ಸಿನಿಮಾ: ನಾ ನಿನ್ನ ಬಿಡಲಾರೆ
ನಿರ್ಮಾಣ: ಭಾರತಿ ಬಾಲಿ
ನಿರ್ದೇಶನ: ನವೀನ್ ಜಿಎಸ್
ತಾರಂಗಣ: ಅಂಬಾಲಿ ಭಾರತಿ, ಪಂಚಿ, ಸೀರುಂಡೆ ರಘು, ಲೋಹಿತ್, ಶ್ರೀನಿವಾಸ್ ಪ್ರಭು, ಕೆ.ಎಸ್. ಶ್ರೀಧರ್ ಮುಂತಾದವರು.
ರೇಟಿಂಗ್ : 3.5/5
ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಅನಂತನಾಗ್ ಅಭಿನಯದ ನಾ ನಿನ್ನ ಬಿಡಲಾರೆ’ ಚಿತ್ರಕ್ಕೂ ಈಗ ಬಿಡುಗಡೆಯಾದ ಚಿತ್ರಕ್ಕೂ ಸಾಮ್ಯ ಇರೋದು ಟೈಟಲ್ ಮಾತ್ರ.
ನವೆಂಬರ್ 29ರಂದು ತೆರೆಕಂಡ ‘ನಾ ನಿನ್ನ ಬಿಡಲಾರೆ’ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಒಂದು ಪ್ರಯತ್ನವಾಗಿದೆ. ಈ ಚಿತ್ರದಲ್ಲಿ ಹೆಚ್ಚಿನ ಪಾತ್ರವರ್ಗ ಹೊಸಬರಾಗಿದ್ದರೂ, ಅವರ ಉತ್ಸಾಹ ಮತ್ತು ನಿಷ್ಠೆಯು ತೆರೆ ಮೇಲೆ ಸ್ಪಷ್ಟವಾಗಿ ಕಂಡುಬರುತ್ತದೆ.
ದೆವ್ವ ಹಾಗೂ ರಾಘವೇಂದ್ರ ಸ್ವಾಮಿ ವಿಚಾರದಲ್ಲಿ ಮಾತ್ರ ಈ ಕಥೆ ವಿಭಿನ್ನವಾಗಿದೆ ಎಂದು ಹೆಳಭಹುದು. ದೆವ್ವದ ಕಥೆಯೆ ಸಿನಿಮಾ ಹೈಲೈಟ್.
ಚಿತ್ರದ ಕಥೆ ಸಾಮಾನ್ಯವಾಗಿ ಆರಂಭವಾದರೂ, ಇಂಟರ್ವಲ್ ಬಳಿಕ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತದೆ. ನಿರ್ದೇಶಕ ನವೀನ್ ಜಿಎಸ್, ಒಂದು ವಿಭಿನ್ನ ವಿಷಯವನ್ನು ಕಥೆಯಲ್ಲಿ ಹೆಣೆದಿರುವುದು ಚಿತ್ರದ ಹೈಲೈಟ್.
ನದಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವ ನಾಯಕಿಗೆ ಚಿಕಿತ್ಸೆ ಕೊಡಸಿ ಮರುಜೀವ ಕೊಡುತ್ತಾನೆ ನಾಯಕ. ನಟಿ ಅಂಬಾಲಿ ಭಾರತಿ ಅವರ ಚೊಚ್ಚಲ ಪ್ರಯತ್ನ ಯಶಸ್ವಿಯಾಗಿದೆ. ಅವರ ಅಭಿನಯ ಮತ್ತು ಆ್ಯಕ್ಷನ್ ಪ್ರದರ್ಶನ ಗಮನ ಸೆಳೆಯುತ್ತವೆ. ಇತರ ಪಾತ್ರವರ್ಗದವರು ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವಿಶೇಷವಾಗಿ ಲೋಹಿತ್ ಅವರ ನಟನೆ ಪ್ರೇಕ್ಷಕರನ್ನು ಮೆಚ್ಚಿಸುವಂತಿದೆ.
ವೀರೇಶ್ ಅವರ ಛಾಯಾಗ್ರಹಣ ಮತ್ತು ತ್ಯಾಗರಾಜ್ ಅವರ ಸಂಗೀತ ಚಿತ್ರಕ್ಕೆ ಹೆಚ್ಚಿನ ಮೆರುಗು ನೀಡಿವೆ.
ಒಟ್ಟಾರೆ, “ನಾ ನಿನ್ನ ಬಿಡಲಾರೆ” ಚಿತ್ರವು ಹೊಸ ಪ್ರತಿಭೆಗಳನ್ನು ಬೆಳೆಸುವ ದೃಷ್ಟಿಯಿಂದ ಒಂದು ಪ್ರಯೋಗಾತ್ಮಕ ಚಿತ್ರವಾಗಿದೆ.
Be the first to comment