ಎಂ.ರಮೇಶ್ ರೆಡ್ಡಿ ನಿರ್ಮಾಣದಲ್ಲಿ “ದಿಲ್ ಹೈ ಗ್ರೇ” ಚಿತ್ರ ತೆರೆಗೆ ಬರಲು ರೆಡಿ

ಸ್ಯಾಂಡಲ್​ವುಡ್​ನಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಸೇರಿ ಹಲವು7 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಎಂ. ರಮೇಶ್ ರೆಡ್ಡಿ, ತಮ್ಮ ಹೋಮ್ ಬ್ಯಾನರ್ ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಹಿಂದಿ ಸಿನಿಮಾ ಪ್ರೊಡ್ಯೂಸ್ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಇದೀಗ ಆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ದಿಲ್ ಹೈ ಗ್ರೇ’ ಶೀರ್ಷಿಕೆಯುಳ್ಳ ಆ ಚಿತ್ರ ಇದೇ ಜುಲೈನಲ್ಲಿ ತೆರೆಗೆ ಬರಲಿದೆ.

ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಧಾನ ಮೂರು ಪಾತ್ರಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿದೆ. ವಿನೀತ್ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಆನ್​ಲೈನ್​ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವವನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ‘ಐರಾವತ’ ಖ್ಯಾತಿಯ ಊರ್ವಶಿ ರೌಟೇಲಾ ನಟಿಸಿದ್ದಾರೆ. ಸುಸಿ ಗಣೇಶನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ತಾರಿಕ್ ಮಹಮ್ಮದ್, ನವೀನ್ ಪ್ರಕಾಶ್ ಚಿತ್ರದ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ.

ಈ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರದ ಕಥೆಯೇ ರೋಚಕವಾಗಿದೆ. ಈ ಸಿನಿಮಾದಲ್ಲಿ ಕಥೆಯೇ ಹೀರೋ. ಕ್ರೈಂ ಥ್ರಿಲ್ಲರ್ ಎಳೆಯಲ್ಲಿ ಸಾಗುವ ಈ ಸಿನಿಮಾ ಪ್ರಸ್ತುತ ಕಾಲಘಟ್ಟ ಸೂಕ್ತವಾಗಿದೆ. ಇಂಥ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಮತ್ತವರ ತಂಡ ಯಶಸ್ವಿಯಾಗಿದೆ. ಸದ್ಯ ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದೆ. ಜುಲೈನಲ್ಲಿ ತೆರೆಗೆ ಬರಲಿದ್ದೇವೆ ಎನ್ನುತ್ತಾರೆ.

ನಿರ್ದೇಶಕ ಸುಸಿ ಗಣೇಶನ್ ಸಹ ಅಷ್ಟೇ ಎಗ್​ಸೈಟ್​ಮೆಂಟ್​ನಲ್ಲಿದ್ದಾರೆ. ಇಡೀ ಜಗತ್ತೇ ಇದೀಗ ಆನ್​ಲೈನ್ ಮಯವಾಗಿದೆ. ಆ ಆನ್​ಲೈನ್​ನಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ನಾವಿಲ್ಲಿ ಇಂಟರ್​ನೆಟ್​ನಿಂದ ಮಹಿಳೆಯರು ಎದುರಿಸುವ ಆತಂಕಕಾರಿ ಸಮಸ್ಯೆಗಳನ್ನು ತೋರಿಸಿದ್ದೇವೆ. ಸೈಬರ್ ಕ್ರೈಂನ ಮತ್ತೊಂದು ಮುಖವೂ ಅನಾವರಣಗೊಳ್ಳಲಿದೆ ಎಂದು ಮಾಹಿತಿ ನೀಡುತ್ತಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!