ನಿವೇದಿತಾ ಗೌಡ

‘ಮುದ್ದು ರಾಕ್ಷಸಿ’ ಜೂನ್‌ನಲ್ಲಿ ಬಿಡುಗಡೆ

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಟನೆಯ ‘ಮುದ್ದು ರಾಕ್ಷಸಿ’ ಸಿನಿಮಾ ಜೂನ್ ನಲ್ಲಿ ಬಿಡುಗಡೆ ಆಗಲಿದೆ.

ವಿಚ್ಛೇದನ ಪಡೆದ ನಂತರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರನ್ನು ಒಂದಾಗಿಸಿ ಉಳಿದ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಲು ನಿರ್ಮಾಪಕರು ಯಶಸ್ವಿಯಾಗಿದ್ದಾರೆ. ಅಪೂರ್ಣವಾಗಿ ಉಳಿದ ಭಾವನಾತ್ಮಕ ದೃಶ್ಯಗಳನ್ನು ಚಿತ್ರೀಕರಣದ ಅಂತಿಮ ಹಂತಗಳಲ್ಲಿ ಚಿತ್ರೀಕರಿಸಲಾಯಿತು.

ನಿರ್ದೇಶಕ ಪುನೀತ್ ಶ್ರೀನಿವಾಸ್,  ದೂರವಾದ ನಂತರವೂ, ಅವರು ಸೆಟ್‌ನಲ್ಲಿ ಸಂಪೂರ್ಣವಾಗಿ ವೃತ್ತಿಪರರಾಗಿದ್ದರು. ಅವರು ಮನಪೂರ್ತಿ ಒಟ್ಟಿಗೆ ಕೆಲಸ ಮಾಡಿದರು. ಉಳಿದ ಭಾಗಗಳ ಶೂಟಿಂಗ್ ಮುಗಿಸಲು ನಾವು ಅವರನ್ನು ಸಂಪರ್ಕಿಸಿದಾಗ ಇಬ್ಬರೂ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡರು.   ಕೇವಲ ಒಂದು ದಿನದ ಚಿತ್ರೀಕರಣ ಮಾತ್ರ ಉಳಿದಿದೆ. ಜೂನ್‌ನಲ್ಲಿ ‘ಮುದ್ದು ರಾಕ್ಷಸಿ’ ಬಿಡುಗಡೆ ಮಾಡುತ್ತೇವೆ’ ಎಂದು  ಹೇಳಿದ್ದಾರೆ.

ಬೆಂಗಳೂರು ಮತ್ತು ಸುತ್ತಮುತ್ತ  ‘ಮುದ್ದು ರಾಕ್ಷಸಿ’  ಶೂಟಿಂಗ್ ನಡೆದಿದೆ.   ಚಿತ್ರವು ರೋಮ್ಯಾನ್ಸ್ ಮತ್ತು ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ. ಕಥೆ ಮತ್ತು ಚಿತ್ರಕಥೆಯನ್ನು ಪುನೀತ್ ಶ್ರೀನಿವಾಸ್ ಬರೆದಿದ್ದಾರೆ. ಎಂ.ಎಸ್. ತ್ಯಾಗರಾಜ್ ಅವರ ಸಂಗೀತ ಸಂಯೋಜನೆ, ಎ. ಕರುಣಾಕರ್ ಅವರ ಛಾಯಾಗ್ರಹಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!