‘ಮುಂದಿನ ನಿಲ್ದಾಣ’ದಲ್ಲಿ ರವಿಚಂದ್ರನ್ ಪುತ್ರ

ಸಾಹೇಬ’ ಹಾಗೂ ‘ಬೃಹಸ್ಪತಿ’ ಚಿತ್ರಗಳಲ್ಲಿ ಪ್ರತಿಭಾವಂತ ಹುಡುಗನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಏಕ್ದಂ ರಫ್ ಅಂಡ್ ಟಫ್ ಲುಕ್ ನಲ್ಲಿ ಮಿಂಚಲು ಸಿದ್ಧತೆ ಮಾಡಿಕೊಂಡು ಒಮ್ಮೆಲೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು.
ಹೌದು, ಚಂದ್ರಕಲಾ ಅವರು ನಿರ್ದೇಶಿಸುತ್ತಿರುವ ಚಿಲ್ಲಂ ಚಿತ್ರಕ್ಕೆ ಮನೋರಂಜನ್ ನಾಯಕ ಅನ್ನೋದು ಗೊತ್ತಿರೋ ವಿಚಾರ . ಯಕ್ಷ ಚಿತ್ರದ ನಂತರ ಬಾಲಿವುಡ್ ನಟ ನಾನಾ ಪಾಟೇಕರ್,ಹಿರಿಯ ನಟಿ ಸರಿತಾ, ಮತ್ತೆ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಗೆ ಆಗಮಿಸುತ್ತಿರೋದು ಮತ್ತೊಂದು ವಿಷಯ.
ಎರಡು ಚಿತ್ರಗಳಲ್ಲಿ ಲವರ್ ಬಾಯ್ ಆಗಿ ಕಾಣಿಸ್ಕೊಂಡಿದ್ದ ಮನೋರಂಜನ್ ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ , ಗಾಂಜಾ ಸ್ಮಗ್ಲರ್ ನ ರಗಡ್ ಲುಕ್ ಗೆ ಮನೋರಂಜನ್ ಬಾಡಿ ಬಿಲ್ಡ್ ಮಾಡಿಕೊಂಡು , ‘ಚಿಲ್ಲಂ’ ಚಿತ್ರದಲ್ಲಿ ನಟಿಸುತ್ತಿರುವ ಮನು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ನವ ನಿರ್ದೇಶಕ ಮನು ಎಂಬುವವರು ‘ಮುಂದಿನ ನಿಲ್ದಾಣ’ ಎಂಬ ಕಥೆಯನ್ನು ಚಿತ್ರವನ್ನಾಗಿ ಮಾಡುತ್ತಿದ್ದು, ಈ ಚಿತ್ರದಲ್ಲಿ ಮನೋರಂಜನ್ ನಟಿಸುತ್ತಿದ್ದಾರೆ. ಈ ಮೂಲಕ ಹೊಸ ನಿರ್ದೇಶಕನಿಗೆ ಅವಕಾಶ ನೀಡುತ್ತಿದ್ದಾರೆ. ಇದೊಂದು ಸ್ವಮೇಕ್ ಚಿತ್ರವಾಗಿದ್ದು,ಈ ಚಿತ್ರದ ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ.
ಈ ಚಿತ್ರವನ್ನು ನಿರ್ದೇಶಕ ಮನು ಅವರ ಸಹೋದರ ಜಗದೀಶ್ ಎಂಬುವವರು ನಿರ್ಮಾಣ ಮಾಡುತ್ತಿದ್ದು, ಮುಂದಿನ ತಿಂಗಳು ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಸದ್ಯ ನಟಿಸುತ್ತಿರುವ ‘ಚಿಲ್ಲಂ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈ ಚಿತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಮನು.

This Article Has 1 Comment
  1. Pingback: cpns 2021 untuk smk

Leave a Reply

Your email address will not be published. Required fields are marked *

Translate »
error: Content is protected !!