ಒಂದಷ್ಟು ಭರವಸೆ ಮೂಡಿಸಿದ್ದ ನಟ ಎನ್ನಬಹುದು. ಈಗ “ಕಂಡ್ಹಿಡಿ ನೋಡೋಣ” ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಮಧ್ಯಮ ವರ್ಗದ ಹುಡುಗನಾಗಿ ಒಂದಷ್ಟು ಬೇರೆಯದೇ ರೀತಿಯ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ವಿನೋದ್ ಜೆ ರಾಜ್ ಛಾಯಾಗ್ರಹಣದಲ್ಲಿ ಬೆಂಗಳೂರಿನ ಸೊಬಗಿನೊಂದಿಗೆ ಚಿತ್ರ ನಿರ್ಮಾಣವಾಗಿದೆ. ಶ್ರೀಧರ್ ಕಷ್ಯಪ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಚನ್ನಾಗಿ ಮೂಡಿ ಬಂದಿದೆ.
ಚಿತ್ರದಲ್ಲಿ ಪ್ರಿಯಾಂಕ, ನಾಗೇಂದ್ರ ಅರಸ್, ವಿಜಯ ಚಂಡೂರ್, ಗಿರಿಜಾ ಲೋಕೇಶ್, ಜಯಸಿಂಹ ಮುಸುರಿ, ಶಿಲ್ಪ ಬರಿಕೆ, ಆದರ್ಶ್ ಮುಂತಾದವರಿದ್ದಾರೆ.
ಮೊದಲಬಾರಿಗೆ ಈ ಚಿತ್ರದಲ್ಲಿ ತುಂಬಾ ದೊಡ್ಡ ಮಟ್ಟದ ಸೆಟ್ಟನ್ನು ಗ್ರಾಫಿಕ್ ಮೂಲಕ ಸೃಷ್ಠಿಮಾಡಲಾಗಿದೆ.ಇತ್ತೀಚೆಗೆ ಚಿತ್ರದ ಟೀಸರ್ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಹಾಗೂ ಜಾಲತಾಣದಲ್ಲಿ ಒಳ್ಳೆಯ ವೀಕ್ಷಣೆಯಾಗುತ್ತಿದೆ.
ಚಿತ್ರ ತಂಡ ಹೇಳುವುದೇನೆಂದರೆ ನಮ್ಮ ಚಿತ್ರ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುತ್ತೇವೆ ನಂತರ ಓಟಿಟಿ ಜಾಲ ತಾಣಗಳಲ್ಲಿ ಬಿಡುಗಡೆ ಮಾಡುತ್ತೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಕಂಡ್ಹಿಡಿ ನೋಡೋಣ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ.
Pingback: https //sscn.bkn.go.id 2021
Pingback: CICD