ಸೈಕೊ ಖ್ಯಾತಿಯ ಧನುಶ್ ನಟನೆಯ ಚಿತ್ರ ‘ಮುತ್ತು ಕುಮಾರ’ದ ಆಡಿಯೋ ಸಿಡಿ ಬಿಡುಗಡೆಯನ್ನು ರಾಘವೇಂದ್ರ ರಾಜ್ ಕುಮಾರ್ ಅವರು ನಿರ್ವಹಿಸಿದರು.ನಿರ್ದೇಶಕ ರವಿ ಸಾಗರ್ ಈ ಚಿತ್ರಕ್ಕೆ ಮುತ್ತು ಕುಮಾರ ಎನ್ನುವ ಹೆಸರಿಡಲು ತಾವು ರಾಜ್ ಕುಮಾರ್ ಅಭಿಮಾನಿಯಾಗಿರುವುದೇ ಕಾರಣ ಎಂದು ಮಾತು ಆರಂಭಿಸಿದರು. ಚಿತ್ರದಲ್ಲಿ ತಂದೆ ಮಗನ ಸೆಂಟಿಮೆಂಟ್ ಇದೆ. ಧನುಶ್ ಜೋಡಿಯಾಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ.
ಚಿತ್ರದಲ್ಲಿ ನಾಯಕನ ಹೆಸರೇ ಮುತ್ತು ಕುಮಾರ. ನಾಯಕಿಗೆ ಇಡೀ ಹಳ್ಳಿಯನ್ನು ಆರ್ಗಾನಿಕ್ ಆಗಿ ಇರಿಸಬೇಕು ಎನ್ನುವುದೇ ಆಸೆ. ಆ ಪ್ರಯತ್ನದಲ್ಲಿ ನಾಯಕ ಏನು ಮಾಡುತ್ತಾನೆ ಎನ್ನುವುದೇ ಚಿತ್ರದ ಸಾರಾಂಶ ಎಂದರು. ಈಗಾಗಲೇ ತೆಲುಗಲ್ಲಿ ಒಂದು ಚಿತ್ರಕ್ಕೆ ಸಂಗೀತ ನೀಡಿರುವ ಕಿರಣ್ ಶಂಕರ್ ಸಂಗೀತದಲ್ಲಿ ಐದು ಹಾಡುಗಳಿವೆ. ಇಡೀಚಿತ್ರ ಹಳ್ಳಿಯಲ್ಲಿ ನಡೆಯುವ ಕತೆ ಹೊಂದಿದ್ದು ಜಾನಪದ ಶೈಲಿಯಲ್ಲಿ ಗೀತೆಗಳನ್ನು ತಯಾರು ಮಾಡಲಾಗಿದೆ. ಖವಾಲಿ, ಸೂಫಿ ಮಿಕ್ಸ್ ಮಾದರಿಯ ಹಾಡುಗಳಿರುವುದಾಗಿ ಕಿರಣ್ ಶಂಕರ್ ಹೇಳಿದರು.
ಚಿತ್ರದ ನಾಯಕ ಧನುಶ್ ಮಾತನಾಡಿಸೈಕೋ, ಖೈದಿಯ ಬಳಿಕ ನಟಿಸಿರುವ ಚಿತ್ರ ಇದಾಗಿದ್ದು ಇದರ ಸಬ್ಜೆಕ್ಟ್ ತುಂಬ ಚೆನ್ನಾಗಿದ್ದ ಕಾರಣ ಆಸಕ್ತಿಯಿಂದ ಅಭಿನಯಿಸಿರುವುದಾಗಿ ಹೇಳಿದರು. ಜನುಮದ ಜೋಡಿಯಂಥ ಹಳ್ಳಿ ಸಿನಿಮಾ ನೋಡಿ ಮೆಚ್ಚಿದ್ದ ತಮಗೆ ಇಂಥ ಪಾತ್ರ ದೊರಕಿರುವುದು ಖುಷಿ ತಂದಿದೆ. ಹಳ್ಳಿಯ ಬಾಲ್ಯದ ಸಹಪಾಠಿ ಹುಡುಗಿ ನಗರಕ್ಕೆ ಹೋದವಳು ಮರಳಿ ಹಳ್ಳಿಗೆ ಬಂದಾಗ ಏನು ನಡೆಯುತ್ತದೆ ಎನ್ನುವುದು ಚಿತ್ರದ ಮುಖ್ಯ ವಿಚಾರ ಎಂದರು.
ಸಂಚಿತಾ ಪಡುಕೋಣೆ ಮಾತನಾಡಿ ಸತ್ಯಹರಿಶ್ಚಂದ್ರದ ಬಳಿಕ ಇದು ಕನ್ನಡದಲ್ಲಿ ನನ್ನ ಕಂಬ್ಯಾಕ್ ಎಂದರು. ಸಂಜನಾ ಗಲ್ರಾನಿಯವರಿಗೆ ಇದರಲ್ಲಿ ಗ್ಲಾಮರ್ ಬೊಂಬೆಯಾದರೂ ಅರ್ಥಪೂರ್ಣ ಎಂಟ್ರಿ ಇದೆ ಎಂದು ತಿಳಿಸಿದರು. ಲಹರಿ ಆಡಿಯೋ ಮಾಲೀಕ ವೇಲು ಅವರು ಚಿತ್ರದಲ್ಲಿ ಕೃಷಿಯ ಬಗ್ಗೆ ಇರುವುದು ಖುಷಿಯಿದೆ ಎಂದವರು, ಎಂಬತ್ತರ ದಶಕದಲ್ಲಿ ತಾವು ಕೂಡ ರೈತರಾಗಿರುವುದಾಗಿ ತಿಳಿಸಿದರು.
ಛಾಯಾಗ್ರಹಕ ಮಹೇಶ್ ತಲಕಾಡು ಅವರು ವಿ.ಕೆ ಮೂರ್ತಿಯವರ ಶಿಷ್ಯರಾಗಿದ್ದು ಚಿತ್ರವನ್ನು ತಮ್ಮ ಛಾಯಾಗ್ರಹಣದ ಮೂಲಕ ಸುಂದರಗೊಳಿಸಿರುವುದಾಗಿ ತಂಡ ಹೇಳಿತು. ರಾಘವೇಂದ್ರ ರಾಜಕುಮಾರ್ ಮತ್ತು ಜನಪ್ರಿಯ ನಂದ ಕಿಶೋರ್ ಆಡಿಯೋ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
Pingback: Buy Sex Toys Online