ಮೈಸೂರು: ನಗರದ ನಜರ್ ಬಾದ್ ನಲ್ಲಿರುವ ದಿ ವಿಂಡ್ ಫ್ಲವರ್ ರೆಸಾರ್ಟ್ಸ್ ಮತ್ತು ಸ್ಪಾದಲ್ಲಿ ಶುಕ್ರವಾರದಿಂದ ಮೂರುದಿನಗಳ ಕಾಲ ಮೈಸೂರು ಫ್ಯಾಷನ್ ವೀಕ್ ಸೀಸನ್-5 ನಡೆಯಲಿದ್ದು, ರೂಪದರ್ಶಿಯರು ವಿವಿಧ ವಿನ್ಯಾಸದ ಉಡುಗೆಗಳನ್ನು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು
ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಫ್ಯಾಷನ್ ವೀಕ್ ಸೀಸನ್-5 ಆಯೋಜಿಸಿದ್ದು, ರೂಪದರ್ಶಿಯರು ಮೈಸೂರಿನ ಪಾರಂಪರಿಕ ಶೈಲಿಯ ಉಡುಗೆಗಳನ್ನು ಧರಿಸಿ ಗಮನ ಸೆಳೆದರು.
ನಟಿ ರಾಗಿಣಿ ದ್ವಿವೇದಿ ಸೇರಿದಂತೆ 20ಕ್ಕೂ ಅಧಿಕ ಮಂದಿ ರೂಪದರ್ಶಿಯರು ವಿವಿಧ ವಿನ್ಯಾಸದ ಉಡುಪು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಹೇಮಮಾಲಿನಿ ಲಕ್ಷ್ಮಣ್, ಅಂಜಲಿ ಲಾಮಾ ರ್ಯಾಂಪ್ ಮೇಲೆ ಹೆಜ್ಜೆ ಇಟ್ಟಾಗ ಫ್ಯಾಷನ್ ಪ್ರಿಯರು ತಮ್ಮ ಮೊಬೈಲ್ ಗಳಲ್ಲಿ ಅವರ ಚಿತ್ರಗಳನ್ನು ಸೆರೆಹಿಡಿದುಕೊಂಡರು.
RAGINI DWIVEDI FOR SHRAVAN KUMMAR ❤️
#raginidwivedi #love #mysorefashionweek
#mysore #karnataka #fashionweek #indianwear #indian #traditional
Pingback: Devops