ಮಿಸ್ಟರ್ ರಾಣಿ

Movie Review: ರಾಜ ರಾಣಿ ಆಟದಲ್ಲಿ ಪ್ರೇಕ್ಷಕರಿಗೆ ನಗುವಿನ ಹಬ್ಬ

ಚಿತ್ರ: ಮಿಸ್ಟರ್ ರಾಣಿ
ನಿರ್ದೇಶನ: ಮಧುಚಂದ್ರ
ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್ ಮೊದಲಾದವರು
ರೇಟಿಂಗ್: 3.5

ಚಿತ್ರದ ಹೆಸರೇ ಸೂಚಿಸುವಂತೆ ಇಲ್ಲಿ ರಾಣಿಯೇ ರಾಜ.‌ ರಾಜನೇ ರಾಣಿ. ಪೋಸ್ಟರ್, ಟ್ರೇಲರ್ ಸೂಚಿಸಿದ ಹಾಗೆ ಹೆಣ್ಣಿನ ವೇಷದಲ್ಲಿ ಮೆರೆಯುವ ಗಂಡಿನ ಕತೆ ಇದು.

ಸಿನಿಮಾ ನಟನಾಗುವ ಕನಸಿನ ಹುಡುಗ ತಂದೆಯ ಒತ್ತಡಕ್ಕೆ ಮಣಿದು ಇಂಜಿಯರ್ ಆಗಬೇಕಾಗುತ್ತದೆ. ಆದರೆ ಪರಿಸ್ಥಿತಿ ಈತನನ್ನು ಸಿನಿಮಾ ಕಲಾವಿದೆಯಾಗಿ ಗುರುತಿಸುವಂತೆ ಮಾಡುತ್ತದೆ. ಆ ಘಟನೆ ಯಾವುದು? ಅಂಥದೊಂದು ತೀರ್ಮಾನದಿಂದ ಎದುರಿಸಬೇಕಾಗಿ ಬರುವ ಇಕ್ಕಟ್ಟುಗಳೇನು ಎನ್ನುವುದನ್ನು ಈ ಚಿತ್ರದಲ್ಲಿ ಸ್ವಾರಸ್ಯಕರವಾಗಿ ತೋರಿಸಲಾಗಿದೆ. ಅದೇ ಕಾರಣಕ್ಕಾಗಿ ಇದೊಂದು ಪರಿಪೂರ್ಣ ಹಾಸ್ಯಮಯ ಸಿನಿಮಾ. ಅದರಲ್ಲೂ ಕುಟುಂಬ ಸಮೇತ ನೋಡಬಹುದಾದ ಸಿನಿಮಾ.

ಚಿತ್ರದ ಎರಡು ಪ್ರಮುಖ ಪಾತ್ರಗಳನ್ನು ನಿಭಾಯಿಸಿರುವ ದೀಪಕ್​ಗೆ ಒಟ್ಟು ಮೂರು ಶೇಡ್​ಗಳಲ್ಲಿ ನಟಿಸುವ ಅವಕಾಶ ದೊರಕಿದೆ. ಸಿನಿಮಾದೊಳಗಿನ ಸಿನಿಮಾದ ನಾಯಕ, ನಾಯಕಿ ಮತ್ತು ಈ ಎರಡೂ ಪಾತ್ರಗಳನ್ನು ನಿಭಾಯಿಸುವ ಯುವಕ ಹೀಗೆ ಮೂರು ಶೇಡ್​ನಲ್ಲೂ ಪ್ರೇಕ್ಷಕರ ಮನಗೆಲ್ಲುತ್ತಾರೆ. ಅದರಲ್ಲೂ ಹುಡುಗಿಯ ಪಾತ್ರವಂತೂ ನಿಜಕ್ಕೂ ಹುಡುಗಿಯೇನೋ ಎನ್ನುವಷ್ಟು ನೈಜವಾಗಿ ಮೂಡಿ ಬಂದಿದೆ. ನಿರ್ದೇಶಕ ಮಧುಚಂದ್ರ ಸಿನಿಮಾದೊಳಗಿನ ಸಿನಿಮಾದಲ್ಲೂ ನಿರ್ದೇಶಕನ ಪಾತ್ರದಲ್ಲಿದ್ದಾರೆ. ಆದರೆ ಇಲ್ಲಿ ರಾಣಿಯ ಪಾತ್ರಕ್ಕೆ ಮನಸೋತ ಪಾಗಲ್ ಪ್ರೇಮಿಯಾಗಿದ್ದಾರೆ.

ಈ ಚಿತ್ರದ ಕತೆಗೆ ಸಂಬಂಧಿಸಿದಂತೆ ಬಳಸಲಾಗಿರುವ ಗ್ರಾಫಿಕ್ಸ್ ದೃಶ್ಯಗಳು ಆಕರ್ಷಕವಾಗಿವೆ. ಹಿನ್ನೆಲೆ ಸಂಗೀತ ಕೂಡ ಚಿತ್ರದ ಮತ್ತೊಂದು ಆಕರ್ಷಣೆ. ನಾಯಕನ ಪ್ರೇಯಸಿ ದೀಪಿಕಾ ಎನ್ನುವ ಚಿತ್ರ ನಟಿಯ ಪಾತ್ರದಲ್ಲಿ ಪಾರ್ವತಿ ನಾಯರ್ ನೈಜ ನಟನೆ ನೀಡಿದ್ದಾರೆ. ‘ಒಂದಲ್ಲ ಎರಡಲ್ಲ’ ಖ್ಯಾತಿಯ ನಟ ಆನಂದ್ ನಾಯಕನ ತಂದೆಯಾಗಿ ಗಮನ ಸೆಳೆಯುತ್ತಾರೆ.

ಮಿಸ್ಟರ್ ರಾಣಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!