ಇಂದು ತೆರೆ ಕಾಣುತ್ತಿರುವ ಚಿತ್ರಗಳು

ಸಹಾರಾ’:

ಮಹಿಳಾ ಕ್ರಿಕೆಟ್ ಕುರಿತಾಗಿನ ಕಥೆ ಹೊಂದಿರುವ ಚಿತ್ರ ‘ಸಹಾರಾ’ ಇಂದು ತೆರೆ ಕಾಣುತ್ತಿದೆ.

ನಟಿ ಸಾರಿಕಾ ರಾವ್‌ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಮಂಜೇಶ್‌ ಭಗವತ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಮಾ ಕ್ರಿಯೆಷನ್ಸ್ ನಿರ್ಮಾಣದ ಚಿತ್ರದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್ ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರ ಮಂಡ್ಯ ಹುಡುಗಿ ಕ್ರಿಕೆಟರ್ ಆದ ಕಥೆಯನ್ನು ಹೊಂದಿದೆ. ಸಾರಿಕಾ ರಾವ್  ರಣಜಿ ಆಟಗಾರರಾದ ಕೆ.ಬಿ. ಪವನ್ ಬಳಿ ಕ್ರಿಕೆಟ್ ಆಟದ ಬಗ್ಗೆ ತರಬೇತಿ ಪಡೆದುಕೊಂಡು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  ಕ್ರಿಕೆಟ್ ಆಧರಿಸಿದ  ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಆಂಥೋನಿ ರುತ್ ವಿನ್ಸೆಂಟ್ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತವಿದೆ.

ಯಂಗ್ ಮ್ಯಾನ್:

ಹೊಸಬರಿಂದ ಕೂಡಿರುವ ‘ಯಂಗ್‌ ಮ್ಯಾನ್‌’ ಚಿತ್ರ ಇಂದು ತೆರೆ ಕಾಣುತ್ತಿದೆ. ಮುತ್ತುರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಿಂಗಲ್ ಟೇಕ್‌ನಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಿರುವುದಾಗಿ ತಂಡ ಹೇಳಿದೆ. ಲೋಕಿ ಸಂಗೀತ ನಿರ್ದೇಶನ ಹಾಗೂ ನಾಗರಾಜ್ ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಸುನೀಲ್ ಗೌಡ, ರಾಶಿಕಾ ಕರಾವಳಿ, ಹರೀಶ್ ಆಚಾರ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಜಯಲಕ್ಷ್ಮಿ ರಾಮೇಗೌಡ ನಿರ್ಮಾಣ ಮಾಡಿದ್ದಾರೆ.

ಅನರ್ಥ:

ಧಾರಾವಾಹಿ ನಿರ್ದೇಶಕರಾಗಿದ್ದ ರಮೇಶ್ ಕೃಷ್ಣ ಆಕ್ಷನ್‌-ಕಟ್‌ ಹೇಳಿರುವ ‘ಅನರ್ಥ’ ಇಂದು ತೆರೆ ಕಾಣುತ್ತಿರುವ ಮತ್ತೊಂದು ಚಿತ್ರ.

ಚಿತ್ರಕ್ಕೆ ‘ಬಲಹೀನತೆಯಿಂದ ಕ್ರೂರತನ ಹುಟ್ಟುತ್ತದೆ’ ಎಂಬ ಅಡಿಬರಹವಿದೆ. ‘ಅವಕಾಶ್-ಆಕೃತಿ ಎರಡು ಪಾತ್ರಗಳ ಸುತ್ತ ಚಿತ್ರ ಸಾಗುತ್ತದೆ. ಇಬ್ಬರು ಪ್ರೀತಿಸಿ ಅಮಾವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ  ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು.

ನಾಯಕ ವಿಶಾಲ್ ಮಣ್ಣೂರು ಅವರಿಗೆ ವಿಹಾನಿ ಜೋಡಿಯಾಗಿದ್ದಾರೆ. ತೇಜಸ್ ಸಿನಿ ಕ್ರಿಯೇಶನ್ಸ್ ಮೂಲಕ ಶ್ರೀಧರ್‌ ಎನ್.ಸಿ.ಹೊಸಮನೆ ಬಂಡವಾಳ ಹೂಡಿದ್ದಾರೆ. ವಿ.ನಾಗೇಂದ್ರಪ್ರಸಾದ್ ಸಾಹಿತ್ಯ-ಸಂಗೀತ, ಕುಮಾರ್‌ಗೌಡ ನಾಗವಾರ ಛಾಯಾಗ್ರಹಣ ಚಿತ್ರಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!