ಮುರುಗ s/o ಕಾನೂನು

ಯಶಸ್ವಿ 25ನೇ ದಿನದ ಖುಷಿಯಲ್ಲಿ ಮುರುಗ s/o ಕಾನೂನು

ಕೊಡೆಮುರುಗ ಖ್ಯಾತಿಯ ಮುನಿಕೃಷ್ಣ ಅಭಿನಯಿಸಿ, ನಿರ್ಮಿಸಿರುವ ” ಮುರುಗ S/O ಕಾನೂನು” ಚಿತ್ರದ ಯಶಸ್ವಿ 25 ನೇ ದಿನದ ಸಂಭ್ರಮದಂತ ಮುನ್ನುಗ್ಗುತ್ತಿದೆ.

ಹಿಂದೆ ಸಿನಿಮಾದಲ್ಲಿ ನಾಯಕ ಹೀಗೆ ಇರಬೇಕು ನಿರ್ದೇಶಕರು ಅದನ್ನು ಬದಿಗೊತ್ತಿ, ತಮ್ಮ ಚಿತ್ರದಲ್ಲಿ ಕಥೆಯೇ ನಾಯಕನನ್ನಾಗಿಸುತ್ತಿದ್ದಾರೆ. ಅಂತಹ ಸಿನಿಮಾಗಳಲ್ಲಿ ಮುರುಗ ಸನ್ ಆಫ್ ಕಾನೂನು ಕೂಡ ಒಂದು. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮುರುಗನ ಸುತ್ತ ಚಿತ್ರದ ಕಥೆ ಸಾಗುತ್ತದೆ.

ಇಲ್ಲಿ ಎಲ್ಲಾ ಪಾತ್ರಗಳಿಗೂ ಮಹತ್ವ ನೀಡಲಾಗಿದೆ. ಕಿರುತೆರೆಯಲ್ಲಿ ಖಳನಾಗಿ ಪ್ರಸಿದ್ದಿ ಪಡೆದಿದ್ದ, ಮುನಿಕೃಷ್ಣ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಸಮಾಜಕ್ಕೆ ಕಂಟಕವಾದ ದುರುಳರನ್ನು ಹೆಡೆಮುರಿ ಕಟ್ಟುವ ದಿಟ್ಟ ಹೋರಾಟಗಾರನಾಗಿ ಮಿಂಚಿದ್ದಾರೆ.

ಇದರ ಜತೆಗೆ ಹಿರಿಯ ನಟ ರಮೇಶ್ ಭಟ್, ಡ್ರಿಲ್ಲರ್ ಮಂಜು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್ ಸೇರಿದಂತೆ ದೊಡ್ಡ ಬಳಗವೇ ಚಿತ್ರದಲ್ಲಿದೆ. ಮುರುಗ ಇಪ್ಪತ್ತೈದು ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದು, ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ಸ್ಟಾರ್ ನಟರು ಇಲ್ಲಿದಿದ್ದರೂ, ಚಿತ್ರದ ಕಥೆ ನೋಡಿ ಸಿನಿಪ್ರಿಯರು ಮೆಚ್ಚಿದ್ದು, ನಮ್ಮಂತಹ ಹೊಸಬರನ್ನು ಗೆಲ್ಲಿಸಿದ್ದಾರೆ.

ಚಿತ್ರದ ಕಥೆ ಚೆನ್ನಾಗಿದ್ದರೆ ಸಿನಿಮಾ ಖಂಡಿತಾ ಗೆಲ್ಲುತ್ತದೆ ಎಂಬುದಕ್ಕೆ ನಮ್ಮ ಚಿತ್ರವೇ ಉದಾಹರಣೆ ಎನ್ನುತ್ತಾರೆ ನಿರ್ದೇಶಕರಲ್ಲಿ ವಿಜಯ್ ಪ್ರವೀಣ್. ಪ್ರಮುಖ ಪಾತ್ರದಲ್ಲಿ ನಟಿಸಿರುವ ಮುನಿಕೃಷ್ಣ ಅವರೆ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!