ತನುಷ್ ಶಿವಣ್ಣ -ಸೋನಾಲ್ ಮೊಂತೆರೊ ಜೋಡಿಯ ಚಿತ್ರ “Mr ನಟ್ವರ್ ಲಾಲ್” ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿರುವ, ವಿ.ಲವ ನಿರ್ದೇಶನದ “Mr ನಟ್ವರ್ ಲಾಲ್” ಚಿತ್ರ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರ ಮನ ಗೆದ್ದಿದೆ.
ತನುಷ್ ಶಿವಣ್ಣ, ಸೋನಾಲ್ ಮೊಂತೆರೊ, ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿಲಿಯಂ ಡೇವಿಡ್ ಛಾಯಾಗ್ರಹಣ, ಧರ್ಮವಿಶ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಚಿತ್ರಕ್ಕಿದೆ.
—-

Be the first to comment