ವಿಶೇಷ ಕಲ್ಪನೆಗಳ ಸರಮಾಲೆಯಲ್ಲಿ ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಇದೇ ಅಕ್ಟೋಬರ್ ತಿಂಗಳಲ್ಲಿ ತೆರೆ ಮೇಲೆ ಬರಲು ಸಜ್ಜಾದ “ಮುಂದಿನ ನಿಲ್ದಾಣ” ಚಿತ್ರ ತನ್ನ ವಿಶಿಷ್ಟ ರೀತಿಯ ಟೀಸರ್ ಹಾಗೂ ಪೋಸ್ಟರ್ ನಿಂದಲೇ ಚಿತ್ರದ ಬಗೆಗಿನ ಒಲವಿನ ನಿರೀಕ್ಷೆ ಯ ಬುಗ್ಗೆಯನ್ನು ಬಾನೆತ್ತರಕ್ಕೆ ಹಾರಿಸಿದೆ.
ಮನಸೇ ಮಾಯ ಹಾಡಿಗೆ ಕಿರಣ್ ಕಾವೇರಪ್ಪ ಬರೆದಿರುವ ಅದ್ಭುತ ಸಾಹಿತ್ಯದ ಜೊತೆಗೆ “ಮಸಾಲ ಕಾಫಿ ಬ್ಯಾಂಡ್” ಸಂಗೀತ ಸಂಯೋಜನೆ ಇದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಡುಗಾರ ಸೂರಜ್ ಸಂತೋಷ್ ಹಾಗೂ ವರುಣ್ ಸುನಿಲ್ ಸ್ವರ ನೀಡಿದ ಹಾಗೂ ಖ್ಯಾತ ನೃತ್ಯ ಸಂಯೋಜಕ ವಿಶ್ವ ಕಿರಣ್ ನಂಬಿ ಯವರು ಅನನ್ಯ ಕಶ್ಯಪ್ ರನ್ನು ಮನಸೇ ಮಾಯದ ರಾಗ – ತಾಳಕ್ಕೆ ಕುಣಿಸಿದ್ದಾರೆ. ಈ ಮುಂಚೆ ಮಹಾನಟಿ ತೆಲುಗು ಚಿತ್ರದ ಮೂಗ ಮನಸುಲು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು.
ವಿಶಿಷ್ಠ ರೀತಿಯಲ್ಲಿ ಈ ಹಾಡನ್ನು ಚಿತ್ರೀಕರಣವನ್ನು ಮಾಡಲಾಗಿದೆ. ಸಂಗೀತ, ನೃತ್ಯದ ಭಂಗಿಯ ಮಿಶ್ರಣವೇ ಒಂದು ಅದ್ಭುತ ಸಂಗತಿ. ಸಂಗೀತಗಾರರನ್ನು ಈ ಹಾಡಿನಲ್ಲಿ ನಟರಾದ ಪ್ರವೀಣ್ ತೇಜ್ ಹಾಗು ಅಜಯ್ ರಾಜ್ ಅವರ ಜೊತೆ ಚಿತ್ರಿಕರಿಸಿರುವುದು ತುಂಬಾ ವಿನೂತನವಾಗಿದೆ ಎಂದರೆ ತಪ್ಪಾಗಲಾರದು. ಹಿಂದಿ ಸಿನಿಮಾ “ರಾಝಿ” ಯಲ್ಲಿ nudisiruva ಅರ್ಷದ್ ಖಾನ್ ರವರು ಈ ಹಾಡಿನಲ್ಲಿ ಎಸ್ರಾಜ್ ವಾದ್ಯವನ್ನು ನುಡಿಸುತಿದ್ದರೆ.
ನೀವು ಈ ಹಾಡಿನ ದೃಶ್ಯಗಳನ್ನ ಗಮನ ಕೊಟ್ಟು ನೋಡಿದರೆ ಖಾಲಿ ಬಾವಿಯ ಸುತ್ತ ಇದರ ಚಿತ್ರೀಕರಣವನ್ನ ಮಾಡಿದೆ ಈ ಯುವಕರ ತಂಡ. ತುಂಬಾ ಕಷ್ಠಕರವಾದರೂ ತುಂಬಾ ಇಷ್ಠ ಪಟ್ಟು ಮಾಡಿರುವ ಕೆಲ್ಸದ ಫಲ ನಾವೆಲ್ಲರೂ ನೋಡಿ ಆಹ್ಲಾದಿಸುತಿದ್ದೇವೆ. ಸ್ಯಾಂಡಲ್ವುಡ್ ನಲ್ಲಿ ಈ ತರಹದ ಪ್ರಯತ್ನ ಮೊದಲ ಬಾರಿಗೆ ನೋಡುತಿದ್ದೇವೆ. ಕ್ಯಾಮೆರಾ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸಿರುವುದು ಅಭಿಮನ್ಯು ಸದಾನಂದನ್, ಗ್ರೇಡಿಂಗ್ ಕೆಲಸವನ್ನು ಸಿದ್ಧಾರ್ಥ ಗಾಂಧಿ (ರೆಡ್ ಚಿಲ್ಲೀಸ್ ಕಲರ್) ಅವರು ಮಾಡಿದರೆ, ನಿರ್ದೇಶನ ವಿನಯ್ ಭರದ್ವಾಜ ಅವರದು. ಈ ಸುಮಧುರ ಸುಂದರ ಹಾಡು PRK ಆಡಿಯೋ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಯಾಗಿದೆ.
Pingback: DevOps Services
Pingback: CI CD