ಈಗೆಲ್ಲಾ ರೆಗ್ಯುಲರ್ ಮರಸುತ್ತೊ ಕಥೆಗಳೇ ಜಾಸ್ತಿ, ಆದ್ರೆ ಈಗಿನ ಯುವಜನಾಂಗ ಒಂಚೂರುಮುಂದೆ ಇದಾರೆ, ವಾಟ್ ನೆಕ್ಸ್ಟ್ ಬ್ರೋ ಅಂತ ಎಲ್ಲದಕ್ಕೂ ಕೇಳ್ತಿರ್ತಾರೆ. ಈಗಿನ ಕಾಲಕ್ಕೆ ತಕ್ಕಂತೆ,ಈಗಿನವರಿಗೆಇಷ್ಟವಾಗುವಂತೆ ಬರ್ತಿರೋದು ಈ ‘ಮುಂದಿನ ನಿಲ್ದಾಣ’ ಅನ್ನೊ ಸಿನಿಮಾ,ಹಾಗಂದ್ಮಾತ್ರಕ್ಕೆ ಇದು ಬರೀ ಯಂಗ್‍ಸ್ಟರ್ಸ್ ಲವ್‍ಸ್ಟೋರಿ ಮಾತ್ರ ಅಲ್ಲ ದೊಡ್ಡೋರು, ಚಿಕ್ಕೋರು ಸೇರ್ದಂತೆ ಇಡೀ ಫ್ಯಾಮಿಲಿಗೆ ಈ ಸಿನಿಮಾದಲ್ಲಿ ಫುಲ್ ಪ್ಯಾಕೇಜ್ ಇದೆ. ಪ್ರವೀಣ್ ತೇಜ್ ಮತ್ತು ರಾಧಿಕಾ ಚೇತನ್ ಮುಖ್ಯಭೂಮಿಕೆಯಲ್ಲಿರೊ ಈ ಚಿತ್ರಕ್ಕೆ ಮಾತು ಕಥೆ ವಿನಯ್ ಜೊತೆ ಖ್ಯಾತಿಯ ವಿನಯ್ ಭಾರದ್ವಾಜ್ ನಿರ್ದೇಶನವಿದೆ. ಚಂದನವನದ ಕರ್ನಾಟಕದ ಹೆಮ್ಮೆಯ ಆಡಿಯೊ ಸಂಸ್ಥೆ ‘ಪಿಆರ್ ಕೆ ಆಡಿಯೊ ಈ ಚಿತ್ರದ ಆಡಿಯೊ ಹಕ್ಕುಗಳನ್ನ ಪಡೆದುಕೊಂಡಿದೆ.
ಭಿನ್ನ ನೆಲೆಯ, ತಮ್ಮದೇ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿರೊ ಏಳು ಪ್ರತಿಭಾವಂತ ಸಂಗೀತ ನಿರ್ದೇಶಕರು ಈ ಚಿತ್ರದ ಏಳು ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ, ಇದು ಬಿಡುಗಡೆಗೊಂಡಾಗ ಸಂಗೀತದ ಮೇಳ ಕೇಳುಗರಿಗೆ ಖಂಡಿತ ಖುಷಿ ನೀಡಲಿದೆ. ಪುನೀತ್ ರಾಜ್‍ಕುಮಾರ್ ಅವ್ರ ಒಡೆತನದ ಪಿಆರ್‍ಕೆ ಆಡಿಯೊ ಕಂಪೆನಿಗೆ ಒಂದು ಚಿತ್ರದ ಆಡಿಯೊ ಹಕ್ಕುಗಳು ಸೇಲಾಗಿವೆಅಂದ್ರೆ ಅದು ಸುಮ್ನೆ ಅಲ್ಲ. ಯಾಕಂದ್ರೆ ‘ಪಿಆರ್ ಕೆಗೆ ತನ್ನದೇ ಆದ ಒಂದು ಘನತೆ ಇದೆ, ಮುಂದಿನ ನಿಲ್ದಾಣದ ಆಡಿಯೋ ಪಿಆರ್‍ಕೆಯ ಮಹಾಸಾಗರಕ್ಕೆ ಸಂಗೀತ ಸುಧೆಯಂತೆ ಸೇರ್ಪಡೆಯಾಗಿದೆ. ಈ ಚಿತ್ರದ ಹಾಡಿನ ತುಣುಕುಗಳನ್ನ ಸ್ವತಃ ಅಪ್ಪು ನೋಡುತ್ತಿದ್ದಂತೆಯೇ ಮುಂದಿನ ನಿಲ್ದಾಣದ ಆಡಿಯೋಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೇ ಸುಸಂದರ್ಭದಲ್ಲಿ ಇದೇ ವಾರ ಚಿತ್ರದ ಬಹುನಿರೀಕ್ಷಿತ ಮೊದಲ ಪೋಸ್ಟರ್ ಬಿಡುಗಡೆಯಾಗಲಿದೆ.
ರಾಜ್‍ಕುಮಾರ್ ಅವರು ಖುಷಿಯಿಂದ ಹಾಡ್ತಿರೊ ಭಾವಚಿತ್ರವಿರೊ ‘ಪಿಆರ್ ಕೆ ಲೇಬಲ್ಲನ್ನ ತಮ್ಮದಾಗಿಸಿಕೊಳ್ಳೋದು ಎಷ್ಟೊ ಡೈರೆಕ್ಟರ್, ಮೇಕರ್‍ಗಳ ಕನಸು. ಆ ಕನಸನ್ನ ಕಾಣದೆಯೂ ನನಸಾಗಿಸಿಕೊಂಡಿದ್ದೇವೆ, ಅಣ್ಣಾವ್ರ ಭಾವಚಿತ್ರವಿರೊ ಈ ಲೇಬಲ್ಲು ನಮ್ಮ ಚಿತ್ರದ ಪೋಸ್ಟರ್‍ಗಳಲ್ಲಿ ಬರುತ್ತೆ ಅನ್ನೋದೆ ಮುಂದಿನ ನಿಲ್ದಾಣದ ಖುಷಿಯನ್ನ ಇಮ್ಮಡಿಗೊಳಿಸಿದೆ. ಅಷ್ಟೇ ಅಲ್ಲ ರಾಜ್‍ಕುಮಾರ್ ಅವರಂಥ ಶ್ರೇಷ್ಠ ಸಂಗೀತಯೋಗಿಯೇ ಈ ಚಿತ್ರಕ್ಕೆ ಆಶೀರ್ವದಿಸಿದಂತೆ ಭಾಸವಾಗ್ತಿದೆ. ಹಾಗಾಗಿ, `ಮುಂದಿನ ನಿಲ್ದಾಣ’ದ ಪೋಸ್ಟರ್ ಮತ್ತು ವೀಡಿಯೊಗಳನ್ನ ನಿಮ್ಮ ಮುಂದಿಡೋಕೆ ನಾವೂ ತುದಿಗಾಲಲ್ಲಿ ಕಾಯುತ್ತಿದ್ದೇವೆ. ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ನಿರ್ಮಾಣದ ‘ಮುಂದಿನ ನಿಲ್ದಾಣ’ ಚಿತ್ರ ಅಕ್ಟೋಬರ್‍ನಲ್ಲಿ ಭರ್ಜರಿಯಾಗಿ ತೆರೆಗೆ ಬರಲಿದೆ.
Be the first to comment