ಚಿತ್ರ ವಿಮೆರ್ಶೆ : ಮೆಚ್ಚುವಂಥ ಚಿತ್ರ ಬಿಚ್ಚುಗತ್ತಿ
ಚಿತ್ರ: ಬಿಚ್ಚುಗತ್ತಿ
ತಾರಾಗಣ: ರಾಜವರ್ಧನ್, ಹರಿಪ್ರಿಯಾ
ನಿರ್ದೇಶನ: ಹರಿ ಸಂತೋಷ್
ನಿರ್ಮಾಣ: ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್
ರೇಟಿಂಗ್ 4/5
ಚಿತ್ರದುರ್ಗದ ದಳವಾಯಿ ದಂಗೆಯನ್ನು ಚೆಲುವಾಗಿ ತೋರಿಸಿರುವ ಕೀರ್ತಿ ನಿರ್ದೇಶಕರದ್ದು. ಯಾಕೆಂದರೆ, ದಂಗೆಯೇ ಹಾಗೆ. ಒಳಗೊಳಗೆ ನಡೆಯುವ ಸಣ್ಣಪುಟ್ಟ ಕಾದಾಟದಂತೆ. ಹಾಗಾಗಿಯೇ ಇಲ್ಲಿ ರಣರಂಗ ಕಾಣುವುದಿಲ್ಲ. ಆದರೆ ಮುದ್ದಣ್ಣನ ಕುತಂತ್ರದ ಚದುರಂಗವಿದೆ. ಆದರೆ ರಾಜ ಮಾತ್ರ ಕೊನೆಗೂ ರಾಜವರ್ಧನನೇ ಎನ್ನುವುದು ಸತ್ಯ.
ಬಿಚ್ಚುಗತ್ತಿ ಭರಮಣ್ಣ ನಾಯಕನ ಬಗ್ಗೆ ಕನ್ನಡಿಗರೆಲ್ಲ ಅರಿತವರೇ. ಮಾತ್ರವಲ್ಲ ಕಾದಂಬರಿಯಾಗಿಯೂ ಮನಸೆಳೆದ ವಸ್ತು ಇದು. ಹಾಗಾಗಿ ಕತೆಯನ್ನು ವಿವರಿಸುವ ಅಗತ್ಯವೇ ಇಲ್ಲ. ಆದರೆ
ನಾಯಕನಾಗಿ ಚಿತ್ರರಂಗ ಪ್ರವೇಶಿಸುವ ಮೊದಲ ಚಿತ್ರದಲ್ಲೇ ರಾಜವರ್ಧನ್ ಅವರಿಗೆ ಇದು ಚಾಲೆಂಜಿಂಗ್ ಪಾತ್ರ ಎನ್ನುವ ನಿಟ್ಟಿನಲ್ಲಿ ಗಮನಾರ್ಹ ಚಿತ್ರವೇ ಸರಿ.
ಎತ್ತರ ಮತ್ತು ದೃಢಕಾಯ, ಗಂಭೀರ ಧ್ವನಿ, ತೀಕ್ಷ್ಣವಾದ ದೃಷ್ಟಿಯಿಂದ ಗಮನ ಸೆಳೆಯುವ ನಾಯಕ ರಾಜವರ್ಧನನಿಗೆ ಹಳ್ಳಿಯಲ್ಲಿ ಬೆಳೆಯುವ ರಾಜವಂಶದ ಯುವಕನ ಪಾತ್ರ ಹೇಳಿ ಮಾಡಿಸಿದಂತಿದೆ. ತಾಯಿ ಕನಕಾಂಬೆಯಾಗಿ ಸ್ಪರ್ಶ ರೇಖಾ ಅವರಿಗೆ ಕೂಡ ಉತ್ತಮ ಪಾತ್ರವೇ ದೊರಕಿದೆ. ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಪ್ರಸ್ತುತ ಅವರಿಗೆ ಇರುವಂಥ ತಾರಾಮೌಲ್ಯಕ್ಕೆ ಹೊಂದಾಣಿಕೆಯಾಗದಿದ್ದರೂ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ.
ಇವೆಲ್ಲದರ ನಡುವೆ ಬಿಚ್ಚುಗತ್ತಿ ಚಿತ್ರದ ಒಂದು ಪ್ರಮುಖ ಆಕರ್ಷಣೆ ದಳವಾಯಿ ಮುದ್ದಣ್ಣ ಎಂದೇ ಹೇಳಬೇಕು. ಬಾಹುಬಲಿ ಖ್ಯಾತಿಯ ಪ್ರಭಾಕರ್ ಅವರು ಮುದ್ದಣ್ಣನಾಗಿದ್ದಾರೆ. ಅವರ ಕನ್ನಡ ಕೇಳಲು ತುಸು ಕಷ್ಟವಾದರೂ ಪಾತ್ರವಾಗಿ ಕಾಡುವ ರೀತಿ ಅನನ್ಯ.
ಶುರುಮಾಡುತ್ತಾರೆ. ಅವರ ಕಣ್ಣನೋಟ ಪ್ರೇಕ್ಷಕರ ಮನದೊಳಗೆ ನಾಟಿರುತ್ತದೆ.
ಹುಲಿಯೊಂದಿಗಿನ ಹೋರಾಟ ಗ್ರಾಫಿಕ್ಸ್ ನಲ್ಲಿ ತುಂಬ ಚೆನ್ನಾಗಿ ಮೂಡಿ ಬಂದಿದೆ. ನಕುಲ್ ಅಭಯಂಕರ್ ಸಂಗೀತ ಆಕರ್ಷಕ. ಭರಮಣ್ಣನ ತಾಯಿಯಾಗಿ ರೇಖಾ, ಮುದ್ದಣ್ಣನ ಪತ್ನಿಯಾಗಿ ಕಲ್ಯಾಣಿಯವರ ಪಾತ್ರಗಳು ಮನದಲ್ಲೇ ಉಳಿಯುವಂತಿವೆ. ಶರತ್ ಲೋಹಿತಾಶ್ವ, ರಮೇಶ್ ಪಂಡಿತ್, ಶ್ರೀನಿವಾಸ ಮೂರ್ತಿ ಮೊದಲಾದವರು ಕೂಡ ಇತಿಹಾಸದಲ್ಲಿ ಸೇರಿಕೊಂಡಂತೆ ಕಾಣಿಸುತ್ತಾರೆ.
ಒಟ್ಟಿನಲ್ಲಿ ಬಿಚ್ಚುಗತ್ತಿ ಚಿತ್ರ ಅದರ ಎರಡನೇ ಭಾಗಕ್ಕೆ ನಿರೀಕ್ಷಿಸುವಂತೆ ಮಾಡಿರುವುದು ನಿಜ.
@ಬಿಸಿನಿಮಾಸ್ -ಭೀಮರಾಯ
Pingback: robot sex doll