‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ನೋಡಿದವರಿಗೆ ಮೊದಲು ಅನ್ನಿಸುವುದು, ನಿರ್ದೇಶಕ ಸುಜಯ್ ರಾಜ್.ಬಿ. ಶೆಟ್ಟಿಯವರ ‘ಒಂದು ಮೊಟ್ಟೆಯ ಕಥೆ’ಯಿಂದ ಇನ್‍ಪ್ಲೂಯೆನ್ಸ್ ಆದಿದ್ದಾರೆಂಬುದು. ‘ಮೊಟ್ಟೆ’ ಚಿತ್ರದ ಮೂಲಕ ಶೈನಿಂಗ್(ತಲೆ ಅಲ್ಲ!) ಎಂದೆನಿಸಿಕೊಂಡ ರಾಜ್ ಮತ್ತು ಸುಜಯ್ ಜೋಡಿಯ ಕಾಮಿಡಿ ಬಹುಪಾಲು ವರ್ಕಔಟ್ ಆಗಿದೆ.
ನಿರ್ದೇಶಕ ಸುಜಯ್ ಶಾಸ್ತ್ರಿ ಸಿನಿಮಾ ಮಾಧ್ಯಮದ ಸಿದ್ಧ ಸೂತ್ರಗಳಿಗೆ ಬೀಗ ಹಾಕಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ಮಾಡಿದ್ದಾರೆ. ಬೆಳ್ಳಿ ತೆರೆಯನ್ನು ಸಂದೇಶ ಕೊಡುವುದಕ್ಕೊ, ಅಳಿಸುವುದಕ್ಕೊ ಬಳಸಿಕೊಳ್ಳದೇ ಕೇವಲ ಮನರಂಜನೆಗಷ್ಟೇ ಮೀಸಲಾಗಿರಿಸಿದ್ದಾರೆ. ಹಾಗಾಗಿ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ಅವರು ಮಾಡಿದ್ದು ಮೂರೇ ಮೂರು ಕೆಲ್ಸ.. ನಗಿಸೋದು, ನಗೀಸೋದು ಅಂಡ್ ನಗಿಸೋದು!
‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ’ ಒಂದು ಕಂಪ್ಲೀಟ್ ಎಂಟರ್‌ಟೇನರ್ ಚಿತ್ರವೆಂದು ಸಿನಿಮಾದ ಶುರುವಿನಲ್ಲೇ ನಿರ್ದೇಶಕರು ಹೇಳಿದ್ದರು. ಅವರ ಮಾತು ಅಕ್ಷರಶಃ ಸತ್ಯ ಎಂಬುದು ಪ್ರತೀ ಸೀನ್‍ನಲ್ಲೂ ಅರ್ಥವಾಗುತ್ತದೆ. ಹಾಗಿದ್ರೆ.. ಈ ‘ಗುಬ್ಬಿ’, ‘ಬ್ರಹ್ಮಾಸ್ತ್ರ’ ಎನೂ ಅಂತ ನೋಡೋಣ ಬನ್ನಿ.
ವೆಂಕಟ ಕೃಷ್ಣ ಗುಬ್ಬಿ ( ರಾಜ್ ಬಿ.ಶೆಟ್ಟಿ) ಒಂದೂವರೆ ಲಕ್ಷ ಸಂಬಳ ಪಡೆಯುವ ಸಾಫ್ಟ್‍ವೇರ್ ಎಂಜಿನಿಯರ್. ಆತನಿಗೆ ಮದುವೆ ಮಾಡಲು ಆತನ ತಂದೆ (ಮಂಜುನಾಥ್ ಹೆಗಡೆ) ಮತ್ತು ತಾಯಿ ( ಅರುಣಾ ಬಾಲರಾಜ್) ಹುಡುಗಿಯ ಹುಡುಕಾಟದಲ್ಲಿ ತೊಡಗಿರುತ್ತಾರೆ. ಆದರೆ, ಕಥಾ ನಾಯಕ ಗುಬ್ಬಿಗೆ ಲವ್ ಮಾಡಿಯೇ ಮದುವೆ ಆಗಬೇಕು ಎಂಬ ಆಸೆ. ಹಾಗಾಗಿ ಪಾಲಕರು ಹುಡುಕುವ ಪ್ರತಿ ಹುಡುಗಿಯನ್ನೂ ಅವನು ನಿರಾಕರಿಸುತ್ತಾನೆ. ಇಂತಹ ಸಮಯದಲ್ಲಿ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಆತನಿಗೆ ಹುಡುಗಿಯೊಬ್ಬಳ ಪರಿಚಯವಾಗಿ, ಇಷ್ಟವೂ ಆಗುತ್ತಾಳೆ. ಇನ್ನೇನು ನಿಶ್ಚಿತಾರ್ಥ ಆಗಬೇಕು ಎನ್ನುವಷ್ಟರಲ್ಲಿ ಅಡ್ಡಿ ಆತಂಕಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಆತ ಹೇಗೆ ದಾಟಿಕೊಳ್ಳುತ್ತಾನೆ ಮತ್ತು ಅವನ ಮದುವೆ ನಡೆಯುತ್ತದಾ ಎನ್ನುವುದೇ ಸಿನಿಮಾ. ಒಂದುರೀತಿಯಲ್ಲಿ ರಾಜ್ ಎಂಬ ನಟನಿಗೆ ಸೂಕ್ತವಾದ ಕಥೆಯನ್ನು ಮಾಡಿ ಗೆಲ್ಲುವ ಹಾದಿಯಲ್ಲಿದ್ದಾರೆ ಸಗಣಿ ಯಾನೆ ಸುಜಯ್.
ಯಾವುದೇ ಲಾಜಿಕ್ ಇಲ್ಲದೇ, ನಿರಾಯಾಸವಾಗಿ ನಗಿಸುತ್ತಾ ಕಥೆ ಹೇಳಿಕೊಂಡು ಹೋಗುತ್ತಾರೆ ನಿರ್ದೇಶಕರು. ಆದ್ದರಿಂದ ಲಾಜಿಕ್ ಹುಡುಕೋದ್ರಿಂದ ನಿಮ್ಮ ನಗುವಿಗೆ ಬ್ರೇಕ್ ಬಿಳೋದು ಗ್ಯಾರೆಂಟಿ. ಸುಜಯ್ ಸೃಷ್ಠಿಸಿದ ಪ್ರತಿ ಪಾತ್ರಗಳೂ ಕೂಡ ಅವರ ಕಲ್ಪನೆಗೆ ಸಾಥ್ ನೀಡಿವೆ. ಕನ್ನಡ ಚಿತ್ರಗಳಲ್ಲಿ ಇಂತಹ ಕಾಮಿಡಿ ದೃಶ್ಯಗಳು ಈಗಾಗಲೇ ಬಂದಿದೆ ಅಲ್ವಾ? ಎಂದು ಕೆಲವೊಂದು ಸನ್ನಿವೇಶಗಳನ್ನು ನೋಡಿದರೆ ಅನ್ನಿಸುತ್ತದೆ. ಆದರೆ, ರಾಜ್ ಬಿ ಶೆಟ್ಟಿ, ಸುಜಯ್ ಶಾಸ್ತ್ರಿ, ಪ್ರಮೋದ್ ಶೆಟ್ಟಿ ನಟನೆಯಿಂದ ಅವುಗಳನ್ನು ಮರೆಸುತ್ತಾರೆ. ಅದಲ್ಲವೇ ನಟನೆಯ ತಾಕತ್ತು.
ಸಿನಿಮಾಟೋಗ್ರಫರ್ ಸುನೀತ್ ಹಲಗೇರಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಒದಗಿಸಿದ ಜಾಗದಲ್ಲಿಯೇ ಉತ್ತಮವಾಗಿ ಕೆಲಸ ಮಾಡಿದ್ಧಾರೆ. ಹಲಗೇರಿ ಇನ್ನೂ ಉತ್ತಮ ಅವಕಾಶ ಸಿಕ್ಕರೆ ಹಲಿಗೆ ಹೋಡಿಯೋದು ಪಕ್ಕಾ. ಮಣಿಕಾಂತ್ ಕದ್ರಿ ಸಂಯೋಜಿಸಿರುವ ಹಾಡುಗಳು ಕನ್ನಡಕ್ಕೆ ಒಂದು ರೀತಿಯಲ್ಲಿ ಹೊಸ ಪ್ರಯತ್ನ. ಕಾಮಿಡಿ ಜಾನರ್‍ನ ಚಿತ್ರಕ್ಕೆ ಸಂಗೀತ ಸಂಯೋಜನೆ ಸುಲಭದ ಮಾತಲ್ಲ. ಆದರೆ ಕದ್ರಿ ಮತ್ತೊಮ್ಮೆ ತಮ್ಮನ್ನು ಪ್ರೂವ್ ಮಾಡಿಕೊಂಡಿದ್ದಾರೆ. ಸುಜಯ್ ಎಡಿಟರ್ ಎಸ್.ಶ್ರೀಕಾಂತ್‍ಗೆ ಒಂದಿಷ್ಟು ಪ್ರೀಡಂ ಕೊಟ್ಟಿದ್ದರೆ ‘ಗುಬ್ಬಿ’ ಹದ್ದಿನಂತೆ ರೆಕ್ಕೆ ಬಿಚ್ಚಿ ಹಾರುತಿತ್ತು. ಒಟ್ಟಿನಲ್ಲಿ ‘ನೋ ಲಾಜಿಕ್, ಒನ್ಲೀ ಕಾಮಿಡಿ ಮ್ಯಾಜಿಕ್’ ಚಿತ್ರ ಬಯಸುವವರಿಗೆ ‘ಗುಬ್ಬಿ’ ನಿರಾಸೆ ಮಾಡೋದಿಲ್ಲ. ಪ್ರಕೃತಿ ನೆರೆ ಹೆಸರಲ್ಲಿ ಮನುಕುಲದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿರುವುದರಿಂದ, ಸುಜಯ್&ರಾಜ್ ಎಫರ್ಟ್ ನೆರೆಯಲ್ಲಿ ಕೊಚ್ಚಿ ಹೋಗದೇ ಇದ್ದರೆ ಸಾಕು. ಅಲ್ಲವೇ!? .
@bcinemas.in
Pingback: DevSecOps Solutions
Pingback: buku tafsir mimpi