ಮೃತ್ಯುಂಜಯನ ಥ್ರಿಲ್ಲರ್ ಕಹಾನಿ

ಮೃತ್ಯುವನ್ನು ಜಯಸುವವನಿಗೆ ‘ಮೃತ್ಯುಂಜಯ’ ಎಂದು ಕರೆಯುತ್ತಾರೆ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಪ್ರಚಾರದ ಮೊದಲ ಹಂತವಾಗಿ ನಟ ಯಶಸ್‌ಸೂರ್ಯ ಟೀಸರ್‌ನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

‘ಸ್ಚಚ್ಚ ಭಾರತ’ ಕಿರುಚಿತ್ರಕ್ಕೆ ಪ್ರಶಸ್ತಿ, ‘ಮಂತ್ರಂ’ ಚಿತ್ರವನ್ನು ನಿರ್ದೇಶನ ಮಾಡಿರುವ ಸಂಗಮೇಶ್.ಎಸ್.ಸಜ್ಜನ್ ಎರಡನೇ ಪ್ರಯತ್ನ ಎನ್ನುವಂತೆ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇವರ ಶ್ರಮಕ್ಕೆ ಶೈಲಜಾಪ್ರಕಾಶ್ ನಿರ್ಮಾಣ ಮಾಡಿರುವುದು ದ್ವಿತೀಯ ಅನುಭವ. ಸಾಮಾಜಿಕ ವಿಷಯಗಳನ್ನು ಸೆಸ್ಪೆನ್ಸ್ ಥ್ರಿಲ್ಲರ್ ಅಂಶಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.ಆತ್ಮಹತ್ಯೆ ವಿರುದ್ದ ಹೋರಾಟಕ್ಕೆ ಮುನ್ನಡಿ ಇರಲಿದೆ. ಇದರ ಹಿಂದೆ ಹೋಗುವ ಯುವ ಮನಸುಗಳನ್ನು ಪರಿವರ್ತನೆ ಮಾಡಿ ಅವರುಗಳನ್ನು ಸರಿದಾರಿಗೆ ತರುವುದು. ಇದಕ್ಕೆ ದಾಸರಾಗುವುದು ಎಷ್ಟು ತಪ್ಪು? ನಾವು ಬದುಕನ್ನು ಹೇಗೆ ನಡೆಸಬೇಕೆಂದು ಸಂದೇಶದಲ್ಲಿ ಸನ್ನಿವೇಶಗಳ ಮುಖಾಂತರ ತೋರಿಸಲಾಗಿದೆ.

ತಾರಗಣದಲ್ಲಿ ನಾಯಕ ಹಿತೇಶ್, ನಾಯಕಿ ಮಂಗಳೂರಿನ ಶ್ರೀಯಶೆಟ್ಟಿ ಇಬ್ಬರಿಗೂ ಹೊಸ ಅವಕಾಶ. ಮತ್ತೋಂದು ಮುಖ್ಯ ಪಾತ್ರದಲ್ಲಿ ಸೈಕಿಯಾಟ್ರಿಕ್ ವೈದ್ಯರಾಗಿ ಸುಮನ್‌ನಗರ್‌ಕರ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಟೋರಾಜ, ದುರ್ಗಾಪ್ರಸಾದ್, ಚೇತನ್‌ದುರ್ಗಾ, ಶಿವುಮಜಾಭಾರತ, ರಂಗಭೂಮಿ ಕಲಾವಿದೆ ಪವಿತ್ರ, ಚೈತ್ರಾ, ಬಾಬಣ್ಣ ಮುಂತಾದವರು ನಟಿಸಿದ್ದಾರೆ. ಬೆಂಗಳೂರು ಹಾಗೂ ಡಾಬಸಪೇಟೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಆನಂದ್‌ರಾಜ್ ವಿಕ್ರಂ, ಛಾಯಾಗ್ರಹಣ ವಡ್ಡೆದೇವೇಂದ್ರರೆಡ್ಡಿ, ಸಂಕಲನ ಸಾಯಿಸಂದೇಶ್ ಅವರದಾಗಿದೆ.

ಕರೋನ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ 198 ಗಂಟೆಗಳ ಕಾಲ ಸತತವಾಗಿ ಶೂಟ್ ಮಾಡಿರುವುದು. ಹಾಗೆಯೇ 800 ಜನರೊಂದಿಗೆ ಕ್ಲೈಮಾಕ್ಸ್ ದೃಶ್ಯಗಳನ್ನು ಸರೆಹಿಡಿದಿರುವುದು ವಿಶೇಷ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!