ಸಿನಿಮಾ: ತ್ರಿಬಲ್ ರೈಡಿಂಗ್
ನಿರ್ದೇಶನ: ಮಹೇಶ್ ಗೌಡ
ನಿರ್ಮಾಣ: ರಾಮ್ಗೋಪಾಲ್ ವೈ.ಎಂ.
ತಾರಾಗಣ: ಗಣೇಶ್, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಶೋಭರಾಜ್, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ
ರೇಟಿಂಗ್: 3/5
ಮೂವರು ಚೆಲುವೆಯರ ಪ್ರೀತಿಯಲ್ಲಿ ಸಿಕ್ಕಿಕೊಂಡು ಹೀರೋ ಸಂಕಷ್ಟ ಅನುಭವಿಸುವ ಕಥೆಯ ತ್ರಿಬಲ್ ರೈಡಿಂಗ್ ಸಂಕಷ್ಟದ ಜೊತೆಗೆ ನಗು ತರಿಸುವ ಮೂಲಕ ಗಮನ ಸೆಳೆಯುತ್ತದೆ.
ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಮೂರು ಪ್ರೇಮ್ ಕಹಾನಿ ಇರುವ ಸಿನಿಮಾ. ಗಣೇಶ್ ಅವರು ಪ್ರೀತಿ ಪಡೆಯಲು ಒದ್ದಾಡುವ ಪ್ರೇಮಿಯಾಗಿ ಈಗಾಗಲೇ ಅನೇಕ ಚಿತ್ರಗಳಲ್ಲಿ ಜನರನ್ನು ನಟಿಸಿದ್ದಾರೆ. ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲೂ ಅದು ಟ್ವಿಸ್ಟ್ ಕಥೆಯ ಮೂಲಕ ಮುಂದುವರಿದಿದೆ.
ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಅವರು ರಮ್ಯಾ, ರಕ್ಷಿತಾ, ರಾಧಿಕಾ ಹೆಸರಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಎಂಬ ಪಾತ್ರ ಎಂಟ್ರಿ ಕೊಟ್ಟಿದ್ದು, ಅದನ್ನು ಚಿತ್ರಮಂದಿರದಲ್ಲಿ ನೋಡುವುದೇ ಸೂಕ್ತ.
ಲವ್ ಸ್ಟೋರಿಗಿಂತಲೂ ಕಾಮಿಡಿಯನ್ನೇ ಹೆಚ್ಚಾಗಿ ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾ ಹಿಡಿಸುತ್ತದೆ. ಗಣೇಶ್ ಅವರ ಜೊತೆಗೆ ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ರಚನಾ ಇಂದರ್, ರವಿಶಂಕರ್ ಗೌಡ ಭರಪೂರ ನಗಿಸುತ್ತಾರೆ.
ಚಿತ್ರದಲ್ಲಿ ರವಿಶಂಕರ್, ಶೋಭರಾಜ್, ಶರತ್ ಲೋಹಿತಾಶ್ವ ಅವರು ಆಗಾಗ ಕಾಣಿಸಿಕೊಂಡು ಅಬ್ಬರಿಸಿದ್ದಾರೆ.
ಮೇಕಿಂಗ್ ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇತ್ತು ಎಂದು ಚಿತ್ರ ನೋಡಿದವರಿಗೆ ಅನಿಸುತ್ತದೆ. ಹಾಡುಗಳು ನಿರೀಕ್ಷಿತ ಮಟ್ಟ ಮುಟ್ಟುವಲ್ಲಿ ವಿಫಲ ಆದಂತೆ ತೋರುತ್ತವೆ. ಒಟ್ಟಾರೆ ಹೇಳುವುದಾದರೆ ಇಡೀ ಸಿನಿಮಾವನ್ನು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
________

Be the first to comment