ಚಿತ್ರದ ಬಿಡುಗಡೆಯ ಸಿದ್ಢತೆಯಲ್ಲಿರುವ”ಅಮೄತ ಅಪಾರ್ಟ್ಮಮೆಂಟ್ಸ್” ತಂಡ, ಮೊದಲ ಹೆಜ್ಜೆಯಾಗಿ “ನಾವು ಬಂದೇವ್ ” ಎನ್ನುವ ಹಾಡನ್ನು ಯುಟ್ಯುಬ್ ಛಾನಲ್ ನಲ್ಲಿ ಬಿಡುಗಡೆ ಮಾಡಿದೆ.
ಉತ್ತರ ಕರ್ನಾಟಕದ ಬನಹಟ್ಟಿ ಮೂಲದವರಾದ ಪ್ರೊ. ಬಿ.ಆರ್. ಪೋಲಿಸಪಾಟೀಲರವರು “ನಾವು ಬಂದೇವ್” ಹಾಡಿಗೆ ಸಾಹಿತ್ಯ ರಚನೆ ಮಾಡಿದ್ದಾರೆ.
ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುವ ವಲಸಿಗರ ಕುರಿತು, ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ)ರವರ ಕಲ್ಪನೆಗೆ ತಕ್ಕಂತೆ ದೇಶಿ ಸೊಗಡಿನ ಪದಗಳನ್ನು ಬಳಸಿಕೊಂಡು ಈ ಹಾಡಿನ ಸಾಹಿತ್ಯವನ್ನು ರಚಿಸಲಾಗಿದೆ.
ಈ ಹಾಡಿಗೆ ತಮ್ಮ ಸತ್ವಶಾಲಿ ಧ್ವನಿಯನ್ನು ಧಾರೆಯೆರೆದು, ಹಾಡಿಗೆ ಮೆರಗು ನೀಡುವಂತೆ ಹಾಡಿರುವವರು ರಾಜ್ಯ ಪ್ರಶಸ್ತಿ ವಿಜೇತ ಗಾಯಕ, ತೇಜಸ್ವಿ ಹರಿದಾಸ. ಈ ಹಾಡಿನಲ್ಲಿ ಬಳಸಿದ ಉತ್ತರ ಕರ್ನಾಟಕದ ಪರಿಚಿತವಲ್ಲದ ಶಬ್ದಗಳನ್ನು ಸರಿಯಾಗಿ ಉಚ್ಚರಿಸಲು, ಶ್ರಮ ವಹಿಸಿ ತಾಲೀಮ್ ಮಾಡಿ ನಿರ್ದೇಶಕರಿಂದ ಸೈ ಅನ್ನಿಸಿಕೊಂಡು ಹಾಡಿದ್ದು, ಬಹು ದೀರ್ಘಕಾಲ ನನ್ನ ನೆನಪಿನಲ್ಲಿ ಉಳಿಯುವಂತಹದ್ದು ಎನ್ನುತ್ತಾರೆ.
ದೇಶಿ ಸಾಹಿತ್ಯದ ಈ ಸುಂದರ ಗೀತೆಯನ್ನು ಇಂದಿನ ಯುವಕ ಯುವತಿಯರ ಅಭಿರುಚಿಗೆ ತಕ್ಕಂತೆ ಸಂಗೀತ ನೀಡಿರುವವರು, ಎಸ್.ಡಿ. ಅರವಿಂದ.
“ನಾವು ಬಂದೇವ್” ಎಂದು ಶುರುವಾಗುವ ಈ ಹಾಡು ವೈರಲ್ ಆಗುವದರಲ್ಲಿ ಸಂಶಯವೇ ಇಲ್ಲ ಎಂದು ಚಿತ್ರ ತಂಡದ ಅಭಿಪ್ರಾಯ.
https://youtu.be/hGGRq2Ui46k

Be the first to comment