ಹೊಸಬರಿಂದ ಕೂಡಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ನಾನಿನ್ನ ಬಿಡಲಾರೆ’ ಚಿತ್ರ ನವೆಂಬರ್ 29ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
ಚಿತ್ರಕ್ಕೆ ನವೀನ್ ಜಿ.ಎಸ್ ಆಕ್ಷನ್ ಕಟ್ ಹೇಳಿದ್ದಾರೆ. ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಅಡಿಯಲ್ಲಿ ಅಂಬಾಲಿ ಭಾರತಿ ಚಿತ್ರವನ್ನು ನಿರ್ಮಿಸಿ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಪಂಚಿ, ಸೀರುಂಡೆ ರಘು,ಕೆ.ಸ್.ಶ್ರೀಧರ್ ಮುಂತಾದವರು ಚಿತ್ರದಲ್ಲಿದ್ದಾರೆ.
”ನಾನಿನ್ನ ಬಿಡಲಾರೆ’ ಚಿತ್ರವನ್ನು ಆರಂಭಿಸಲು ನಾನು ಬಹಳಷ್ಟು ಪೂರ್ವ ತಯಾರಿಯನ್ನ ಮಾಡಿಕೊಂಡಿದ್ದೆ. ಸೈಕಲಾಜಿಕಲ್, ಹಾರರ್, ಥ್ರಿಲಿಂಗ್, ಸಸ್ಪೆನ್ಸ್ ಚಿತ್ರದಲ್ಲಿ ವೈದ್ಯಕೀಯ ಸಂಗತಿಗಳನ್ನು ಹೇಳಲಾಗಿದೆ’ ಎಂದಿದ್ದಾರೆ ನಿರ್ದೇಶಕ ನವೀನ್ ಜಿ.ಎಸ್.
ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತ, ದೀಪಕ್ ಜಿ.ಎಸ್ ಸಂಕಲನವಿದೆ.ಅನಂತ ನಾಗ್, ಲಕ್ಷ್ಮಿ ಜೋಡಿಯ ‘ನಾ ನಿನ್ನ ಬಿಡಲಾರೆ’ ಚಿತ್ರ ಜನಪ್ರಿಯತೆ ಗಳಿಸಿತ್ತು.
Be the first to comment