ಅದಲು ಬದಲಾದ ಮಕ್ಕಳ ‘ಡಿಎನ್‌ಎ’ ಕಥೆ
ಚಿತ್ರ: ಡಿಎನ್‌ಎ
ನಿರ್ದೇಶನ: ಪ್ರಕಾಶ್‌ರಾಜ್
ನಿರ್ಮಾಣ: ಮೈಲಾರಿ ಎಂ
ತಾರಾಗಣ: ಅಚ್ಯುತ ಕುಮಾರ್, ಎಸ್ತರ್ ನೊರೋನ್ಹಾ, ಮಾ.ಕೃಷ್ಣ ಚೈತನ್ಯ, ಯಮುನಾ.
ರೇಟಿಂಗ್: 3.5/5
ಹುಟ್ಟಿದ ಮಕ್ಕಳು ಅದಲು ಬದಲಾಗಿ ಬಹಳ ಸಮಯದ ಬಳಿಕ ಅದು ತಿಳಿದಾಗ ಆಗುವ ಅವಾಂತರದ ಕಥೆಯೇ ಡಿಎನ್‌ಎ. ನಿರೀಕ್ಷಿತವಾಗಿ ಸಾಗುವ ಕಥೆ ಇದಾಗಿರುವ ಕಾರಣ ಹೆಚ್ಚಿನ ಕಾತರತೆಯಿಂದ ಸಿನಿಮಾ ನೋಡುವ ಪ್ರಸಂಗ ಪ್ರೇಕ್ಷಕನಿಗೆ ಎದುರಾಗುವುದಿಲ್ಲ.
ಆಕಾಶ್, ನಕ್ಷತ್ರಾ, ಧ್ರುವ ಈ ಮೂವರ ಶ್ರೀಮಂತರ ಕುಟುಂಬ ಹಾಗೂ ಮಧ್ಯಮ ವರ್ಗದ ಕಿರಾಣಿ ಅಂಗಡಿ ನಡೆಸುವ ಪ್ರಶಾಂತ್ ಗೌಡ ಕುಟುಂಬದ ನಡುವೆ ಡಿಎನ್‌ಎ ಸಾಗುತ್ತದೆ. ಹುಟ್ಟಿದ ಮಕ್ಕಳು ಅದಲು ಬದಲಾಗಿ ಬಳಿಕ ಅದು ತಿಳಿದಾಗ ಆಗುವ ಅವಾಂತರವನ್ನು ಸಿನಿಮಾ ಹೇಳುತ್ತದೆ.
ಚಿತ್ರಕ್ಕೆ ಕ್ಲೈಮ್ಯಾಕ್ಸ್ ಎಳೆದು ತಂದ ಹಾಗೆ ಆಗಿದೆ ಅನಿಸುತ್ತದೆ. ಕತೆಯ ಟ್ರೀಟ್‌ಮೆಂಟ್ ಬಗ್ಗೆ ಹೆಚ್ಚೇನ ತಲೆಕೆಡಿಸಿಕೊಳಲ್ಲ ಅನ್ನುವವವರಿಗೆ ಈ ಚಿತ್ರ ಇಷ್ಟವಾಗುವ ಸಾಧ್ಯತೆ ಇದೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅದಲು ಬದಲಾಗುವ ಮಕ್ಕಳ ಕಥಾನಕ ಸಿನಿಮಾದಲ್ಲಿದೆ. ಆನಂದವಾಗಿರುವ ಕುಟುಂಬವನ್ನು ವಿಚಲಿತಗೊಳಿಸುವುದು ಡಿಎನ್‌ಎ ಟೆಸ್ಟ್ ಆದ ಕಾರಣ ಚಿತ್ರದ ಶೀರ್ಷಿಕೆ ಕಥೆಗೆ ತಾಳೆ ಹೊಂದುತ್ತದೆ.
ಪ್ರೇಯಸ್ಸಿಗೆ ಮಕ್ಕಳಾಗುವುದಿಲ್ಲ ಎಂದು ತಿಳಿದ ವ್ಯಕ್ತಿ ಆಕೆಯನ್ನು ತಿರಸ್ಕರಿಸುತ್ತಾನೆ. ಆದರೆ ಮುಂದೆ ಮಕ್ಕಳು ಆಸ್ಪತ್ರೆಯಲ್ಲಿ ಅದಲು ಬದಲಾದ ವಿಷಯ ತಿಳಿದ ಆತ ರೌದ್ರಾವತಾರ ತಾಳಿ ಆಸ್ಪತ್ರೆಯ ಮೇಲೆ ಮೊಕದ್ದಮೆ ಹೂಡುವ ಜೊತೆಗೆ ತನ್ನ ಮಗ ಬೆಳೆಯುತ್ತಿರುವ ಕುಟುಂಬವನ್ನೂ ಅಗ್ನಿ ಪರೀಕ್ಷೆಗೆ ಒಡ್ಡುತ್ತಾನೆ. ಮುಂದೆ ಏನು ನಡೆಯುತ್ತದೆ ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡುವುದು ಒಳಿತು.
ಅಚ್ಯುತ ಕುಮಾರ್ ಅವರ ನಟನೆ ಗಮನ ಸೆಳೆಯುತ್ತದೆ ಅವರ ಸಹಜ ಅಭಿನಯ, ಆರಂಭದಿಂದ ಕೊನೆಯವರೆಗೂ ಅವರು ಪಾತ್ರವನ್ನು ತೆಗೆದುಕೊಂಡು ಹೋದ ರೀತಿಗೆ ಭೇಷ್ ಎನ್ನಲೇಬೇಕು. ಎಸ್ತರ್ ಅವರು ಕೂಡಾ ತಮ್ಮ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಯಮುನಾ, ಮಾಸ್ಟರ್ ಆನಂದ್ ಪುತ್ರ ಕೃಷ್ಣ ಚೈತನ್ಯ, ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರ ಪುತ್ರ ಧ್ರುವ ಮೇಹು ಉತ್ತಮವಾಗಿ ನಟಿಸಿದ್ದಾರೆ.
ರವಿಕುಮಾರ್ ಸನಾ ಛಾಯಾಗ್ರಹಣ ಚೆನ್ನಾಗಿದೆ. ಚೇತನ್ ಸೋಸ್ಕ ಸಂಗೀತದ ಮೂಲಕ ಗಮನ ಸೆಳೆಯುತ್ತಾರೆ.
______
Be the first to comment