ನಟಿ ನಯನತಾರಾ ಕುರಿತು ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ನೀಡಿದ ಅವಹೇಳನಕಾರಿ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮಹಿಳೆಯರ ಸುರಕ್ಷತೆ ಕುರಿತ ಪ್ರತಿಭಟನೆ ಸಂದರ್ಭದಲ್ಲಿ ಸಿ.ವಿ. ಷಣ್ಮುಗಂ, “ನನಗೆ ನಯನತಾರಾ ಜೊತೆ ಮದುವೆಯಾಗಬೇಕೆಂಬ ಕನಸಿದ್ದರೆ, ಸ್ಟಾಲಿನ್ ಅದನ್ನು ಈಡೇರಿಸುತ್ತಾರಾ?” ಎಂಬ ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜನರಿಗೆ ತಮ್ಮ ಕನಸುಗಳನ್ನು ಹಂಚಿಕೊಳ್ಳುವಂತೆ ಕರೆ ನೀಡಿದ್ದನ್ನು ಟೀಕಿಸುವ ವೇಳೆ ಷಣ್ಮುಗಂ ಅವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಉಲ್ಲೇಖಿಸಿ ಅಸಭ್ಯ ಉದಾಹರಣೆ ನೀಡಿದ್ದಾರೆ. ಹೇಳಿಕೆ ನೀಡಿದ ವೇಳೆ ಇತರ ನಾಯಕರು ನಗುತ್ತಾ ಬೆಂಬಲ ಸೂಚಿಸಿದ್ದೂ ವಿವಾದವನ್ನು ಗಂಭೀರಗೊಳಿಸಿದೆ.
ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ ಸಿ.ವಿ. ಷಣ್ಮುಗಂಸಂಸದೀಯ ಘನತೆಯನ್ನು ಕಾಪಾಡಿಕೊಳ್ಳದೇ ನಟಿಯ ಬಗ್ಗೆ ಹಗುರವಾಗಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ. ಷಣ್ಮುಗಂ ತಕ್ಷಣ ನಯನತಾರಾ ಅವರಿಗೆ ಬೇಷರತ್ ಕ್ಷಮೆಯಾಚನೆ ಮಾಡಬೇಕು. ಪ್ರತಿನಿಧಿಗಳು ತಮ್ಮ ಮಾತುಗಳಲ್ಲಿ ಸಂಯಮ ಮತ್ತು ಗೌರವ ಕಾಪಾಡಿಕೊಳ್ಳಬೇಕು’ ಎಂದು ಆಗ್ರಹಿಸಿದೆ.
—-





Be the first to comment