ಬಿಸಿನಿಮಾಸ್ ಚಿತ್ರ ವಿಮರ್ಶೆ :ರೈತರ ಚಿತ್ರಗಳಿಗೆ ಮರುಜೀವ ನೀಡಿದ ರಾಜೀವ

ಬಿಸಿನಿಮಾಸ್ ಚಿತ್ರ ವಿಮರ್ಶೆ :ರೈತರ ಚಿತ್ರಗಳಿಗೆ ಮರುಜೀವ ನೀಡಿದ ರಾಜೀವ

ಚಿತ್ರ: ರಾಜೀವ
ತಾರಾಗಣ: ಮಯೂರ್ ಪಟೇಲ್, ಅಕ್ಷತಾ ಶ್ರೀಧರ ಶಾಸ್ತ್ರಿ, ಮಯೂರ್ ಪಟೇಲ್, ಶಂಕರ್ ಅಶ್ವಥ್
ನಿರ್ದೇಶಕ: ಫ್ಲೈಯಿಂಗ್ ಕಿಂಗ್ ಮಂಜು
ನಿರ್ಮಾಣ: ಬಿ.ಎಮ್ ರಮೇಶ್, ಕಿರಣ್ ಕೆ

ರಾಜೀವ ಎನ್ನುವ ಹೆಸರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಮಾಡಿದ ಕೀರ್ತಿ ಡಾ.ರಾಜ್ ಕುಮಾರ್ ಅವರದ್ದು. ಬಂಗಾರದ ಮನುಷ್ಯದ ಚಿತ್ರದ ಮೂಲಕ ದಾಖಲೆ ಮೂಡಿಸಿದ ಅದೇ ಪಾತ್ರದ ಹೆಸರನ್ನು ಅಂಥದೇ ಒಂದು ರೈತನ ಪಾತ್ರದ ಮೂಲಕ ಸ್ಮರಿಸುವ ಪ್ರಯತ್ನ ಮಾಡಿದ್ದಾರೆ ಮಯೂರ್ ಪಟೇಲ್.

ರಾಜೀವ ನಗರದ ಕಾಲೇಜೊಂದರಲ್ಲಿ ಐಎಎಸ್ ವಿದ್ಯಾರ್ಥಿಯಾಗಿರುವಲ್ಲಿಂದ ಚಿತ್ರದ ಕತೆ ಆರಂಭವಾಗುತ್ತದೆ. ಅಲ್ಲಿಯೇ ತನ್ನ ಸ್ನೇಹಿತರೊಂದಿಗೆ ಮಾತನಾಡುವಾಗ, ಭವಿಷ್ಯದ ಯೋಜನೆಗಳ ಹೇಳುತ್ತಾ ಹಳ್ಳಿಗೆ ಮರಳಿ ರೈತನಾಗುವ ಆಸೆಯನ್ನು ವ್ಯಕ್ತಪಡಿಸಿರುತ್ತಾನೆ. ಭವಿಷ್ಯದಲ್ಲಿ ಅದೇ ನಿಜವಾಗುತ್ತದೆ. ತಂದೆಯ ಸಾವಿನ ಬಳಿಕ ಹಳ್ಳಿಗೆ ಮರಳುವ ರಾಜೀವನಿಗೆ ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸತ್ಯ ತಿಳಿಯುತ್ತದೆ. ಅದಕ್ಕೆ ಕಾರಣವೇನು?, ಆ ಕಾರಣವಾದವರನ್ನು ಆತ ಏನು ಮುಂದೇನು ಮಾಡುತ್ತಾನೆ? ತನ್ನ ಹಳ್ಳಿಗಾಗಿ ರೈತನಾಗಿ ಬದಲಾಗುವ ರಾಜೀವ ತನ್ನ ಸಂಸಾರದೊಳಗೆ ಎದುರಿಸಬೇಕಾಗಿ ಬಂದ ಸಮಸ್ಯೆಗಳೇನು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೀಗೆ ಹೊಸ ಹೊಸ ತಿರುವುಗಳೊಂದಿಗೆ ಸಾಗುವ ಚಿತ್ರ ರಾಜೀವ.ಚಿತ್ರದಲ್ಲಿ ಮೂರು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಮಯೂರ್. ಅದರಲ್ಲಿ ರಾಜೀವನದು ಒಂದು ಗೆಟಪ್ ಆದರೆ, ಆತನ ತಂದೆ ಭೀಮಣ್ಣನ ಎರಡು ಕಾಲಘಟ್ಟದ ಗೆಟಪ್ ಮೂಲಕ ಗಮನ ಸಳೆದಿದ್ದಾರೆ. ರಾಜೀವನಾಗಿ ವಿದ್ಯಾರ್ಥಿಗಿರುವ ಕಳೆಯನ್ನೇ ಒಂದು ಹಂತದ ತನಕ ಮುಂದುವರಿಸಿದ್ದಾರೆ. ಭೀಮಣ್ಣನಾಗಿ ಕಂಠದಿಂದ ಹಿಡಿದು ದಪ್ಪಗಾದ ಸೊಂಟದ ತನಕ ಪಾತ್ರಕ್ಕಾಗಿ ಸಮರ್ಪಣಾಭಾವದಿಂದ ಕೆಲಸ ಮಾಡಿದ್ದಾರೆ ಮಯೂರ್. ಅದೇ ತಂದೆ ಮಗನನ್ನು ಮತ್ತು ತಂದೆಯ ಜೋಡಿಯನ್ನು ಒಂದೇ ಫ್ರೇಮ್ ನಲ್ಲಿ ತರದೇ ಜಾಣತನ ಮೆರೆದಿದ್ದಾರೆ ನಿರ್ದೇಶಕರು. ರಾಜೀವನ ಜೋಡಿಯ ಪಾತ್ರದಲ್ಲಿ ಅಕ್ಷತಾ ಶ್ರೀಧರ ಶಾಸ್ತ್ರಿ ತಮಗೆ ದೊರಕಿರುವ ಅವಕಾಶವನ್ನು ತಕ್ಕಮಟ್ಟಿಗೆ ನಿಭಾಯಿಸಿದ್ಧಾರೆ. ನವನಟರಿಬ್ಬರಿಂದ ರಾಜೀವನ ಸಹೋದರರ ಪಾತ್ರಗಳನ್ನು ಚೆನ್ನಾಗಿ ಮೂಡಿಸಿದ್ದಾರೆ ನಿರ್ದೇಶಕರು. ದ್ವೇಷ, ತಿಕ್ಕಲುತನ ಬೆರೆತ ಊರಗೌಡನಾಗಿ ಶಂಕರ್ ಅಶ್ವಥ್ ಅದ್ಭುತವಾಗಿ ನಟಿಸಿದ್ದಾರೆ. ಅವರ ಪುತ್ರನಾಗಿ ವರ್ಧನ್ ತೀರ್ಥಹಳ್ಳಿಯವರ ಅಭಿನಯವೂ ಅಷ್ಟೇ ಗಮನಾರ್ಹವಾಗಿದೆ. ಹಾಸ್ಯದಲ್ಲಿ ಕೂಡ ಹೊಸ ಕಲಾವಿದರನ್ನು ಪರಿಚಯಿಸುವ ಸಾಹಸ ಮಾಡಿದ್ದಾರೆ ನಿರ್ದೇಶಕರು. ಮುಖ್ಯಮಂತ್ರಿಯ ಪಾತ್ರದ ಮೂಲಕ ಮಗನ ಚಿತ್ರದಲ್ಲಿ ಅತಿಥಿನಟನಾಗಿ ಆಗಮಿಸುವ ಮದನ್ ಪಟೇಲ್ ಪಾತ್ರದ ಘನತೆಗೆ ತಕ್ಕ ಅಭಿನಯ ನೀಡಿದ್ದಾರೆ. ಚಿತ್ರದ ಹಾಡುಗಳು ಕೂಡ ಆಕರ್ಷಕ ಸಂಗೀತದ ಮೂಲಕ ಗಮನ ಸೆಳೆಯುತ್ತಾರೆ. ನವನಟಿ ಶ್ರಾವ್ಯಗಣಪತಿ ಒಂದು ವಿಶೇಷ ಹಾಡಿನಲ್ಲಿ ಅತಿಥಿ ನಟಿಯಾಗಿ ಕುಣಿದಿದ್ದಾರೆ.

ಒಟ್ಟಿನಲ್ಲಿ ಸಕಲ ವಿಚಾರಗಳನ್ನು ಕೂಡ ತುಂಬಿಕೊಂಡಿರುವ ರಾಜೀವ ವರ್ಷಾರಂಭದಲ್ಲೇ ಬಂದಿರುವ ಒಂದು ಫುಲ್ ಪ್ಯಾಕ್ ಸಿನಿಮಾ ಎನ್ನಬಹುದು. ಆಧುನಿಕ ಯೋಜನೆಗಳ ಮೂಲಕ ಯುವಕರು ಹಳ್ಳಿಯನ್ನು ಹೇಗೆ ಉದ್ಧಾರ ಮಾಡಬಹುದು ಎನ್ನುವ ಕಾನ್ಸೆಪ್ಟ್ ನೊಂದಿಗೆ ಇರುವ ಇಂಥದೊಂದು ಚಿತ್ರವನ್ನು ನೀಡಿದ ಚಿತ್ರತಂಡಕ್ಕೆ ಅಭಿನಂದನೆ ಹೇಳಲೇಬೇಕು.

@Bcinemas.in

This Article Has 2 Comments
  1. Pingback: loli sex dolls

  2. Pingback: 3benignant

Leave a Reply

Your email address will not be published. Required fields are marked *

Translate »
error: Content is protected !!