ROWDY BABY Review : ಫ್ರೆಶ್ ಫೀಲ್ ನೀಡುವ “ರೌಡಿ ಬೇಬಿ”

ಚಿತ್ರ: ರೌಡಿ ಬೇಬಿ

ನಿರ್ದೇಶನ: ಈಪುರು ಕೃಷ್ಣ
ನಿರ್ಮಾಣ: ಸುಮುಖ ಎಂಟರ್​ಟ್ರೈನರ್, ವಾರ್​ಫುಟ್ ಸ್ಟುಡಿಯೋ
ತಾರಾಗಣ: ರವಿ ಗೌಡ, ದಿವ್ಯ ಸುರೇಶ್, ಹೀರ್ ಕೌರ್, ಅಮಿತ್​ ಮುಂತಾದವರು.
ರೇಟಿಂಗ್​: 4/5

ಟ್ರೈಲರ್ ಮೂಲಕ ಭಾರೀ ಗಮನ ಸೆಳೆದ “ರೌಡಿ ಬೇಬಿ” ಚಿತ್ರ ಟ್ರಯಾಂಗಲ್ ಲವ್ ಸ್ಟೋರಿಯ ಕಥಾ ಹಂದರ ಹೊಂದಿದೆ. ರೊಮ್ಯಾಂಟಿಕ್ ಟಚ್ ಇರುವ ಸಿನಿಮಾ ಪ್ರೇಕ್ಷಕರಿಗೆ ಕಚಗುಳಿ ಇಡುವ ಜೊತೆಗೆ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬ್ಯುಸಿನೆಸ್​​​​ಮನ್​ ಮಗ ಕೃಷ್ಣ ಯಾವುದೋ ಕಾರಣದಿಂದ ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಭಗ್ನ ಪ್ರೇಮಿ ಆಗಿರುತ್ತಾನೆ. ಆಗ ಅವನ ಬದುಕಿಗೆ ಅನು ಬರುತ್ತಾಳೆ. ಹಳೇ ಹುಡುಗಿಯ ನೆನಪುಗಳನ್ನು ಮರೆಯಲು ಆಗದೇ, ಇನ್ನೊಂದು ಕಡೆ ಅನು ಪ್ರೀತಿಯನ್ನು ಒಪ್ಪಿಕೊಳ್ಳಲು ಆಗದೇ ಗೊಂದಲಕ್ಕೆ ಸಿಲುಕುವ ಕೃಷ್ಣ, ಅನು ಮದುವೆಗೆ ಕಾರಿನಲ್ಲಿ ಹೋಗುವಾಗ ಅಪರಿಚಿತನಿಗೆ ತನ್ನ ಹಳೆಯ ಫ್ಲಾಶ್ ಬ್ಯಾಕ್ ಕಥೆ ಹೇಳುತ್ತಾ ಹೋಗುತ್ತಾನೆ.

ಮಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದಾಗ ಕೃಷ್ಣ, ಪ್ರಾದ್ವಿ ಜೋಡಿ ಹಕ್ಕಿಗಳು. ಕೃಷ್ಣನನ್ನು ಪ್ರಾದ್ವಿ ಮುದ್ದಿನಿಂದ ಬೇಬಿ ಅಂತ ಕರೆದರೆ, ಸ್ನೇಹಿತರ ಗ್ಯಾಂಗ್​ ನಲ್ಲಿ ರೌಡಿಯಂತಿರುವ ಪ್ರಾದ್ವಿನ ಎಲ್ಲರೂ ರೌಡಿ ಎಂದು ಕರೆಯುವುದು ರೂಢಿ. ಈ ಕಾರಣದಿಂದ ಇದು ರೌಡಿ ಬೇಬಿ ಕಥೆ. ಗಾಢವಾಗಿ ಪ್ರೀತಿಸುವ ರೌಡಿ ಮತ್ತು ಬೇಬಿ ದೂರ ಆಗಿದ್ದು ಯಾಕೆ? ತನ್ನನ್ನು ಪ್ರೀತಿಸುವ ಅನುವನ್ನು ಕೃಷ್ಣ ಒಪ್ಪುತ್ತಾನಾ ಎನ್ನುವುದನ್ನು ಸಿನಿಮಾ ನೋಡಿ ಪ್ರೇಕ್ಷಕರು ತಿಳಿಯಬೇಕಿದೆ.

ಸಾಫ್ಟ್​​ವೇರ್ ಕಂಪೆನಿ ಮಾಲೀಕ ಮತ್ತು ಕಾಲೇಜು ಸ್ಟೂಡೆಂಟ್​ ಆಗಿ ಎರಡು ಶೇಡ್ ಪಾತ್ರದಲ್ಲಿ ರವಿ ಗೌಡ ಮಿಂಚಿದ್ದಾರೆ. ದಿವ್ಯ ಸುರೇಶ್​​ ಬಿಂದಾಸ್​​ ಹುಡುಗಿಯಾಗಿ ಪ್ರೇಕ್ಷಕರಿಗೆ ಹಿಡಿಸುತ್ತಾರೆ. ಮತ್ತೊಬ್ಬ ನಟಿ ಹೀರ್​ ಕೌರ್​​​ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿ ಆಗಿದ್ದಾರೆ. ಹೀರೋ ಸ್ನೇಹಿತನಾಗಿ ಕಾಣಿಸಿಕೊಂಡಿರುವ ಅಮಿತ್​ ಪಾತ್ರ ಚಿತ್ರದ ಪ್ಲಸ್​ ಪಾಯಿಂಟ್​ ಆಗಿ ಮೂಡಿ ಬಂದಿದೆ.
ರೊಮ್ಯಾನ್ಸ್ ಜೊತೆಗೆ ಕಾಮಿಡಿ ಟಚ್​ ಇರುವ ಸಿನಿಮಾ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಲವ್​, ಆ್ಯಕ್ಷನ್​, ರೊಮ್ಯಾನ್ಸ್​ ಇರುವ ರೌಡಿ ಬೇಬಿ ಸಿನಿಮಾ ಪ್ರೇಕ್ಷಕರಿಗೆ ಫ್ರೆಶ್​ ಫೀಲ್​ ನೀಡುತ್ತದೆ.

ಎಲ್ಲೂ ಬೋರ್​ ಹೊಡೆಸದ ರೌಡಿ ಬೇಬಿ ಸಿನಿಮಾ ಪ್ರೇಕ್ಷಕರಿಗೆ ಕೊಟ್ಟ ಕಾಸಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ತೆರೆಯ ಮೇಲೆ ಮೂಡಿ ಬಂದಿದೆ. ಮೈಂಡ್ ಫ್ರೆಶ್ ಆಗಲು ಪ್ರೇಕ್ಷಕರು ಈ ಚಿತ್ರವನ್ನು ತಪ್ಪದೇ ನೋಡಬಹುದು.
@bcinemas.in

Be the first to comment

Leave a Reply

Your email address will not be published. Required fields are marked *

Translate »
error: Content is protected !!