ಬಿಸಿನಿಮಾಸ್ ಚಿತ್ರ ವಿಮರ್ಶೆ : ಮಾಕ್ಟೈಲ್ ಮ್ಯಾಜಿಕ್!
ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡಿಕೊಂಡಿದ್ದ ನಟನೊಬ್ಬ ಇವತ್ತು ಹಿರೋ ಕಮ್ ಡೈರೆಕ್ಟರ್. ಹೌದು,
ಡಾರ್ಲಿಂಗ್ ಕೃಷ್ಣ ಲವ್ ಮಾಕ್‌ಟೈಲ್ ಚಿತ್ರದ ಮೂಲಕ ನಿರ್ದೇಶನದ ಜೊತೆ ಹಿರೋ ಕೂಡ ಆಗಿ ಗೆದ್ದಿದ್ದಾರೆ. ಫಸ್ಟ್ ಲುಕ್, ಪೋಸ್ಟರ್, ಟ್ರೇಲರ್‌ಗಳೊಂದಿಗೆ ಬಹುನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದ್ದ ಕೃೃಷ್ಣ ಲವ್ ಮಾಕ್ಟೈಲ್ ರಿಲೀಸ್ ಆಗಿ ನೋಡುಗನ ನಿರೀಕ್ಷೆಯನ್ನು ಹುಸಿಮಾಡಲಿಲ್ಲ. ನಾಯಕನಾಗಿ, ನಿರ್ಮಾಪಕನಾಗಿಯೂ ಕೃಷ್ಣ ಈ ಚಿತ್ರವನ್ನು ಸಂಪೂರ್ಣ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ.
ಪ್ರತಿಯೊಬ್ಬರ ಬದುಕಿಗೂ ಅನ್ವಯಿಸುವ, ನಮ್ಮದೇ ಅನ್ನಿಸುವ ಭಾವಗಳನ್ನು ಮುದ್ದಾಗಿ ದೃಷ್ಯೀಕರಿಸಿರೋ ಕೃಷ್ಣ ಅವರ ಮಾಕ್ಟೈಲ್ ಕಥೆಯಾದರು ಏನು? ಈ ಚಿತ್ರದ ಕಥೆ ತೆರೆದುಕೊಳ್ಳುವುದು ತೊಂಭತ್ತರ ದಶಕದಲ್ಲಿ. ಹೈಸ್ಕೂಲಿನ ಲವ್ ಕ್ರಶ್ ನಿಂದ ಆರಂಭವಾಗವ ಚಿತ್ರದಲ್ಲಿ, ಕಾಲಘಟ್ಟ ಬದಲಾಗತ್ತಾ ಹೋಗುತ್ತದೆ. ಕಾಲಘಟ್ಟ ಬದಲಾದಂತೆ ನಾಯಕನ ಪ್ರೇಯಸಿಗಳೂ ಬದಲಾಗುತ್ತಾ ಹೋಗುತ್ತಾರೆ. ಯಾವ ಪ್ರೀತಿಯೂ ಹೆಚ್ಚು ಕಾಲ ಬಾಳುವುದಿಲ್ಲ.
ಇನ್ನೇನು ನಾಯಕ ದೇವದಾಸ್ ಆಗಬೇಕೂ ಅನ್ನುವಷ್ಟರಲ್ಲಿ ಮತ್ತೊಂದು ಪ್ರೀತಿ ಮೊಳಕೆ ಒಡೆದು ಹಣ್ಣಾಗುತ್ತದೆ. ಇನ್ನೇನು ತಾನು ಬಯಸಿದ ಪ್ರೀತಿ ದಕ್ಕಿತೂ ಅನ್ನುವಾಗ, ಸಾಕಷ್ಟು ವಿಪರ್ಯಾಸಗಳು ಎದರಾಗುತ್ತದೆ. ಹೀಗೆ.. ಬದುಕಿನ ಕಷ್ಟ-ಸುಖ-ಪ್ರೀತಿಯನ್ನು ಸೇರಿಸಿ ಕೃಷ್ಣ ಒಂದು ಟೇಸ್ಟೀ ಮಾಕ್ಟೈಲ್ ಮಾಡಿದ್ದಾರೆ. ಪರ್ಫಾಬಮೆನ್ಸ್ ವಿಚಾರದಲ್ಲಿ ಅಮೃತಾ ಅಯ್ಯಂಗಾರ್ ಮತ್ತು ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣರ ಮೆಚ್ಯೂರ್ಡ್ ಎಟೆಮ್ಟ್ ಮಾಡಿದ್ದಾರೆ. ಇನ್ನು, ಎಡಿಟರ್ ಆಗಿದ್ದ ಶ್ರೀಕ್ರೇಜೀಮೈಂಡ್ ಅವರ ಕ್ಯಾಮಾರಾ ಕೈಚಳಕ ಸೂಪರ್. ರಘುದೀಕ್ಷಿತ್ ಅವರ ಸಂಗೀತ ಇಂಪ್ರೆಸ್ ಮಾಡುತ್ತೆ. ಒಟ್ಟಿನಲ್ಲಿ ತರೆಯ ಮೇಲೆ ನಿಮ್ಮದೇ ಬದುಕಿನ ಮಾಕಟೈಲ್ ಅನ್ನು ನೋಡುವ ಮನಸ್ಸಾದರೆ ಚಿತ್ರ ಮಿಸ್ ಮಾಡಬೇಡಿ.
@ಬಿಸಿನಿಮಾಸ್
Be the first to comment