ಮಕ್ಕಳಿಗೆ ಮನರಂಜನೆಯ ಮೂಲಕ ಪಾಠ ಮಾಡಿದಾಗ ಅದು ಕಲಿಕೆಗೆ ಸಹಾಯವಾಗುತ್ತದೆ ಎನ್ನುವ ಸಂದೇಶವನ್ನು ನಹಿ ಜ್ಞಾನೇನ ಸದೃಶಂ ಚಿತ್ರ ನೀಡುತ್ತದೆ.
ಸಿನಿಮಾ ಪ್ರೌಢಶಾಲೆಯ ಶಿಕ್ಷಣದ ಕಥಾ ಹಂದರವನ್ನು ಹೊಂದಿದೆ. ಗಣಿತ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಪಾಠ ಮಾಡದೆ, ಸಿನಿಮಾ ನೋಡಲು ಪ್ರೋತ್ಸಾಹಿಸುತ್ತಾರೆ. ಯಾವುದೇ ಪಾಠ ಮಾಡದೆ ಪೋಷಕರಿಗೆ ಹೋಂವರ್ಕ್ ನೀಡುತ್ತಾರೆ. ಇದರಿಂದ ಪೋಷಕರಿಂದ ಶಿಕ್ಷಕರು ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಮುಂದೆ ಶಿಕ್ಷಕರು ತನ್ನ ಮೇಲಿನ ಅಪಾರ್ಥವನ್ನು ದೂರ ಮಾಡಲು ಮಕ್ಕಳಿಗೆ ಎರಡು ದಿನದ ಟಾಸ್ಕ್ ನೀಡುತ್ತಾರೆ. ಮುಂದೆ ಆಟದಿಂದ ಪಾಠ ಎನ್ನುವ ಹಾಗೆ ಮಕ್ಕಳು ಟಾಸ್ಕ್ ಯಾವ ರೀತಿ ಮಾಡುತ್ತಾರೆ ಎನ್ನುವುದನ್ನು ಚಿತ್ರ ನಿರೂಪಿಸುತ್ತದೆ.
ಚಿತ್ರದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿರುವುದು ವಿಶೇಷ ಆಗಿದೆ. ನಿರ್ದೇಶನ ನಿರ್ಮಾಣ ಹಾಗೂ ನಟ ಆಗಿ ಕಾಣಿಸಿಕೊಂಡಿರುವ ರಾಮ್ ಅವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಪ್ರಮೋದ್ ಮರವಂತೆ ಅವರ ಸಾಹಿತ್ಯದ ಹಾಡುಗಳು ಗಮನ ಸೆಳೆಯುತ್ತವೆ. ಸಂಗೀತ ಸಂಯೋಜನೆ ಮಾಡಿರುವ ಅರ್ಜುನ್ ರಾಮ್ ತಮ್ಮ ಕೆಲಸದ ಮೂಲಕ ಗಮನ ಸೆಳೆಯುತ್ತಾರೆ. ಕಿರಣ್ ಅವರ ಛಾಯಾಗ್ರಹಣ ಚಿತ್ರಕ್ಕೆ ಉತ್ತಮವಾಗಿ ಕೆಲಸ ಮಾಡಿದೆ.
ಮಕ್ಕಳ ಮನೋವಿಕಾಸ ಹೇಗೆ ಆಗುತ್ತದೆ ಎನ್ನುವ ವಿಚಾರವನ್ನು ಚಿತ್ರದ ಮೂಲಕ ಹೇಳಲು ನಿರ್ದೇಶಕರು ಯತ್ನಿಸಿದ್ದಾರೆ. ಪೋಷಕರ ಮಕ್ಕಳು ರ್ಯಾಂಕ್ ಗಳಿಸುವ, ಲಕ್ಷಗಟ್ಟಲೆ ಹಣ ಸಂಪಾದಿಸುವ ಮನೋಭಾವವನ್ನು ನಿರ್ದೇಶಕರು ಬದಲಿಸಿ ಬೇರೊಂದು ದೃಷ್ಟಿಯಿಂದ ನೋಡುವಂತೆ ಮಾಡಿದ್ದಾರೆ.
_______
Be the first to comment