ಮೈಲಾಪುರದ ರಿಯಾಲಿಟಿ ಅಂಬಿಗೊಂದು ಸ್ಪೆಷಲ್ ಸಾಂಗ್

ಮೈಲಾಪುರ ಎಂದಾಕ್ಷಣ ಚಿತ್ರರಂಗದ ಬಹುತೇಕರಿಗೆ ನೆನಪಾಗೋದು ಮೈಲಾಪುರ ಮೈಲಾರಿ ಹಾಡು. ಶಿವರಾಜ್ ಕುಮಾರ್ ಅಭಿನಯದ ಗುರುಕಿರಣ್ ಸಂಗೀತ ನಿರ್ದೇಶನದ ಮೈಲಾಪುರ ಮೈಲಾರಿ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಮತ್ತು ಮೈಲಾಪುರ ಎಂಬ ಊರನ್ನೂ ಸಾಕಷ್ಟು ಫೇಮಸ್ ಮಾಡಿತ್ತು. ಈಗ ಅದೇ ಊರಿನ ಹೆಸರಿನೊಂದಿಗೆ ಮೈಲಾಪುರ ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಫಣೀಶ್ ಭಾರಧ್ವಾಜ್.

ಈಗ ಮೈಲಾಪುರ ಚಿತ್ರವನ್ನು ಸೆನ್ಸಾರ್ ಗೆ ಕಳುಹಿಸಲಾಗಿದ್ದು ಈ ತಿಂಗಳ ಒಳಗೆ ಚಿತ್ರ ಸೆನ್ಸಾರ್ ಆಗಲಿದೆ. ಮೈಲಾಪುರ ಚಿತ್ರದ ವಿಶೇಷ ಎಂದರೆ ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆನಪಿನಲ್ಲಿ ಅವರಿಗೆ ಒಂದು ಟ್ರಿಬ್ಯೂಟ್ ಎನಿಸುವಂಥ ಹಾಡನ್ನು ಪ್ಲ್ಯಾನ್ ಮಾಡುತ್ತಿದೆ ಚಿತ್ರತಂಡ. ಮೇ ಅಂತ್ಯ ಅಥವಾ ಜೂನ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿರುವ ಮೈಲಾಪುರ ತಂಡ ಇನ್ನೇನು ಪ್ರಚಾರದ ಕೆಲಸವನ್ನು ಶುರು ಮಾಡಲಿದೆ.

ವಿ, ಅಂತರಿಕ್ಷ ಅವರ ನಿರ್ಮಾಣದ ಈ ಚಿತ್ರದಲ್ಲಿ ರಿಯಾಲಿಟಿ ಶೋಗಳ ರಿಯಲ್ ಕಥೆ ಇದೆ. ನಿರ್ಮಾಪಕರು ನಾರ್ಮಲ್ ಕಥೆ ಬೇಡ ಎಂದು ಹೇಳಿದ್ದಕ್ಕೆ ಈ ವಿಭಿನ್ನ ಕಥೆಯನ್ನು ಯೋಚನೆ ಮಾಡಿ ಸಿನಿಮಾ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಫಣೀಶ್. ಮೈಲಾಪುರ ಎಂಬ ಊರಿನಲ್ಲಿ ನಡೆಯುವ ರಿಯಾಲಿಟಿ ಶೋನ ಕಥೆ ಇರುವ ಚಿತ್ರದಲ್ಲಿ ಭರತ್, ಐಶ್ವರ್ಯಾ ಸಿಂಧೋಗಿ, ಶಿಲ್ಪಾ, ಮನ್ ದೀಪ್ ರಾಯ್ ಅಭಿನಯಿಸಿದ್ದು, ಈಗ ಬಿಗ್ ಬಾಸ್ ನಲ್ಲಿ ಇರುವ ನಿಧಿ ಸುಬ್ಬಯ್ಯ ವಿಶೇಷವಾಗಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಬಿಗ್ ಬಾಸ್ ಕಿಶನ್ ಕೂಡ ಅತಿಥಿ ಪಾತ್ರ ಮಾಡಿದ್ದಾರೆ. ರಿಯಾಲಿಟಿ ಶೋನ ಕಂಟೆಸ್ಟೆಂಟ್ ಗಳಾಗಿ ಇರುವ ಅನೇಕ ಕಲಾವಿದರಿಗೆ ಡೈರೆಕ್ಟರ್ ಆಗಿ ಐಶ್ವರ್ಯಾ ಅವರು ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಚಿತ್ರದಲ್ಲಿ ಅಮ್ಮ ಮಗಳ ಸೆಂಟಿಮೆಂಟ್ ಕೂಡ ಇದೆಯಂತೆ.
ರೋಹಿತ್ ಅನಿಲ್ ಮತ್ತು ಸೂರಜ್ ಜೋಯಿಸ್ ಮೈಲಾಪುರ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು

ಎ2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಜನಪ್ರಿಯವಾಗಿವೆ. ಕಾಸು ಕಾಸು ಎನ್ನುವ ಹಾಡಿನೊಂದಿಗೆ ಅದೇ ಕಾಸನ್ನು ಇಟ್ಟುಕೊಂಡು ಬನ್ನಿ ಪಾರ್ಟಿ ಮಾಡೋಣ ಎನ್ನುತ್ತದೆ. ಚಿತ್ರರಂಡ. ಹಾಗೆಯೇ, ಇನ್ನೆರಡು ಹಾಡುಗಳಲ್ಲಿ ಹೀಗೆ ಯಾಕೆ ಆಯ್ತು ಜೀವನ ಎನ್ನುತ್ತಾ ಮುಂದೆ ಏನು ಮಾಡೋದು ಎಂದು ಯೋಚನೆ ಮಾಡುತ್ತದೆ. ಒಟ್ಟಿನಲ್ಲಿ ವಿಶಿಷ್ಠ ಹಾಡುಗಳಿಂದ ಮೈಲಾಪುರದ ಹಾಡುಗಳು ಆನ್ ಲೈನ್ ನಲ್ಲಿ ಒಳ್ಳೆಯ ಮೈಲೇಜ್ ಅನ್ನೇ ಗಳಿಸಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!