ಚಿತ್ರ ವಿಮರ್ಶೆ :ಡಿಫೆರೆಂಟ್ ದಮಯಂತಿ!

ಚಿತ್ರ ವಿಮರ್ಶೆ :ಡಿಫೆರೆಂಟ್ ದಮಯಂತಿ!

ರೇಟಿಂಗ್ [ 3/5]

ಚಿತ್ರ : ‘ದಮಯಂತಿ’

ನಿರ್ದೇಶನ : ನವರಸನ್

ತಾರಾಗಣದಲ್ಲಿ : ರಾಧಿಕಾ ಕುಮಾರಸ್ವಾಮಿ ಕಾಮಿಡಿ! ಗಿರಿ, ತಬಲಾ ನಾಣಿ, ಮಜಾ ಟಾಕೀಸ್ ಪವನ್, ಮಿತ್ರ, ಸಾಧುಕೋಕಿಲ,ಅನುಷಾ.

===================================

ತಮ್ಮ ಹೆಸರಿನಲ್ಲೇ ನವರಸವನ್ನು ತುಂಬಿಕೊಂಡಿದ್ದ ನಟ/ನಿರ್ದೇಶಕ ನವರಸನ್ ‘ದಮಯಂತಿ’ ಚಿತ್ರ ಅನೌನ್ಸ್ ಮಾಡಿದಾಗ ಸಹಜವಾಗಿಯೇ ಕುತೂಹಲವಿತ್ತು. ಈಗ ಎಲ್ಲಾ ಕತೂಹಲಗಳಿಗೆ ತೆರೆಬಿದ್ದಿದೆ. ನವರಸನ್ ಬಿಡಗಡೆಗೂ ಮುನ್ನ ಬಿಟ್ಟಿದ್ದ ಟ್ರೈಲರ್ ನೋಡಿದವರು ‘ಆಪ್ತಮಿತ್ರ’ ಚಿತ್ರದ ಛಾಯೆ ಚಿತ್ರದಲ್ಲಿರುವುದನ್ನು ಊಹಿಸಿದ್ದು ಸುಳ್ಳಳ್ಳ. ಆದರೆ, ಚಿತ್ರ ನೋಡಿದರೆ ದೆವ್ವದ ಕಥೆಯ ಜೊತೆ ರಿಯಾಲಿಟೀ ಶೋದ ಟ್ವಿಸ್ಟ್ ಸೇರಿಕೊಂಡು ಚಿತ್ರ ಬೆರೆಯದೇ ಆಗಿ ಕಾಣುತ್ತದೆ.

ದಮಯಂತಿಯಾಗಿ ರಾಧಿಕಾರವರ ಮಾತಿನಲ್ಲಿ ಮಹಾರಾಣಿಯ ಗತ್ತು-ಗಾಂಭೀರ್ಯ. ಮೈಮೇಲೆ ಮಿಂಚುವ ಒಡವೆ, ವೈಢೂರ್ಯ. ಚದುರಿದ ಕೇಶರಾಶಿ, ಕಣ್ಣಲ್ಲೇ ಬೆಂಕಿಯ ಪ್ರಖರತೆ. ಕಡುವೈರಿಯ ವಿರುದ್ಧ ಕೋಪ-ತಾಪ. ಆದರೆ, ಮಿಸುಕಾಡಲು ಬಾರದಂತೆ ಹೆಣೆದ ಅಷ್ಟದಿಗ್ಬಂಧನ. ಇಷ್ಟೆಲ್ಲ ಒಳಗೊಂಡಿರುವ ‘ದಮಯಂತಿ’ಯದ್ದು ಒಂದು ಸೇಡಿನ ಕಥೆ. ಈ ರೀತಿಯ ಹಳಸಲು ಸಬ್ಜೆಕ್ಟ್‍ಗೆ ರಿಯಾಲಿಟೀ ಶೋನ ಟಚ್‍ಕೊಟ್ಟರೆ ಜನ ಸಿನ್ಮಾ ನೊಡಿಯಾರು ಅನ್ನುವ ನವರಸ್‍ನ ಅವರ ಕಾನ್ಫಿಡೆನ್ಸ್ ಮೆಚ್ಚಬೆಕು.

ಕಣ್ಣೆದುರೇ ತನ್ನವರನ್ನು ಬಲಿಪಡೆದ ವೈರಿಯ ನಿರ್ನಾಮ ಮಾಡಬೇಕು ಎಂದು ಪ್ರೇತಾತ್ಮವಾಗಿ ದಿಗ್ಬಂಧನದಲ್ಲೇ ಹಲ್ಲು ಮಸೆಯುತ್ತಿರುತ್ತಾಳೆ ದಮಯಂತಿ. ಹೀಗಿರುವಾಗಲೇ ರಿಯಾಲಿಟಿ ಶೋ ಸ್ಪರ್ಧಿಗಳ ಎಂಟ್ರಿಯೂ ಆಗುತ್ತದೆ. ಅರೇ.. ಎಲ್ಲಿಯ ದಮಯಂತಿ, ಏನಿದು ರಿಯಾಲಿಟಿ ಶೋ? ಅದೆಲ್ಲದಕ್ಕೂ ಚಿತ್ರದಲ್ಲೇ ಉತ್ತರ ಸಿಗಲಿದೆ. ಉತ್ತರ ಸಿಕ್ಕಮೇಲೆ ಬಾಯಿ ಆಕಳಿಸಿಕೊಂಡು ‘ಇಷ್ಟೇನಾ’ ಅಂತಂದು ನೋಡುಗ ನವರಸನ್‍ನ ಟೇಸ್ಟ್ ಬಗ್ಗೆ ಬೇಜಾರು ಪಟ್ಟುಕೊಳ್ಳದ ಹಾಗೆ ನರೇಶನ್ ಇದೆ. ದೆವ್ವದ ಚಿತ್ರ, ಸ್ವಲ್ಪಾನಾದ್ರೂ ಭಯವನ್ನು ಅನುಭವಿಸೋಣವೆಂದು ನಿವೇನಾದರು ನೋಡುಲು ಹೋದರೆ ಚಿತ್ರದ ಫಸ್ಟ್ ಹಾಫ್ ಕೇವಲ ಕಾಮಿಡಿ! ಗಿರಿ, ತಬಲಾ ನಾಣಿ, ಮಜಾ ಟಾಕೀಸ್ ಪವನ್, ಮಿತ್ರ, ಸಾಧುಕೋಕಿಲ ಎಲ್ಲರೂ ಸೇರಿ ನೋಡುಗ ಕಾತುರದಿಂದ ಕಾಯುತ್ತಿದ್ದ ದಮಯಂತಿಯನ್ನು ನೋಡುವ ಕೌತುಕವನ್ನು ತಕ್ಕ ಮಟ್ಟಿಗೆ ಪೋಸ್ಟ್‍ಪೋನ್ ಮಾಡುತ್ತಾರೆ. ಕಾಮಿಡಿ ಪಂಚ್‍ಗಳನ್ನು ನೋಡಿದರೆ ನವರಸನ್‍ಗೆ ಹಾಸ್ಯರಸ ಹೆಚ್ಚು ಒಗ್ಗುತ್ತದೆ ಎಂಬುದು ಅರ್ಥವಾಗುತ್ತದೆ.

ರಾಧಿಕಾರಿಗೆ ಕಮ್‍ಬ್ಯಾಕ್ ಚಿತ್ರವಾಗಿದ್ದ ‘ದಮಯಂತಿ’ ನಿಜಕ್ಕೂ ಪರ್‍ಫಾಮೆನ್ಸ್‍ಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಕೊಟ್ಟ ಪಾತ್ರವನ್ನು ರಾಧಿಕಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು, ಗಣೇಶ್ ನಾರಾಯಣ್ ಹಿನ್ನಲೇ ಸಂಗೀತ ಸಾಕಷ್ಟು ಚಿತ್ರಗಳನ್ನು ನೆನಪಿಸಿದರೆ ಅದು ನಿಮ್ಮ ತಪಲ್ಲ. ಪಿಕೆಎಚ್ ದಾಸ್ ನವರಸ್‍ನ ಅವರ ಪ್ರತಿಭೆಯನ್ನೂ ಮೀರಿ ಶ್ರಮ ಹಾಕಿರೋದು ಚಿತ್ರದಲ್ಲಿ ಕಾಣುತ್ತದೆ. ಒಟ್ಟಿನಲ್ಲಿ, ವೀಕ್‍ಎಂಡ್‍ನಲ್ಲಿ ಬ್ಯೂಟಿಫುಲ್ ದೆವ್ವದ ಜೊತೆ, ಒಂದಿಷ್ಟು ಕಚಗುಳಿಯಿಡುವ ಹಾಸ್ಯಕ್ಕಾಗಿ ‘ದಮಯಂತಿ’ಯನ್ನು ಮೀಟ್ ಮಾಡಬಹುದು. ನವರಸನ್ ಅಲಲ್ಲಿ ಎಡವಿದ್ದರೂ ಸಾಕಷ್ಟು ಡಿಫೆರೆಂಟ್ ಆದ ಎಪ್ರೋಚ್ ಒಂದನ್ನು ಮಾಡಿದ್ಧಾರೆ. ದೆವ್ವದ ಕಥೆಯನ್ನು ಕೂಡ ಡಿಫೆರೆಂಟ್ ಆಗಿ ಪ್ರೆಸೆಂಟ್ ಮಾಡಿರುವ ನವರಸನ್ ಪ್ರಯತ್ನ ‌ಶ್ಲಾಘನೀಯ.

@ಬಿಸಿನಿಮಾಸ್ ವಿಮರ್ಶೆ.

This Article Has 1 Comment
  1. Pingback: sexual selection graph

Leave a Reply

Your email address will not be published. Required fields are marked *

Translate »
error: Content is protected !!