ಸಂಜು ವೆಡ್ಸ್ ಗೀತಾ 2

Movie Review: ಕಾಡುವ ಪ್ರೇಮಕಥೆ ಸಂಜು ವೆಡ್ಸ್ ಗೀತಾ 2

ಚಿತ್ರ: ಸಂಜು ವೆಡ್ಸ್ ಗೀತಾ 2
ನಿರ್ದೇಶನ: ನಾಗಶೇಖರ್
ನಿರ್ಮಾಣ: ಛಲವಾದಿ ಕುಮಾರ್
ತಾರಾಗಣ: ಶ್ರೀನಗರ ಕಿಟ್ಟಿ, ರಚಿತಾ ರಾಮ್, ಚೇತನ್ ಚಂದ್ರ, ರಂಗಾಯಣ ರಘು ಇತರರು
ರೇಟಿಂಗ್: 4/5

ರೇಷ್ಮೆ ಬೆಳೆಯುವ ಪರಿಸರದಲ್ಲಿ ಅರಳುವ ಪ್ರೇಮದ ಕಥೆಯ ಮೂಲಕ ಪ್ರೇಕ್ಷಕರನ್ನು ಕಾಡುವ ಚಿತ್ರವಾಗಿ ಸಂಜು ವೆಡ್ಸ್ ಗೀತಾ 2 ಈ ವಾರ ತೆರೆಗೆ ಬಂದಿದೆ.

ಚಿತ್ರ ರೇಷ್ಮೆ ನಾಡಾದ ಶಿಡ್ಲಘಟ್ಟದಲ್ಲಿ ನಡೆಯುವ ಪ್ರೇಮಕಥೆಯನ್ನು ಹೊಂದಿದೆ. ಬಡವನನ್ನು ಪ್ರೀತಿಸುವ ಆಗರ್ಭ ಶ್ರೀಮಂತ ಹಿನ್ನೆಲೆಯ ನಾಯಕಿ ಪ್ರೇಮವನ್ನು ಒಪ್ಪದೇ ಹೋದಾಗ ತನ್ನ ತಂದೆಯ ಜೊತೆಗೆ ನಿಷ್ಠುರ ಆಗುತ್ತಾಳೆ. ತನ್ನ ಗಂಡ ಶ್ರೀಮಂತನಾದ ಬಳಿಕ ಮನೆಗೆ ಹಿಂದಿರುಗುತ್ತೇನೆ ಎಂದು ಸವಾಲು ಹಾಕುತ್ತಾಳೆ. ಸವಾಲಿನಲ್ಲಿ ಗೆಲ್ಲುವ ನಾಯಕಿ ಗರ್ಭಿಣಿ ಆದಾಗ ತನ್ನ ತಂದೆಯ ಕೈತುತ್ತು ತಿನ್ನಬೇಕೆಂದು ತವರು ಮನೆಗೆ ಹೋಗುತ್ತಾಳೆ. ಆದರೆ ದ್ವೇಷ ಮರೆಯದ ತಂದೆ ಮಗಳಿಗೆ ಗರ್ಭಪಾತ ಮಾಡಿಸುತ್ತಾನೆ. ಇದು ನಾಯಕಿಗೆ ಮನಸ್ಸು ಘಾಸಿ ಮಾಡಿಸುತ್ತದೆ. ಮುಂದೆ ನಾಯಕಿ ಶ್ವಾಸಕೋಶದ ರೋಗಕ್ಕೆ ತುತ್ತಾಗುತ್ತಾಳೆ. ಸ್ವಿಜರ್ಲ್ಯಾಂಡ್ ಗೆ ದಂಪತಿಗಳು ಶ್ವಾಸಕೋಶ ಟ್ರಾನ್ಸ್ ಪ್ಲಾನ್ ಟೆಶನ್ ಮಾಡಿಸಲು ಹೋಗುತ್ತಾರೆ. ನಾಯಕಿ ಯಶಸ್ವಿಯಾಗಿ ಚಿಕಿತ್ಸೆ ಪಡೆಯುತ್ತಾಳೆಯೇ? ರೇಷ್ಮೆ ಮಾರುಕಟ್ಟೆಯನ್ನು ಸಾಗರದಾಚೆಗೆ ಕೊಂಡೊಯ್ಯುವ ನಾಯಕನ ಕನಸು ಈಡೇರಿತೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ನಾಯಕ ಹಾಗೂ ನಾಯಕಿಯ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಉತ್ತಮವಾಗಿ ನಟಿಸಿದ್ದಾರೆ. ವೈದ್ಯರ ಪಾತ್ರದಲ್ಲಿ ಚೇತನ್ ಚಂದ್ರ ಗಮನ ಸೆಳೆಯುತ್ತಾರೆ.

ಶ್ರೀಧರ್ ಸಂಭ್ರಮ್ ಸಂಗೀತದ ಗಮನ ಸೆಳೆಯುತ್ತದೆ. ಸತ್ಯ ಹೆಗಡೆ ಮನಮೋಹಕವಾಗಿ ಸ್ವಿಜರ್ಲ್ಯಾಂಡಿನ ಲೊಕೇಶನ್ ಸೆರೆ ಹಿಡಿದಿದ್ದಾರೆ. ನಿರ್ದೇಶಕರು ಶಿಡ್ಲಘಟ್ಟದ ರೈತರ ಸಂಕಷ್ಟವನ್ನು ಕಮರ್ಷಿಯಲ್ ಆಗಿ ಹೇಳುವ ನಿರೂಪಣೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಧುರ ಪ್ರೇಮ ಕಾವ್ಯವಾಗಿ ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!