ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ ಅಜನೀಶ್ ಲೋಕನಾಥ್ ವಿರುದ್ಧ ಮತ್ತೆ ಕೃತಿಚೌರ್ಯದ ಆರೋಪ ವ್ಯಕ್ತವಾಗಿದೆ.
ಯುವ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್, ‘ಡೆವಿಲ್’ ಚಿತ್ರದ ‘ಅಲೋಹೊಮರ’ ಹಾಡಿನ ಬೀಟ್ ತಮ್ಮದೇ ರಚನೆ ಎಂದು ಹೇಳಿದ್ದಾರೆ. ಆರು ದಿನಗಳ ಹಿಂದೆ ಬಿಡುಗಡೆಯಾದ ‘ಅಲೋಹೊಮರ ‘ ಈಗ ವಿವಾದದ ಕೇಂದ್ರವಾಗುತ್ತಿದೆ.
ತನ್ಮಯ್ ಗುರುರಾಜ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಬಿಡುಗಡೆ ಮಾಡಿ, ‘ಅಲೋಹೊಮರ’ ಹಾಡಿನ ಬೀಟ್ ಹಾಗೂ ತಾವು ಮಿಸ್ಸಿಂಗ್ ಎನ್ನುವ ಸಿನಿಮಾಕ್ಕೆ ಮಾಡಿದ ಬೀಟ್‌ಗಳನ್ನು ಪ್ಲೇ ಮಾಡಿದ್ದಾರೆ. ಇದು ತಮ್ಮ ಮೂಲ ಸಂಗೀತ ಎಂಬುದನ್ನೂ ತಿಳಿಸಿದ್ದಾರೆ. ಅಜನೀಶ್ ವಿರುದ್ಧ ಅವರು ನೇರವಾಗಿ ಯಾವುದೇ ಕೃತಿಚೌರ್ಯದ ಆರೋಪ ಮಾಡಿಲ್ಲ.
“ಸಂಗೀತ ಕ್ರಿಯಾತ್ಮಕ ವಲಯ. ಒಂದೇ ಐಡಿಯಾ ಹಲವರಿಗೆ ಬರಬಹುದು. ಮುಂದೊಂದು ದಿನ ಕನ್ನಡಿಗರು ಹೆಮ್ಮೆಪಡುವಂಥ ಸಂಗೀತ ನೀಡಲು ಪ್ರಯತ್ನಿಸುತ್ತೇನೆ” ಎಂದೇ ವಿನಯಪೂರ್ವಕ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ತನ್ಮಯ್ ಅವರಿಗೆ ಕ್ರೆಡಿಟ್ ಕೊಡಬೇಕು” ಎಂದು ಒತ್ತಾಯಿಸುತ್ತಿದ್ದಾರೆ. ಇನ್ನೂ ಕೆಲವರು ಅಜನೀಶ್ ಅವರನ್ನು ಕೃತಿಚೌರ್ಯಕ್ಕೆ ಹೊಣೆಗಾರರನ್ನಾಗಿ ಮಾಡಿದ್ದಾರೆ.
‘ಅಲೋಹೊಮರ’ ಹಾಡಿನ ಒಂದು ನಿರ್ದಿಷ್ಟ ಬೀಟ್ ಹೊರತುಪಡಿಸಿ ಇತರೆ ಭಾಗಗಳು ಮಿಸ್ಸಿಂಗ್ ಚಿತ್ರದ ಸಂಗೀತಕ್ಕೆ ಹೋಲಿಕೆ ಇಲ್ಲ. ಆದರೆ ‘ರತತ್ತತ್ತ ಥಾ…’ ಬೀಟ್ ಒಂದೇ ರೀತಿಯದಾಗಿ ಕೇಳಿಸುತ್ತದೆ. ಆದರೆ ಟೆಂಪೊ–ಸ್ಪೀಡ್ ಸ್ವಲ್ಪ ಬದಲಾಗಿದೆ.
ಈ ಕುರಿತು ಅಜನೀಶ್ ಲೋಕನಾಥ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
—–





Be the first to comment