ತನಿಖೆಯಲ್ಲೇ ಮ್ಯಾಜಿಕ್ ಮಾಡುವ ಶಿವಾಜಿ
ರೇಟಿಂಗ್ 4/5
ಚಿತ್ರ: ಶಿವಾಜಿ ಸುರತ್ಕಲ್
ತಾರಾಗಣ: ರಮೇಶ್ ಅರವಿಂದ್, ರಾಧಿಕಾ ನಾರಾಯಣ್
ನಿರ್ದೇಶನ: ಆಕಾಶ್ ಶ್ರೀವತ್ಸ
ನಿರ್ಮಾಪಕರು :ರೇಖಾ ಕೆ.ಎನ್ ಮತ್ತು ಅನುಪ ಗೌಡ
ಶಿವಾಜಿ ಸುರತ್ಕಲ್ ಎಂದರೆ ಕರ್ನಾಟಕದ ಷೆರ್ಲಾಕ್ ಹೋಮ್ಸ್ ಎಂದೇ ಹೆಸರು. ಯಾಕೆಂದರೆ ಆತ ಸುಳಿವನ್ನು ಪತ್ತೆ ಮಾಡುವ ರೀತಿ ಹಾಗಿರುತ್ತದೆ. ತುಸು ನಾಟಕೀಯ ಅನಿಸಿದರೂ, ಟ್ರ್ಯಾಕ್ ನಲ್ಲೇ ಸಾಗುವ ತನಿಖೆ. ಆತ ನಡೆಸುವ ಒಂದು ತನಿಖೆಯ ಸುತ್ತ ಆತನ ಬದುಕು ಕೂಡ ಸುತ್ತಿಕೊಳ್ಳುತ್ತದೆ. ಅದೇನು ತನಿಖೆ? ಆತನ ಬದುಕಿನ ಕತೆ ಏನು ಎನ್ನುವುದೇ ಚಿತ್ರ ಪ್ರಧಾನ ಅಂಶ.
ಗೃಹಮಂತ್ರಿಯ ಪುತ್ರನ ಲಾಡ್ಜ್ ಒಂದರಲ್ಲಿ ಹೆಣವಾಗಿ ಪತ್ತೆಯಾಗುತ್ತಾನೆ. ಅದು ಆತ್ಮಹತ್ಯೆ ಎನ್ನುವುದು ಮೇಲ್ನೋಟದ ವರದಿ. ಆದರೆ ಅದು ಒಂದು ಕೊಲೆಯನ್ನುವ ಸಂದೇಹ ತನಿಖಾಧಿಕಾರಿಯಾದ ಶಿವಾಜಿಯನ್ನು ಕಾಡುತ್ತದೆ. ಅದಕ್ಕೆ ಪೂರಕವಾದ ಸಾಕ್ಷಿಗಳು ಒಂದೊಂದೇ ದೊರಕುತ್ತಾ ಹೋಗುತ್ತದೆ. ಆತ ನಡೆಸುವ ತನಿಖೆಗೂ ವೈಯಕ್ತಿಕ ಬದುಕಿಗೂ ಸಂಬಂಧ ಏನು? ಅದು ತಳುಕು ಹಾಕುವ ಘಟನೆ ಯಾವುದು? ಎನ್ನುವುದೇ ಚಿತ್ರದ ಆಕರ್ಷಕ ಅಂಶ. ಅದನ್ನು ಚಿತ್ರ ಮಂದಿರದಲ್ಲಿ ನೋಡುವುದೇ ಚಂದ.
ಶಿವಾಜಿ ಸುರತ್ಕಲ್ ಪಾತ್ರದ ಮೂಲಕ ತನಿಖಾಧಿಕಾರಿಗೆ ಜೀವ ನೀಡಿದ್ದಾರೆ ರಮೇಶ್ ಅರವಿಂದ್. ಸುರತ್ಕಲ್ ಎಂದರೆ ಮಂಗಳೂರಿನ ಒಂದು ಭಾಗ. ಆದರೆ ಚಿತ್ರದಲ್ಲಿನ ಘಟನೆ ನಡೆಯುವುದು ಮಡಿಕೇರಿ ಭಾಗದಲ್ಲಿ. ರಣಗಿರಿಯ ಲಾಡ್ಜ್ ಅದರೊಳಗಿನ ಹನ್ನೊಂದು ಪಾತ್ರಗಳು ದೃಶ್ಯದಿಂದ ದೃಶ್ಯಕ್ಕೆ ಚಿತ್ರದ ಕೇಂದ್ರವಾಗುತ್ತಾ ಹೋಗುವುದು ಸೊಗಸು. ಶಿವಾಜಿಯ ಪತ್ನಿಯ ಪಾತ್ರದಲ್ಲಿ ರಾಧಿಕಾ ನಾರಾಯಣ್ ನಟಿಸಿದ್ದಾರೆ. ಹಾರರ್ ಮಾದರಿಯಲ್ಲಿ ಸಾಗುವ ಚಿತ್ರದಲ್ಲಿ ಆಕರ್ಷಕ ಹಾಡುಗಳಿರುವುದು ವಿಶೇಷ. ಪತ್ತೇದಾರಿ ಚಿತ್ರವಾದರೂ ಇದು ರಮೇಶ್ ಅವರ ಇಮೇಜ್ ಬಿಟ್ಟು ಹೋಗುವುದಿಲ್ಲ. ಹಾಗಾಗಿಯೇ ಕೌಟುಂಬಿಕ ಪ್ರೇಕ್ಷಕರು ಕೂಡ ನೋಡಬಹುದಾದ ಚಿತ್ರವಾಗಿ ಮೂಡಿಬಂದಿದೆ.
ತಾಂತ್ರಿಕವಾಗಿ ಛಾಯಾಗ್ರಹಣ ಪ್ರಥಮ ಆಕರ್ಷಣೆ. ಎಲ್ಲೋ ಒಂದಷ್ಟು ಆಂಗ್ಲ ಸಿನಿಮಾಗಳ ಛಾಯೆ ಕಂಡರೂ, ಮೊದಲ ಪ್ರಯತ್ನದಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಒಳ್ಳೆಯ ಚಿತ್ರ ನೀಡಿದ್ದಾರೆ ಎಂದು ಧೈರ್ಯದಿಂದ ಹೇಳಬಹುದು.
@bcinemas.in
Pingback: replica watches
Pingback: persyaratan polsuspas