ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನು ನಿರ್ಮಿಸಿದ ಕೆ.ಎಂ. ಶಶಿಧರ್ ಈಗ “ಶುಗರ್ ಲೆಸ್” ಚಿತ್ರವನ್ನು ನಿರ್ದೇಶನ ಮಾಡಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಕಥೆಯ ಎಳೆ ಪ್ರಮುಖ ಕೇಂದ್ರಬಿಂದು ಆಗಿದೆ. ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿರುವ ಚಿತ್ರ ಇದಾಗಿದ್ದು , ಪೃಥ್ವಿ ಅಂಬಾರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಇದರಲ್ಲಿ ನಾಯಕ -ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ದಿವ್ಯ ಶಶಿಧರ್ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಅವರ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡರು. ಈ ಚಿತ್ರದ ನಾಯಕ ಪೃಥ್ವಿ ಅಂಬಾರ್ ಮಾತನಾಡುತ್ತಾ ಚಿತ್ರದ ಟೈಟಲ್ ಅಷ್ಟೇ ಶುಗರ್ ಲೆಸ್, ಸಿನಿಮಾದ ತುಂಬಾ ಸ್ವೀಟ್ ಇದೆ. ಇದರಿಂದ ನಮ್ಮ ಲೈಫ್ ಸ್ಟೈಲ್ ಬದಲಾಗಬೇಕು, ಅನುಪ್ ಸೀಳನ್ ಅವರು ಅದ್ಭುತವಾದ ಮ್ಯೂಸಿಕ್ ಮಾಡಿದ್ದಾರೆ. ಇದು ಸೀರಿಯಸ್ ಸಿನಿಮಾ ಅಲ್ಲ ಮನರಂಜನಾತ್ಮಕ ಚಿತ್ರ. ಹಾಸ್ಯದ ಮೂಲಕ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ. ನೀವೆಲ್ಲರೂ ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಶಶಿಧರ್ ಮಾತನಾಡುತ್ತಾ, ಇದೊಂದು ವಿಶೇಷವಾದಂತ ಸಿನಿಮಾ, ಹಿಂದೆ ಬಂದಂಥ ಕಂಟೆಂಟ್ ಒರಿಯಂಟೆಡ್ ಚಿತ್ರಗಳು ಗೆದ್ದಿವೆ. ಇದು ಪ್ರತಿಯೊಂದು ಮನೆಗೆ ಸಂಬಂದಿಸಿದ ಸಿನಿಮಾ ಆಗಿದೆ. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು ಈಗ ಚಿಕ್ಕ ಮಕ್ಕಳಲ್ಲೂ ಸಹ ಶುಗರ್ , ಬಿಪಿ, ಹಾರ್ಟ್ ಅಟ್ಯಾಕ್ ನಂಥ ಖಾಯಿಲೆಗಳು ಬರುತ್ತಿದ್ದು ಇವುಗಳ ಜೊತೆ ನಾವು ಹೇಗೆ ಬದುಕಬೇಕು, ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಎಂಬುದರ ಜೊತೆಗೆ ಮನರಂಜನೆಯ ಮೂಲಕ ಮೆಸೇಜ್ ಹೇಳುವ ಪ್ರಯತ್ನ ಚಿತ್ರದಲ್ಲಿದೆ. ಹಾಗೂ ವಿದೇಶಗಳಲ್ಲಿ ಕೂಡ ನಮ್ಮ ಚಿತ್ರ ರಿಲೀಸ್ ಆಗಲಿದೆ. ಅಲ್ಲದೆ ನಮ್ಮ ‘ವೀರಂ’ ಚಿತ್ರ ಕೂಡ ರಿಲೀಸ್ ಗೆ ಸಿದ್ದವಾಗಿದೆ. ಚಿತ್ರ ನೋಡುಗರಿಗೆ ತುಂಬಾ ಎಂಜಾಯ್ ಮಾಡಿಸುತ್ತದೆ, ಕೊನೆಗೊಂದು ಮೆಸೇಜ್ ಕೂಡ ಇದೆ. ಎಲ್ಲರೂ ನೋಡಬೇಕಾದ ಚಿತ್ರ ಇದಾಗಿದೆ.
ಶುಗರ್ ಲೆಸ್ ಎಲ್ಲರಿಗೂ ಆಪ್ತವಾದ್ದರಿಂದ ಚಿತ್ರಕ್ಕೆ ಈ ಟೈಟಲ್ ಇಟ್ಟಿದ್ದೇವೆ. ಈಗಾಗಲೇ ಈ ಚಿತ್ರದ ಸ್ಯಾಟ್ ಲೈಟ್ ಹಾಗೂ ಓಟಿಟಿ ಹಕ್ಕುಗಳು ಮಾರಾಟವಾಗಿದ್ದು, ನಾನು ಸೇಫಾಗಿದ್ದೇನೆ. ಜೊತೆಗೆ ಇಂಥ ವಿಭಿನ್ನ ಚಿತ್ರ ಎಲ್ಲರ ಗಮನ ಸೆಳೆಯುವುದು ಮುಖ್ಯ ಎಂಬ ಉದ್ದೇಶದಿಂದ ಚಿತ್ರಮಂದಿರಕ್ಕೆ ಬರ್ತಿದೇವೆ. ವಿಶೇಷವಾಗಿ ಈ ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಡಾಕ್ಟರ್ ಪಾತ್ರ ಮಾಡಿದ್ದು, ನಟ ದತ್ತಣ್ಣ ಅವರ ಮೂಲಕ ಚಿತ್ರದಲ್ಲಿ ಮೂರು ಜನರೇಷನ್ ಅಂದರೆ ಮಗು ಯುವಕ ಹಾಗೂ ವಯಸ್ಸಾದವರ ತೊಂದರೆ ಹೇಳಲಾಗಿದೆ. ಇಡೀ ಚಿತ್ರವನ್ನು ಕಾಮಿಡಿಯಾಗಿ ಹೇಳಲಾಗಿದೆ ನೀವೆಲ್ಲರೂ ಬಂದು ನೋಡಿ ನಮ್ಮನ್ನು ಹರಸಿ ಎಂದು ಕೇಳಿಕೊಂಡರು. ಕಲಾವಿದರಾದ ರಘು ರಾಮನಕೊಪ್ಪ ಮಾತನಾಡಿ ಇದು ಡಯಾಬಿಟಿಸ್ ನವರಿಗೆ ಅಷ್ಟೇ ಅಲ್ಲ, ಎಲ್ಲರೂ ನೋಡಬೇಕಾದ ಚಿತ್ರ, ಯೋಗದಿಂದ ಶುಗರ್ ಕಂಟ್ರೋಲ್ ಮಾಡಬಹುದೆಂದೂ ಹೇಳಿದ್ದೇವೆ ಎಂದರು. ಕಲಾವಿದರಾದ ನಿತೇಶ್, ನಟ ಹಾಗೂ ಸಹ ನಿರ್ಮಾಪಕರಾದ ಕೃಷ್ಣೇಗೌಡ ಕೂಡ ಚಿತ್ರದ ತಮ್ಮ ಪಾತ್ರದ ಕುರಿತು ಮಾತನಾಡಿದರು. ಈಗಾಗಲೇ ಚಿತ್ರದ ಟ್ರೇಲರ್ ಬಹಳಷ್ಟು ವೈರಲ್ ಆಗಿದ್ದು, ಅನೂಪ್ ಸೀಳನ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇದೆ 08ರಂದು ಅದ್ದೂರಿಯಾಗಿ ಶುಗರ್ ಲೆಸ್ ಪ್ರೇಕ್ಷಕರ ಮುಂದೆ ಬರುತ್ತಿದೆ.
Be the first to comment