ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ ಬ್ಯಾನರ್ ಅಡಿ ಎನ್ಆರ್ಐ ಕನ್ನಡಿಗರು ನಿರ್ಮಿಸಿರುವ,ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿಬಂದ ‘ಮುಂದಿನ ನಿಲ್ದಾಣ’ ನೋಡುಗನ ಹೃದಯಕ್ಕಿಳಿದು ಭಾವನೆಗಳಿಗೊಂದು ಹೊಸ ರೂಪ ನೀಡಿದೆ. ನಟ ಪ್ರವೀಣ್ ತೇಜ್, ನಟಿ ರಾಧಿಕಾ ನಾರಾಯಣ್ ಹಾಗೂ ಅನನ್ಯ ಕಶ್ಯಪ್ ಪಾತ್ರಗಳು ನೋಡುಗನಿಗೆ ಕನೆಕ್ಟ್ ಆಗಿ ಚಿತ್ರ ಯಶಸ್ಸು ಕಂಡಿದೆ. ಆ್ಯಕ್ಷನ್, ರೌಡಿಸಂನಂತ ಮಾಸ್ ಚಿತ್ರಗಳ ಮಧ್ಯೆ ಕೌಟುಂಬಿಕ ಅಲ್ಲದೆ ಇದ್ದರೂ ಎಲ್ಲ ವರ್ಗಗಳ ಮನಗೆದ್ದ ಸಿನಿಮಾ ‘ಮುಂದಿನ ನಿಲ್ದಾಣ’ ಪ್ರೀತಿಯ ತ್ರೀಕೋನ ಕಥೆ ನೋಡುಗನ ಹೃದಯಕ್ಕಿಳಿದು ಭಾವನೆಗಳನ್ನು ಕೆಣಕುವುದು ಅಷ್ಟು ಸಲುಭವಲ್ಲ, ಇದನ್ನೂ ಸಾಧಿಸಿದೆ ‘ಮುಂದಿನ ನಿಲ್ದಾಣ’ ಚಿತ್ರತಂಡ
ಅನಿವಾಸಿ ಭಾರತೀಯರು ಸೇರಿಕೊಂಡು ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿಬಂದ ಅಸಹಜ ಯುವ ಪ್ರೇಮಕಥೆ ಯಶಸ್ಸಿನ ಖುಷಿಯಲ್ಲಿರುವ ಚಿತ್ರತಂಡ ಇತ್ತೀಚೆಗೆ ಪ್ರೆಸ್ ಮೀಟ್ ಕರೆದು ಕಥೆ ಹುಟ್ಟಿದ ಬಗೆ ಹಾಗೂ ಚಿತ್ರೀಕರಣದ ಕೆಲವು ನೆನಪುಗಳನ್ನು ಹಂಚಿಕೊಂಡಿತು ನಾಯಕನಾಗಿ ತೆರೆಮೇಲೆ ಕಂಡ ಪ್ರವೀಣ್ ತೇಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಬ್ಬರು ಪ್ರೇಯಸಿಯ ಮಧ್ಯೆ ತಳಮಳಿಸುವ ಈತನ ಮನಸ್ಥಿತಿ ಪ್ರೇಕ್ಷಕನೊಂದಿಗೆ ಬೇಗ ಕನೆಕ್ಟ್ ಆಗುತ್ತದೆ ಇನ್ನು ನಿಜ ಪ್ರೀತಿಗೆ ಜಯ ಸಿಗುವುದು ಮದುವೆಯಿಂದ ಮಾತ್ರ ಎಂದು ನಂಬುವ ರಾಧಿಕಾ ನಾರಾಯಣ್ ಮ್ಯಾನರಿಸಂ ಅದ್ಭುತವಾಗಿ ತೆರೆಮೇಲೆ ಮೂಡಿಬಂದಿದೆ ಡಾಕ್ಟರ್ ಆಗಿ ಲವ್ ಜಸ್ಟ್ ಪೀಸ್ ಆಫ್ ಲೈಫ್ ಎನ್ನುವ ನಟಿ ಅನನ್ಯ ಕಶ್ಯಪ್ ಈಗಿನ ಪೀಳಿಗೆಯ ಯುವತಿಯಾಗಿ ಮೆರೆದಿದ್ದಾರೆ.ಅಜಯ್ ರಾಜ್ ಹಾಗೂ ದತ್ತಣ್ಣ ಅವರ ಲವಲವಿಕೆಯ ಮಾತುಗಳು ಚಿತ್ರದ ಗುಣವನ್ನು ಹೆಚ್ಚಿಸುತ್ತದೆ. ಚಿತ್ರದ ಮತ್ತೊಂದು ಬೆಸ್ಟ್ ಪಾರ್ಟ್ ಅಂದರೆ ಛಾಯಾಗ್ರಹಣ. ಅಭಿಮನ್ಯು ಸದಾನಂದ್ ಅವರ ಕ್ಯಾಮರಾಸೆರೆ ಕಣ್ಣುಗಳಿಗೆ ಆನಂದವನ್ನು ನೀಡುತ್ತದೆ.
Pingback: auto glass shop La Habra CA