ಮಲ್ಟಿಪ್ಲೆಕ್ಸ್ ಟಿಕೆಟ್

ಮಲ್ಟಿಪ್ಲೆಕ್ಸ್​ ನಲ್ಲಿ ಟಿಕೆಟ್ ದರ ಕೇವಲ ರೂ. 99

ಸೆಪ್ಟೆಂಬರ್ 20 ರಂದು ರಾಷ್ಟ್ರೀಯ ಸಿನಿಮಾ ದಿನಾಚರಣೆಯಂದು ಕೇವಲ 99 ರೂಪಾಯಿ ಕೊಟ್ಟು ದೇಶಾದ್ಯಂತ ಮಲ್ಟಿಪ್ಲೆಕ್ಸ್‌ ಥಿಯೇಟರ್ ಗಳಲ್ಲಿ ಸಿನಿಮಾ ನೋಡಬಹುದು!

 ಸೆಪ್ಟೆಂಬರ್ 20 ರಂದು ಟಿಕೆಟ್ ದರ ಕೇವಲ ರೂ. 99 ಮಾತ್ರ ಇರುತ್ತದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಪ್ರಕಟಣೆ ಬಿಡುಗಡೆ ಮಾಡಿದೆ.

ಈ ಆಫರ್ ದೇಶಾದ್ಯಂತ 4,000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅನ್ವಯಿಸುತ್ತದೆ. IMAX, 4DX ಮತ್ತು ರಿಕ್ಲೈನರ್‌ ಗಳನ್ನು ಹೊಂದಿರುವ ಥಿಯೇಟರ್‌ ಗಳಲ್ಲಿ ಈ ಕೊಡುಗೆ ಅನ್ವಯಿಸುವುದಿಲ್ಲ.  ಐನಾಕ್ಸ್, ಸಿನಿಪೊಲಿಸ್, ಮಿರಾಜ್, ಸಿಟಿ ಪ್ರೈಡ್, ಏಷ್ಯನ್, ಮೂವಿ ಟೈಮ್, ಡಿಲೈಟ್ ಮುಂತಾದ ಥಿಯೇಟರ್ ಗಳಲ್ಲಿ ಈ ಆಫರ್ ಅನ್ವಯವಾಗಲಿದೆ ಎಂದು ಪಿವಿಆರ್ ಪ್ರಕಟಿಸಿದೆ.  ಒಂದು ದಿನದ ಎಲ್ಲಾ ಶೋಗಳಿಗೂ ಇದು ಅನ್ವಯವಾಗಲಿದೆ.

ಸಾಮಾನ್ಯ ಜನರು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡೋದೆ  ಕಷ್ಟವಾಗಿದೆ. ಹೊಸ ಸಿನಿಮಾಗಳು  ಬಿಡುಗಡೆಯಾದಾಗ ಟಿಕೆಟ್ ದರವನ್ನು  100 ರಿಂದ 120 ರೂಪಾಯಿಗಳಷ್ಟು ಹೆಚ್ಚಿಸುತ್ತಾರೆ. ಥಿಯೇಟರ್‌ಗಳಿಗೆ ಹೋಗುವುದಕ್ಕಿಂತ ಒಟಿಟಿಯಲ್ಲಿ ಸಿನಿಮಾ ನೋಡುವುದು ಉತ್ತಮ ಎಂದು ಹಲವರು ಭಾವಿಸುತ್ತಾರೆ. ಆದರೆ ಮಲ್ಟಿಪ್ಲೆಕ್ಸ್​ ನಲ್ಲಿ ಸಿನಿಮಾ ನೋಡಲು ಬಯಸುವವರಿಗೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದ ಗುಡ್ ನ್ಯೂಸ್ ಸಿಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!